For Quick Alerts
  ALLOW NOTIFICATIONS  
  For Daily Alerts

  ನಟಿ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಖ್ಯಾತ ಚಿತ್ರಸಾಹಿತಿ

  |

  ಬಾಲಿವುಡ್‌ನ ಗೌರವಾನ್ವಿತ ಚಿತ್ರಕತೆಗಾರ, ಸಾಹಿತಿ ಜಾವೇದ್ ಅಖ್ತರ್, ನಟಿ ಕಂಗನಾ ರಣೌತ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

  ಕಂಗನಾ ರಣೌತ್, ಬಾಲಿವುಡ್‌ನ ಹಲವು ಖ್ಯಾತ ನಾಮರ ವಿರುದ್ಧ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅವರಲ್ಲಿ ಜಾವೇದ್ ಅಖ್ತರ್ ಕುರಿತಾಗಿ ಸಹ ಮಾತನಾಡಿದ್ದರು. ಆದರೆ ಈಗ ಅದು ಅವರಿಗೆ ಮುಳುವಾಗುವ ಸಾಧ್ಯತೆ ಇದೆ.

  ವೆಬ್ ಸರಣಿ 'ಮಿರ್ಜಾಪುರ್' ಮೇಲೆ ಕಂಗನಾ ಕೆಂಗಣ್ಣು

  ನಟಿ ಕಂಗನಾ ರಣೌತ್ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಜಾವೇದ್ ಅಖ್ತರ್ ದಾಖಲಿಸಿದ್ದು, ಈ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಸಂಧಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೆ ಕಂಗನಾ, ಜಾವೇದ್ ಅಖ್ತರ್ ಕುರಿತು ಏನು ಹೇಳಿದ್ದರು?

  ಹೃತಿಕ್ ಅನ್ನು ಕ್ಷಮೆ ಕೇಳುವಂತೆ ಹೇಳಿದ್ದರು ಎಂದ ಕಂಗನಾ

  ಹೃತಿಕ್ ಅನ್ನು ಕ್ಷಮೆ ಕೇಳುವಂತೆ ಹೇಳಿದ್ದರು ಎಂದ ಕಂಗನಾ

  ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಟಿ ಕಂಗನಾ, ಹೃತಿಕ್ ರೋಶನ್ ಹಾಗೂ ತಮ್ಮ ನಡುವಿನ ವಿವಾದದ ಬಗ್ಗೆ ಜಾವೇದ್ ಅಖ್ತರ್ ನನ್ನನ್ನು ಮನೆಗೆ ಕರೆಸಿ ಬೆದರಿಕೆ ಹಾಕಿದ್ದರು, ಹೃತಿಕ್ ಬಳಿ ಕ್ಷಮಾಪಣೆ ಕೋರುವಂತೆ ಹೇಳಿದ್ದರು ಎಂದಿದ್ದರು. ಇದು ಜಾವೇದ್ ಅಖ್ತರ್ ಅನ್ನು ಕೆರಳಿಸಿದೆ.

  ಕಂಗನಾ ಮತ್ತು ಸಹೋದರಿಗೆ ಮತ್ತೊಂದು ಕಂಟಕ: ಮತ್ತೊಂದು ತನಿಖೆಗೆ ಕೋರ್ಟ್ ಆದೇಶ

  ನೀನು ಆತ್ಮಹತ್ಯೆ ಮಾಡಿಕೊಳ್ಳುತ್ತೀಯಾ ಎಂದಿದ್ದರು ಜಾವೇದ್: ಕಂಗನಾ

  ನೀನು ಆತ್ಮಹತ್ಯೆ ಮಾಡಿಕೊಳ್ಳುತ್ತೀಯಾ ಎಂದಿದ್ದರು ಜಾವೇದ್: ಕಂಗನಾ

  'ಜಾವೇದ್ ಅಖ್ತರ್ ಒಮ್ಮೆ ನನ್ನನ್ನು ತಮ್ಮ ಮನೆಗೆ ಕರೆದಿದ್ದರು. 'ಹೃತಿಕ್ ರೋಶನ್, ರಾಕೇಶ್ ರೋಶನ್ ಅವರುಗಳು ಬಹಳ ದೊಡ್ಡ ವ್ಯಕ್ತಿಗಳು, ನಿನ್ನ ಹಾಗೂ ಹೃತಿಕ್ ಸಂಬಂಧದ ವಿಷಯವನ್ನು ದೊಡ್ಡದು ಮಾಡಬೇಡ, ಹೃತಿಕ್ ಬಳಿ ಕ್ಷಮಾಪಣೆ ಕೇಳು, ಇಲ್ಲವಾದರೆ ನೀನು ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪುತ್ತೀಯಾ ಎಂದು ಹೇಳಿದ್ದರೆಂದು ಸಂದರ್ಶನದಲ್ಲಿ ಹೇಳಿದ್ದರು.

  ದೀರ್ಘ ಹೋರಾಟವಾದರೂ ಪರವಾಗಿಲ್ಲ ಎಂದಿರುವ ಜಾವೇದ್

  ದೀರ್ಘ ಹೋರಾಟವಾದರೂ ಪರವಾಗಿಲ್ಲ ಎಂದಿರುವ ಜಾವೇದ್

  ಸಾಮಾನ್ಯವಾಗಿ ಇಂಥಹಾ ಆರೋಪಗಳಿಗೆ ಹೆಚ್ಚು ಪ್ರತಿಕ್ರಿಯಿಸದ ಜಾವೇದ್ ಆದರೆ ಕಂಗನಾ ರಣೌತ್ ಅವರ ಆರೋಪದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡಿರುವ ಜಾವೇದ್, ಈ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳುವುದಿಲ್ಲ, ಎಷ್ಟು ದೀರ್ಘವಾದ ಹೋರಾಟವಾದರೂ ಸಹಿ ತಯಾರಿದ್ದೇನೆ ಎಂದಿದ್ದಾರೆ.

  ಅಪರೂಪಕ್ಕೆ ಸಹನಟಿಯ ಹೊಗಳಿದ ಕಂಗನಾ, ಅಚ್ಚರಿ ವ್ಯಕ್ತಪಡಿಸಿದ ನೆಟ್ಟಿಗರು

  ACT 1978 : 60 ಲಕ್ಷದ ಸೆಟ್ ಹಾಕಿದ್ದು ನೋಡಿ ಪುನೀತ್ ರಾಜ್ ಕುಮಾರ್ ಖುಷಿ ಪಟ್ಟಿದ್ರು | Sanchari Vijay | Puneeth
  ಮುಂಬೈ ಪೊಲೀಸರಿಂದ ನೊಟೀಸ್

  ಮುಂಬೈ ಪೊಲೀಸರಿಂದ ನೊಟೀಸ್

  ದ್ವೇಷ ಹರಡಿಸುವ, ಹಿಂಸೆಗೆ ಉತ್ತೇಜನ ನೀಡುವ ಟ್ವೀಟ್ ಮಾಡಿದ ಆರೋಪದ ಮೇಲೆ ಕಂಗನಾ ರಣೌತ್ ಹಾಗೂ ಅವರ ಸಹೋದರಿ ರಂಗೋಲಿ ವಿರುದ್ಧ ಮುಂಬೈ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿದ್ದು, ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಸಹ ನೀಡಿದ್ದಾರೆ.

  English summary
  Writer Javed Akhtar files defamation case against Kangana Ranaut for telling lie about him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X