»   » ಉಲ್ಟಾ ಹೊಡೆದ ಜಾನ್ ಅಬ್ರಹಾಂ; ಮದುವೆ ಗೊತ್ತಿಲ್ಲ!

ಉಲ್ಟಾ ಹೊಡೆದ ಜಾನ್ ಅಬ್ರಹಾಂ; ಮದುವೆ ಗೊತ್ತಿಲ್ಲ!

Posted By:
Subscribe to Filmibeat Kannada
ಬಾಲಿವುಡ್ ಸುರಸುಂದರಾಂಗ ಜಾನ್ ಅಬ್ರಹಾಂ, ತಮ್ಮ ಮದುವೆಯ ಬಗ್ಗೆ ಗೊಂದಲ ಹೊಂದಿದ್ದಾರೆಯೇ? ಹೀಗೊಂದು ಪ್ರಶ್ನೆ ಕೇಳದೇ ವಿಧಿಯಿಲ್ಲ. ಕಾರಣ, ಅವರದೇ ಮದುವೆ ಬಗ್ಗೆ ಕೇಳಿದರೆ ಅವರಿಂದ ಬರುವ ಉತ್ತರದಿಂದ ಈ ಮತ್ತೊಂದು ಪ್ರಶ್ನೆ ಕೇಳಲೇಬೇಕಾಗಿದೆ...'ಜಾನ್ ಮದುವೆ ಬಗ್ಗೆ ಕನ್ ಫ್ಯೂಸ್ ಆಗಿದ್ದಾರಾ?'. ಈ ಪ್ರಶ್ನೆ ಕೇಳದೇ ವಿಧಿಯಿಲ್ಲ.

ಕೆಲವು ಕಾಲದ ಹಿಂದಷ್ಟೇ, ಜಾನ್ ಅಬ್ರಹಾಂ ತಮ್ಮ ಮದುವೆ ಬಗ್ಗೆ ಹೇಳಿಕೊಂಡಿದ್ದರು. "ಈ ವರ್ಷ ನಾನು ಹಾಗೂ ಗೆಳತಿ ಪ್ರಿಯಾ ರಂಚಲ್ ಮದುವೆ ಆಗಲಿದ್ದೇವೆ" ಎಂದಿದ್ದರು. ಆದರೆ ಈಗ ಪ್ರಶ್ನಿಸಿದರೆ ಪ್ಲೇಟ್ ಬದಲಾಯಿಸಿ ಉತ್ತರ ನೀಡುತ್ತಿದ್ದಾರತೆ. ಅವರ ಮದುವೆಯನ್ನು ನಾವು ಮಾಡುವಂತೆ ಮಾತನಾಡುತ್ತಿದ್ದಾರೆ.

ಜಾನ್ ಅಬ್ರಹಾಂ ತಮ್ಮ ಕುಟುಂಬದವರೊಂದಿಗೆ ಇದ್ದ ವೇಳೆ ಅವರಿಗೆ ಮಾಧ್ಯಮದ ಕಡೆಯಿಂದ ಬಂದ ಪ್ರಶ್ನೆಗೆ "ನಿಜವಾಗಿಯೂ ನನಗೆ ಗೊತ್ತಿಲ್ಲ. ಸದ್ಯಕ್ಕೆ ನಾನು ನನ್ನ ಕುಟುಂಬವರೊಂದಿಗೆ ಹೆಚ್ಚಿನ ವೇಳೆಯನ್ನು ಕಳೆಯಲು ಇಷ್ಟಪಡುತ್ತಿದ್ದೇನೆ. ವೇಳೆಯ ಅಭಾವದಲ್ಲಿಯೂ ಕೂಡ ಕೊನೆಗೆ ರಾತ್ರಿಯಲ್ಲಾದರೂ ನಾವೆಲ್ಲಾ (ಅವರ ಕುಟುಂಬ) ಒಟ್ಟಿಗೆ ಸೇರುತ್ತೇವೆ" ಎಂದು ಕಾಗೆ ಹಾರಿಸಿದ್ದಾರೆ.

ಜಾನ್ ಉತ್ತರದಿಂದ ಸಂದರ್ಶಕ ಕಂಗಾಲು! ಕಾರಣ, "ಈ ವರ್ಷ ನಾನು ಹಾಗೂ ಪ್ರಿಯಾ ಮದುವೆ ಆಗಲಿದ್ದೇವೆ. ಆದರೆ ಇದು ವೈಯಕ್ತಿಕ ಸಮಾರಂಭವಷ್ಟೇ" ಎಂದಿದ್ದ ಅವರ ಈ ಮೊದಲಿನ ಹೇಳಿಕೆಗೆ ತದ್ವಿರುದ್ಧವಾಗಿತ್ತು ಜಾನ್ ರ ಈಗಿನ ಹೇಳಿಕೆ. ಇತ್ತೀಚಿಗಷ್ಟೇ ಸೈಫ್ ಹಾಗೂ ಕರೀನಾ ಜೋಡಿ ತಮ್ಮ ಮದುವೆ ಬಗ್ಗೆ ಮಾಧ್ಯಮಕ್ಕೆ ಗೊಂದಲದ ಹೇಳಿಕೆ ನೀಡಿ ದಾರಿ ತಪ್ಪಿಸಿದ್ದರು. ಈಗ ಜಾನ್ ಸರದಿ ಎನ್ನಬಹುದು. (ಒನ್ ಇಂಡಿಯಾ ಕನ್ನಡ)

English summary
John Abraham clueless about his own marriage with girlfriend Priya Runchal. His wedding will take place this year.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada