For Quick Alerts
  ALLOW NOTIFICATIONS  
  For Daily Alerts

  ಜಿಯಾ ಖಾನ್ ಮರಣೋತ್ತರ ವರದಿ ಏನು ಹೇಳುತ್ತದೆ?

  By Rajendra
  |

  ಬಾಲಿವುಡ್ ತಾರೆ ಜಿಯಾ ಖಾನ್ ಅವರ ಮರಣೋತ್ತರ ಪರೀಕ್ಷೆ ವರದಿ ಬಹಿರಂಗವಾಗಿದೆ. ಅವರು ನೇಣು ಬಿಗಿದುಕೊಂಡು ಸಾವಪ್ಪಿದ್ದು ದೇಹದ ಮೇಲೆ ಯಾವುದೇ ವಿಧವಾದ ಗಾಯಗಳಾಗಿಲ್ಲ ಎಂದು ಮರಣಾನಂತರದ ವರದಿಯಲ್ಲಿ ಸ್ಪಷ್ಟಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

  ಜೂ.3ರಂದು ಜಿಯಾ ಖಾನ್ ಅವರು ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಪ್ರಿಯಕರ ಸೂರಜ್ ಪಂಚೋಲಿ ಜೊತೆಗಿನ ಸಂಬಂಧ ಮುರಿದು ಬಿದ್ದ ಹಿನ್ನೆಲೆಯಲ್ಲಿ ಅವರು ನೊಂದು ಸಾವಿಗೆ ಶರಣಾಗಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.

  ಈ ಘಟನೆಗೆ ಸಂಬಂಧಿಸಿದಂತೆ ಸೂರಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಯಾ ಖಾನ್ ಸಾವಿಗೆ ಸೂರಜ್ ಅವರೇ ಕಾರಣ ಎಂದು ಜಿಯಾ ಅವರ ತಾಯಿ ಆರೋಪಿಸಿದ್ದರು. ಈ ಸಂಬಂಧ ಅವರು ಆರು ಪುಟಗಳ ಡೆಟ್ ನೋಟನ್ನು ಪೊಲೀಸರಿಗೆ ಕೊಟ್ಟಿದ್ದರು.

  ಈ ಪತ್ರ ನಿಜವಾಗಿಯೂ ಜಿಯಾ ಖಾನ್ ಬರೆದದ್ದೇ ಅಥವಾ ಯಾರ ಕೈವಾಡವೇನಾದರೂ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೈಬರಹದ ಈ ಪತ್ರದ ಹಸ್ತಾಕ್ಷರ ಜಿಯಾ ಖಾನ್ ಅವರದೇ ಎಂಬ ಬಗ್ಗೆ ತಜ್ಞರು ಪರಿಶೀಲಿಸುತ್ತಿದ್ದಾರೆ.

  ಜಿಯಾರ ಮೇಲೆ ಆಕೆಯ ಬಾಯ್ ಫ್ರೆಂಡ್ ಅತ್ಯಾಚಾರವೆಸಗಿ, ಆಕೆಯ ಮೇಲೆ ದೌರ್ಜನ್ಯ ಮಾಡಿ ಮಾನಸಿಕವಾಗಿ ಹಿಂಸಿಸಿದ್ದ. ಡೆಟ್ ನೋಟ್ ನ ಆರನೇ ಪುಟದಲ್ಲಿ ಅಬಾರ್ಷನ್ ಬಗ್ಗೆಯೂ ಹೇಳಿಕೊಂಡಿದ್ದಾಳೆ, ಮುಂದೆ ಓದಿ. (ಏಜೆನ್ಸೀಸ್)

  English summary
  Mumbai police says, "The postmortem report has found that the death of Jiah Khan was due to hanging and no other external wounds were found. The actress hanged herself at her residence in western Mumbai on June 3, allegedly over broken relationship with aspiring actor Suraj Pancholi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X