»   » ಜಿಯಾ ಆತ್ಮಹತ್ಯೆ : ಆರೋಪಿ ಸೂರಜ್‌ಗೆ ಜಾಮೀನು

ಜಿಯಾ ಆತ್ಮಹತ್ಯೆ : ಆರೋಪಿ ಸೂರಜ್‌ಗೆ ಜಾಮೀನು

Posted By:
Subscribe to Filmibeat Kannada

ಬಾಲಿವುಡ್ ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಬಂಧನಕ್ಕೊಳಗಾಗಿದ್ದ, ಆಕೆ ಪ್ರಿಯಕರ ಆದಿತ್ಯ ಪಂಚೋಲಿ ಪುತ್ರ ಸೂರಜ್ ಪಾಂಚೋಲಿಗೆ ಸೋಮವಾರ(ಜು.1) ಬಾಂಬೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಸೂರಜ್ ಪಾಂಜೋಲಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, 50 ಸಾವಿರ ರುಪಾಯಿ ಬಾಂಡ್ ಮೇಲೆ ಜಾಮೀನು ನೀಡಿದೆ. ಅಲ್ಲದೆ ವಿದೇಶಕ್ಕೆ ತೆರಳದಂತೆ ಸೂಚಿಸಿರುವ ಕೋರ್ಟ್, ಪಾಸ್ಪೋರ್ಟ್ ಒಪ್ಪಿಸಲು ಸೂರಜ್ ಗೆ ಸೂಚಿಸಿದೆ.

ಈ ಮುಂಚೆ ಸ್ಥಳೀಯ ಕೋರ್ಟ್ ಸೂರಜ್ ಪಾಂಚೋಲಿಗೆ ಜಾಮೀನು ನಿರಾಕರಿಸಿತ್ತು, ಹೀಗಾಗಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆತ್ಮಹತ್ಯೆಗೂ ಮುನ್ನ ಜಿಯಾಖಾನ್ ಬರೆದಿದ್ದ ಡೆತ್ ನೋಟ್ ಪತ್ತೆಯಾದ ನಂತರ ಸೂರಜ್ ಪಾಂಚೋಲಿಯನ್ನು ಬಂಧಿಸಬೇಕು ಎಂದು ಜಿಯಾ ಪೋಷಕರು ಪೊಲೀಸರು ಮೇಲೆ ಒತ್ತಡ ಹೇರಿದ್ದರು. ಹೀಗಾಗಿ ಜೂನ್ 10ರಂದು ಪೊಲೀಸರು ಸೂರಜ್ ನನ್ನು ಬಂಧಿಸಲಾಗಿತ್ತು.

ಜಿಯಾಖಾನ್ ಬರೆದಿದ್ದಾಳೆ ಎನ್ನಲಾದ 6 ಪುಟಗಳ ಆತ್ಮಹತ್ಯಾ ಪತ್ರ ಹಾಗೂ ನಂತರ ಸಿಕ್ಕಿದ ಮತ್ತೊಂದು ಪತ್ರದಲ್ಲಿ ಸೂರಜ್ ಖಾನ್ ಹೆಸರು ಪ್ರಸ್ತಾಪಿಸಲಾಗಿತ್ತು. ಮೊದಲ ಪತ್ರದಲ್ಲಿ ಸೂರಜ್ ಖಾನ್ ನಿಂದ ನಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ. ಗರ್ಭಿಣಿಯಾದೆ ನಂತರ ಅಬಾರ್ಷನ್ ಮಾಡಿಸಿಕೊಂಡು ನೋವು ತಿಂದೆ ಎಂದು ಜಿಯಾಖಾನ್ ಬರೆದಿದ್ದರು.

