»   » ಸೆಲ್ಫೀಲಿ ಬಿಜಿಯಾಗಿದ್ದ ಪೂಜಾರಿ ಮುಖಕ್ಕೆ ಮಂಗಳಾರತಿ ಮಾಡಿದ ಜಯಾ ಬಚ್ಚನ್

ಸೆಲ್ಫೀಲಿ ಬಿಜಿಯಾಗಿದ್ದ ಪೂಜಾರಿ ಮುಖಕ್ಕೆ ಮಂಗಳಾರತಿ ಮಾಡಿದ ಜಯಾ ಬಚ್ಚನ್

By: ಫಿಲ್ಮಿಬೀಟ್ ಡೆಸ್ಕ್
Subscribe to Filmibeat Kannada

ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ... ಬೆಣ್ಣೆಯಲ್ಲಿ ಕೂದಲು ತೆಗೆದ ಹಾಗೆ ಮಾತನಾಡುವವರಲ್ಲ ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್. ಅವರದ್ದೇನಿದ್ದರೂ ಏಕ್ ಮಾರ್ ದೋ ತುಕಡಾ....

ಸದಾ ನೇರವಾಗಿ, ನಿಷ್ಠೂರವಾಗಿ ಮಾತನಾಡುವ ಜಯಾ ಬಚ್ಚನ್ ಪೂಜಾರಿಯೊಬ್ಬರ ಮುಖಕ್ಕೆ 'ಮಹಾ ಮಂಗಳಾರತಿ' ಮಾಡಿದ್ದಾರೆ ಎಂಬ ಗುಸುಗುಸು ಬಿಟೌನ್ ನಲ್ಲಿ ಕೇಳಿಬರುತ್ತಿದೆ.

Jaya Bachchan gets angry at a priest during Esha Deol's baby shower

ಇತ್ತೀಚೆಗಷ್ಟೇ ಇಶಾ ಡಿಯೋಲ್ ರವರ ಸೀಮಂತ ಕಾರ್ಯಕ್ರಮದಲ್ಲಿ ಜಯಾ ಬಚ್ಚನ್ ಭಾಗವಹಿಸಿದ್ದರು. ಸೀಮಂತ ಕಾರ್ಯಕ್ರಮದಲ್ಲಿ ಪೂಜಾ ಕೈಂಕರ್ಯಗಳನ್ನ ನೆರವೇರಿಸುವುದು ಬಿಟ್ಟು, ಸೆಲೆಬ್ರಿಟಿಗಳ ಜೊತೆ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುತ್ತಿದ್ದರಂತೆ ಪೂಜಾರಿ.

ಸೆಲ್ಫಿ ಗುಂಗಿನಲ್ಲಿಯೇ ಇದ್ದ ಪೂಜಾರಿ, ಜಯಾ ಬಚ್ಚನ್ ರವರ ಜೊತೆಗೂ ಒಂದು ಸೆಲ್ಫಿ ಕೇಳಿದ್ದಾರೆ. ಇದಕ್ಕೆ ಗರಂ ಆದ ಜಯಾ ಬಚ್ಚನ್ ''ಸೆಲ್ಫಿ ಬಿಟ್ಟು ಪೂಜೆ ಮಾಡುವ ಬಗ್ಗೆ ಗಮನ ಕೊಡಿ'' ಎಂದುಬಿಟ್ಟರಂತೆ. ಹಾಗಂತ ಬಾಲಿವುಡ್ ಗಲ್ಲಿಗಲ್ಲಿಗಳಲ್ಲಿ ಗುಲ್ಲೋ ಗುಲ್ಲು.

Jaya Bachchan gets angry at a priest during Esha Deol's baby shower

ಆದ್ರೆ, ಇಶಾ ಡಿಯೋಲ್ ಸಂಬಂಧಿಕರು ಹೇಳುವ ಪ್ರಕಾರ ಪೂಜಾರಿ ಜೊತೆ ಜಯಾ ಬಚ್ಚನ್ ಗರಂ ಆಗಿ ವರ್ತಿಸಲಿಲ್ಲ. ಬದಲಾಗಿ, 'ಪೂಜೆ ಮೇಲೆ ಗಮನ ಹರಿಸುವಂತೆ' ಜಯಾ ಬಚ್ಚನ್ ಮೆಲು ಧ್ವನಿಯಲ್ಲಿ ಕೇಳಿಕೊಂಡರಂತೆ.

ಯಾರು ಏನೇ ಹೇಳಿದರೂ ಜಯಾ ಬಚ್ಚನ್ ಹೇಗೆ ಅನ್ನೋದು ಎಲ್ಲರಿಗೂ ಗೊತ್ತಿರೋದೇ. ತಂಟೆ ಬಂದ್ರೆ ತರಾಟೆಗೆ ತೆಗೆದುಕೊಳ್ಳದೇ ಸುಮ್ಮನೆ ಕೂರುವವರಲ್ಲ ಜಯಾ ಮೇಡಂ.

English summary
Jaya Bachchan gets angry at a priest during Esha Deol's baby shower
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada