Just In
Don't Miss!
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- News
ಮುಡಾ ನಿವೇಶನಗಳ ಅಭಿವೃದ್ಧಿಗೆ ಒನ್ ಟೈಂ ಸೆಟ್ಲಮೆಂಟ್
- Automobiles
ಬಿಡುಗಡೆಗೆ ಸಜ್ಜಾಗುತ್ತಿದೆ 2021ರ ಮಾರುತಿ ಎಕ್ಸ್ಎಲ್5 ಕಾರು
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಯನತಾರ ಚಿತ್ರದ ರೀಮೇಕ್‌ನಲ್ಲಿ ಜಾಹ್ನವಿ ಕಪೂರ್, ಪಂಜಾಬ್‌ನಲ್ಲಿ ಶೂಟಿಂಗ್
ದಕ್ಷಿಣ ಭಾರತದ ಹಿಟ್ ಚಿತ್ರಗಳನ್ನು ರೀಮೇಕ್ ಮಾಡುವ ಸಂಪ್ರದಾಯವನ್ನು ಬಾಲಿವುಡ್ ಮುಂದುವರಿಸಿದೆ. ತಮಿಳಿನಲ್ಲಿ ನಯನತಾರಾ ನಟಿಸಿದ್ದ ಸೂಪರ್ ಹಿಟ್ ಚಿತ್ರ ಈಗ ಹಿಂದಿಯಲ್ಲಿ ಮೂಡಿಬರ್ತಿದ್ದು, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
'ಗುಡ್ ಲಕ್ ಜೆರ್ರಿ' ಚಿತ್ರಕ್ಕೆ ಹೆಸರಿಡಲಾಗಿದ್ದು, ಜಾಹ್ನವಿ ಕಪೂರ್ ಫಸ್ಟ್ ಲುಕ್ ಸಹ ಬಿಡುಗಡೆಯಾಗಿದೆ. ಆನಂದ್ ಎಲ್ ರೈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಪಂಜಾಬ್‌ನಲ್ಲಿ ಸಿನಿಮಾ ಅಧಿಕೃತವಾಗಿ ಚಿತ್ರೀಕರಣ ಶುರು ಮಾಡಿದೆ. ಜಾಹ್ನವಿ ಕಪೂರ್ ಫಸ್ಟ್ ಲುಕ್ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.
ನಾಯಕಿಯರಿಗೆ ಹೆಚ್ಚು ಪ್ರಾಮುಖ್ಯತೆ ಇರಲ್ಲ ಎಂದು ತೆಲುಗು ಸಿನಿಮಾ ತಿರಸ್ಕರಿಸಿದ ನಟಿ ಜಾಹ್ನವಿ
ಅಂದ್ಹಾಗೆ, ಗುಡ್ ಲುಕ್ ಜೆರ್ರಿ ಸಿನಿಮಾ ತಮಿಳಿನ ಕೋಲಮಾವು ಕೋಕಿಲಾ ಚಿತ್ರದ ರೀಮೇಕ್. ನಯನತಾರಾ ಪಾತ್ರದಲ್ಲಿ ಜಾಹ್ನವಿ ನಟಿಸುತ್ತಿದ್ದು, ಆನಂದ್ ಎಲ್ ರೈ ತಮ್ಮ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಇಂದಿನಿಂದ ಶೂಟಿಂಗ್ ಆರಂಭವಾಗಿದ್ದು, ಒಂದೇ ಶೆಡ್ಯೂಲ್‌ನಲ್ಲಿ ಸುಮಾರು 45 ದಿನಗಳ ಕಾಲ ಚಿತ್ರೀಕರಣ ಮಾಡಲು ನಿರ್ಧರಿಸಲಾಗಿದೆ. ಸಿದ್ದಾರ್ಥ್ ಸೇನಾಗುಪ್ತಾ ಈ ಚಿತ್ರ ನಿರ್ದೇಶಿಸುತ್ತಿದ್ದು, ಮಾರ್ಚ್ ತಿಂಗಳವರೆಗೂ ಶೂಟಿಂಗ್ ನಡೆಯಲಿದೆ.
ಜಾಹ್ನವಿ ಕಪೂರ್ ಜೊತೆಯಲ್ಲಿ ದೀಪಕ್ ಡೊಬ್ರಿಯಲ್, ಮೀಟಾ ವಶಿಶ್ತ್, ನೀರಜ್ ಸೂದ್ ಮತ್ತು ಸುಶಾಂತ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ ಬೋಲ್ಡ್ ಲುಕ್ ಗೆ ಅಭಿಮಾನಿಗಳು ಫಿದಾ
ಇದರ ಜೊತೆಗೆ ಜಾಹ್ನವಿ ಕಪೂರ್ ಇನ್ನು ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಯಕಾರ್ತಿಕ್ ಆರ್ಯನ್, ಲಕ್ಷ್ಯಾ ನಟಿಸುತ್ತಿರುವ 'ದೋಸ್ತಾನ-2' ಸಿನಿಮಾದಲ್ಲಿ ಜಾಹ್ನವಿ ಅಭಿನಯಿಸುತ್ತಿದ್ದಾರೆ. ರಾಜ್ ಕುಮಾರ್ ರಾವ್ ನಟನೆ 'ರೂಹಿ ಅಫ್ಜಾನಾ' ಚಿತ್ರದಲ್ಲಿ ಇರಲಿದ್ದಾರೆ.