ಸೂರಜ್ ಮಾನಸಿಕ ಹಾಗೂ ದೈಹಿಕವಾಗಿ ಜಿಯಾ ಖಾನ್ ಗೆ ನೋವು ನೀಡಿದ್ದಾರೆ ಎಂದು ಜಿಯಾಖಾನ್ ತಾಯಿ ರಬಿಯಾ ಕೂಡಾ ದೂರಿನಲ್ಲಿ ಹೇಳಿದ್ದರು. ಈ ನಡುವೆ ಸೂರಜ್ ಗೆ ಜಾಮೀನು ಸಿಗಲು ನೆರವಾದ ಅಂಶಗಳು ಯಾವುದು ಮುಂದೆ ಓದಿ...

ಪತ್ರಗಳ ನಿಗೂಢತೆ

ಆತ್ಮಹತ್ಯಾ ಪ್ರಕರಣದಲ್ಲಿ ಸೂರಜ್ ಖಾನ್ ರನ್ನು ನೇರ ಆರೋಪಿಯನ್ನಾಗಿಸಿ ವಿಚಾರಣೆ ನಡೆಸಲು ಸೂಕ್ತ ಸಾಕ್ಷ್ಯಗಳು ಕಂಡು ಬಂದಿತ್ತು.

ಆದರೆ, ನಂತರ ಇನ್ನೊಂದು ಪತ್ರ ಕಾಣಿಸಿಕೊಂಡು ಪ್ರಕರಣಕ್ಕೆ ಟ್ವಿಸ್ಟ್ ನೀಡಿತು. ಜೂ. 3 ರಂದು ಜುಹು ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ 25 ವರ್ಷದ ಜಿಯಾ ಖಾನ್ ಅವರ ಸಾವಿನ ನಿಗೂಢತೆ ಮುಂದುವರೆಯಿತು.

ಎರಡು ಪತ್ರಗಳ ಕೈಬರಹದ ಸ್ಯಾಂಪಲ್ ಕೋರ್ಟಿಗೆ ನೀಡಿ ಇದರ ವರದಿ ಆಧಾರದ ಮೇಲೆ ನನ್ನ ಕಕ್ಷಿದಾರ ಮೃತಳಿಗೆ ಹಿಂಸೆ ನೀಡಿದ ದಿನಾಂಕ ಹಾಗೂ ಪತ್ರ ಬರೆದಿರುವ ದಿನಾಂಕ ಪರಿಶೀಲಿಸಿ ಎಂದು ಸೂರಜ್ ವಕೀಲರು ವಾದಿಸಿದರು.

ಮೊಬೈಲ್ ಸಂದೇಶ ಏನಿದೆ?

ಸೂರಜ್ ಹಾಗೂ ಜಿಯಾ ನಡುವೆ ಸಾಕಷ್ಟು ಮೊಬೈಲ್ ಸಂದೇಶ ಹರಿದಾಡಿದೆ. ಎಸ್ಎಂಎಸ್, ಎಂಎಂಎಸ್ ಗಳಲ್ಲಿ ಏನಿತ್ತು ಎಂಬುದರ ಮಾಹಿತಿ ಸಿಕ್ಕಿದೆ. ಜೊತೆಗೆ ಜಿಯಾ ಬರೆದಿರುವ ಸೂಸೈಡ್ ನೋಟ್ ಪರಿಶೀಲನೆ ಕೂಡಾ ಸೂರಜ್ ನತ್ತ ಬೊಟ್ಟು ಮಾಡಿತ್ತು.

ಆದರೆ, ಮೊಬೈಲ್ ದಾಖಲೆಗಳು ಹಾಗೂ ಪತ್ರಗಳಲ್ಲಿನ ಅಂಶಗಳ ಆಧಾರದ ಮೇಲೆ ಇಬ್ಬರ ನಡುವೆ ವೈಮನಸ್ಯ ಇದ್ದದ್ದು ದೃಢವಾದರೂ ಆತ್ಮಹತ್ಯೆ ನಡೆದ ದಿನಾಂಕಕ್ಕೂ ಅದಕ್ಕೂ ಭಾರಿ ಅಂತರವಿತ್ತು. ಅಲ್ಲದೆ, ಹಳೆ ಜಗಳವನ್ನು ನೆನೆದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಕ್ಕೆ ಪುರಾವೆ ಇರಲಿಲ್ಲ.

