Don't Miss!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- News
Breaking: ಭವಾನಿ ರೇವಣ್ಣಗೆ ಹಾಸನದಿಂದ ಟಿಕೆಟ್ ನೀಡುವಂತೆ ಪ್ರತಿಭಟನೆ
- Technology
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರತಿದಿನ ಮಿಸ್ ಮಾಡಿಕೊಳ್ಳುತ್ತೇನೆ ಅಮ್ಮ: ಶ್ರೀದೇವಿ ಜನ್ಮದಿನಕ್ಕೆ ಮಗಳು ಜಾಹ್ನವಿಯ ಭಾವುಕ ಪೋಸ್ಟ್
ಬಾಲಿವುಡ್ 'ಸುರಸುಂದರಿ', 'ಸೌಂದರ್ಯದ ಸಿರಿದೇವಿ' ನಟಿ ಶ್ರೀದೇವಿ ಅವರ (ಆಗಸ್ಟ್ 13) ಜನ್ಮದಿನ. 57ನೇ ಜನ್ಮದಿನಾಚರಣೆಯ ಈ ದಿನ ಶ್ರೀದೇವಿ ದೈಹಿಕವಾಗಿ ಇಲ್ಲದಿದ್ದರೂ ಸಿನಿಮಾಗಳ ಮೂಲಕ ಅಭಿಮಾನಿಗಳ ಮನದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಹುಟ್ಟುಹಬ್ಬ ಈ ಸವಿನೆನಪಿನ ದಿನ ಅಭಿಮಾನಿಗಳು ಮತ್ತು ಸಿನಿ ಗಣ್ಯರು ಸೌಂದರ್ಯ ದೇವಿಯನ್ನು ಸ್ಮರಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಶ್ರೀದೇವಿ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿ ಶ್ರೀದೇವಿ ಜೊತೆಗಿನ ನೆನಪನ್ನು ಹಂಚಿಕೊಳ್ಳುತ್ತಿದ್ದಾರೆ. ಶ್ರೀದೇವಿ ತನ್ನ ಕುಟುಂಬ, ಸ್ನೇಹಿತರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿ 3 ವರ್ಷಗಳು ಕಳೆದಿವೆ. ಈ ವರ್ಷ ಶ್ರೀದೇವಿ ಇಲ್ಲದೆ, ಅವರ ನೆನಪಿನಲ್ಲೇ ಕಾಲಕಳೆಯುತ್ತಿದ್ದಾರೆ ಇಬ್ಬರು ಮುದ್ದಾದ ಮಕ್ಕಳು.
ಬೋನಿ
ಕಪೂರ್
ಜೊತೆ
8
ತಿಂಗಳು
ಮಾತು
ಬಿಟ್ಟಿದ್ದ
ಶ್ರೀದೇವಿ;
ಕಾರಣವೇನು?
ತಾಯಿ ಜೊತೆಗಿನ ಸುಂದರ ನೆನಪುಗಳನ್ನು ಸದಾ ಹಂಚಿಕೊಳ್ಳುತ್ತಿರುತ್ತಾರೆ ಇಬ್ಬರು ಮಕ್ಕಳಾದ ಜಾಹ್ನವಿ ಮತ್ತು ಖುಷಿ. ಅಮ್ಮನ ಫೋಟೋ ಶೇರ್ ಮಾಡಿ ಭಾವುಕ ಪೋಸ್ಟ್ ಶೇರ್ ಮಾಡುತ್ತಿರುತ್ತಾರೆ, ಪ್ರತಿದಿನ ತಾಯಿಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳುತ್ತಿರುತ್ತಾರೆ.
ಅಮ್ಮನ ಹುಟ್ಟುಹಬ್ಬದ ಸವಿನೆನಪಿನ ಈ ದಿನ ಜಾಹ್ನವಿ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ಅಮ್ಮ ಬೆಚ್ಚಗಿನ ಅಪ್ಪುಗೆಯ ಫೋಟೋ ಶೇರ್ ಮಾಡುವ ಮೂಲಕ ತಾಯಿಗೆ ಪ್ರೀತಿಯ ವಿಶ್ ಮಾಡಿದ್ದಾರೆ. "ಹುಟ್ಟುಹಬ್ಬ ಶುಭಾಶಯಗಳು ಅಮ್ಮ. ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಎಲ್ಲವೂ ನಿಮಗಾಗಿ, ಯಾವಾಗಲೂ, ಪ್ರತಿದಿನ. ಲವ್ ಯೂ ಅಮ್ಮ" ಎಂದು ಬರೆದುಕೊಂಡಿದ್ದಾರೆ.
ಇನ್ನು ಶ್ರೀದೇವಿ ಎರಡನೇ ಪುತ್ರಿ ಖುಷಿ ಕಪೂರ್ ತಂದೆ ಬೋನಿ ಕಪೂರ್ ಜೊತೆಗಿನ ತಾಯಿಯ ರೊಮ್ಯಾಂಟಿಕ್ ಫೋಟೋ ಶೇರ್ ಮಾಡುವ ಮೂಲಕ ಅಮ್ಮನಿಗೆ ವಿಶ್ ಮಾಡಿದ್ದಾರೆ. "ಲವ್ ಯೂ ಅಮ್ಮ" ಎಂದು ಬರೆದುಕೊಂಡಿದ್ದಾರೆ. ಇಬ್ಬರು ಮಕ್ಕಳ ಪ್ರೀತಿಯ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಹಾಕಿದ್ದಾರೆ.

ನಟಿ ಶ್ರೀದೇವಿ 201ರಲ್ಲಿ ದುಬೈನ ಹೋಟೆಲ್ ನಲ್ಲಿ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಶ್ರೀದೇವಿ ದಿಢೀರ್ ಸಾವು ಇಡೀ ಭಾರತೀಯ ಚಿತ್ರರಂಗಕ್ಕೆ ಬರಸಿಡಿಲು ಬಡಿದಂತೆ ಆಗಿತ್ತು. ಇವತ್ತಿಗೂ ಶ್ರೀದೇವಿ ನಿಧನವನ್ನು ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಶ್ರೀದೇವಿ ಸಾವು ಅನೇಕ ಅನುಮಾನಗಳನ್ನು ಹುಟ್ಟುಹಾಕಿತ್ತು. ಸೌಂದರ್ಯ ದೇವಿಯ ಸಾವು ಇವತ್ತಿಗೂ ನಿಗೂಢವಾಗಿದೆ.
ಇನ್ನು ಶ್ರೀದೇವಿ ಮೊದಲ ಪುತ್ರಿ ಜಾಹ್ನವಿ ಬಣ್ಣದ ಲೋಕದಲ್ಲಿ ಸಕ್ರೀಯರಾಗಿದ್ದಾರೆ. ತಾಯಿ ನಿಧನಹೊಂದಿದ ವರ್ಷವೇ ಮಗಳು ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ಧಡಕ್ ಸಿನಿಮಾ ಮೂಲಕ ಬೆಳ್ಳಿ ಪರದೆ ಮೇಲೆ ಮಿಂಚಿದರು. ಮಗಳನ್ನು ತೆರೆಮೇಲೆ ನೋಡಬೇಕು ಎನ್ನುವುದು ಶ್ರೀದೇವಿ ಅವರ ದೊಡ್ಡ ಕನಸಾಗಿತ್ತು. ಆದರೆ ಆ ಕನಸು ನನಸಾಗುವ ಮೊದಲೇ ಇಹಲೋಕ ತ್ಯಾಜಿಸಿದರು.
ಬಳಿಕ ಜಾಹ್ನವಿ ವೆಬ್ ಸೀರಿಸ್‌ನಲ್ಲಿ ನಟಿಸುವ ಮೂಲಕ ಒಟಿಟಿಗೆ ಎಂಟ್ರಿ ಕೊಟ್ಟರು. ಗಂಜನ್ ಸಕ್ಸೇನಾ, ರೂಹಿ ಸಿನಿಮಾಗಳಲ್ಲಿ ಮಿಂಚಿರುವ ಜಾಹ್ನವಿ ಸದ್ಯ ದೋಸ್ತಾನ-2, ಗುಡ್ ಲಕ್ ಜೆರ್ರಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ದಕ್ಷಿಣ ಭಾರತೀಯ ಸಿನಿಮಾರಂಗದ ಕಡೆ ಬರ್ತಿದ್ದಾರೆ ಎನ್ನುವ ಸುದ್ದಿಯೂ ಆಗಾಗಾ ಕೇಳಿಬರುತ್ತಿರುತ್ತೆ. ಆದರೆ ಯಾವಾಗ? ಯಾವ ಸಿನಿಮಾ ಮೂಲಕ ಬರ್ತಾರೆ ಎಂದು ಕಾದುನೋಡಬೇಕು.