ಮಂಪರು ಪರೀಕ್ಷೆ ಸಾಧ್ಯವಾಗಲಿಲ್ಲ

ಸೂರಜ್ ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ವಿಶೇಷ ಅಧಿಕಾರ ಕೊಡಬೇಕು ಎಂದು ಪೊಲೀಸರು ಇತ್ತೀಚೆಗೆ ಕೋರ್ಟ್ ಮೊರೆ ಹೋಗಿದ್ದರು.

ಸೂರಜ್ ಅವರದು ಇನ್ನೂ ಚಿಕ್ಕ ವಯಸ್ಸು. ಈ ವಯಸ್ಸಲ್ಲಿ ತಮ್ಮ ಕಕ್ಷಿದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದು ಸರಿಯಿಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದರು.

ಜಿಯಾ ಪತ್ರ ನಕಲಿಯೇ?

ಜಿಯಾ ಖಾನ್ ಬರೆದಿರುವ ಪತ್ರ ನಕಲಿ ಜಿಯಾ ಕೈಬರಹ ಹೋಲುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಪೊಲೀಸರು ಅಲ್ಲಗೆಳೆದಿದ್ದರು.

ನಮ್ಮ ಇಲಾಖೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸದ್ಯಕ್ಕೆ ಎಲ್ಲಾ ಪತ್ರಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬರುವ ತನಕ ಏನೂ ಹೇಳಲು ಬರುವುದಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ವಿಶ್ವಾಸ್ ನಾಂಗ್ರೆ ಹೇಳಿದ್ದರು. ಆದರೆ, ಇದು ನಿಜ ಎಂಬುದು ಈಗ ಸ್ಪಷ್ಟವಾಗಿದೆ.

ಜಿಯಾ ಪತ್ರ ದ್ವಂದ್ವತೆ

"ನೀನು ದೇವರು ನನಗಾಗಿ ಕಳಿಸಿದ ವ್ಯಕ್ತಿ. ನಿನಗೆ ನನ್ನಿಂದ ಏನು ಬೇಕೋ ಪಡೆದಿಕೋ, ನಿನ್ನ ಅಪ್ಪ, ಅಮ್ಮ ಧನ್ಯತೆ ಅನುಭವಿಸುವಂತೆ ನಾನು ನಡೆದುಕೊಳ್ಳುತ್ತೇನೆ. ನನ್ನ ಕಷ್ಟದ ದಿನಗಳಲ್ಲಿ ನೀನು ಸಹಾಯ ನೀಡಿದ್ದೆ ಅದನ್ನು ನಾನು ನಿನಗೆ ಬೇಕಾದ್ದು ನೀಡಲು ಸಿದ್ಧಳಾಗಿದ್ದೇನೆ" ಎಂದು ಹೇಳಲಾಗಿದೆ.

"ಮೊದಲ ಪತ್ರ ಹಾಗೂ ಎರಡನೇ ಪತ್ರದ ಕೈ ಬರಹ, ಬರೆದಿರುವ ದಿನಾಂಕ ಸಮಯ ಹಾಗೂ ಬರೆದಿರುವವರ ಮಾನಸಿಕ ಸ್ಥಿತಿ ಆಧಾರದ ಮೇಲೆ ವರದಿ ವರದಿ ಬಂದಿತ್ತು. ಇದೇ ಸೂರಜ್ ವಕೀಲರಿಗೆ ಬಲವಾಗಿ ನಿಂತಿತು. ಕೈಬರಹ, ದಿನಾಂಕ ವ್ಯತ್ಯಾಸ ಸೂರಜ್ ಬೇಲ್ ಗೆ ಕಾರಣವಾಗಿದೆ.

English summary
Jiah Khan's beau Suraj Pancholi relieved. Suraj Pancholi has been granted bail on the surety of Rs 50,000 by the Bombay High Court on Monday, July 1. The aspiring actor earlier was denied bail by a session court in Mumbai.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada