For Quick Alerts
  ALLOW NOTIFICATIONS  
  For Daily Alerts

  5 ತಿಂಗಳಲ್ಲಿ ಶಾರುಖ್ ಖಾನ್ 'ಪಠಾಣ್' ಸಿನಿಮಾ ರಿಲೀಸ್: ಕಿಕ್ ಕೊಡ್ತಿದೆ ಜಾನ್ ಲುಕ್!

  |

  ಶಾರುಖ್ ಖಾನ್ ಸಿನಿಮಾ ನೋಡುವುದಕ್ಕೆ ಇಡೀ ದೇಶವೇ ಕಾದು ಕೂತಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕಿಂಗ್ ಖಾನ್ ನಟನೆಯ ಒಂದೇ ಒಂದು ಸಿನಿಮಾ ಕೂಡ ರಿಲೀಸ್ ಆಗಿಲ್ಲ. ಸತತ ಸೋಲುಗಳಿಂದ ಕಂಗೆಟ್ಟು ಹೋಗಿದ್ದ ಶಾರುಖ್ ಖಾನ್ ಸಮಯ ತೆಗೆದುಕೊಂಡು ಮಾಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದುವೇ 'ಪಠಾಣ್'.

  'ಪಠಾಣ್' ಸಿನಿಮಾ ಸೆಟ್ಟೇರಿದ ದಿನದಿಂದ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇದೆ. ಮಲ್ಟಿಸ್ಟಾರರ್ ಸಿನಿಮಾವನ್ನು ನೋಡುವುದಕ್ಕೆ ಕಿಂಗ್ ಖಾನ್ ಅಭಿಮಾನಿಗಳು ಸೇರಿದಂತೆ ಸಿನಿಪ್ರಿಯರು ಕಾದು ಕೂತಿದ್ದಾರೆ. ಈ ಬೆನ್ನಲ್ಲೇ ಶಾರುಖ್ ಖಾನ್ 'ಪಠಾಣ್' ಸಿನಿಮಾದ ರಿಲೀಸ್ ಡೇಟ್ ಹಾಗೂ ಜಾನ್ ಅಬ್ರಾಹಂ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದ್ದಾರೆ. ಇದೇ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.

  ಶಾರುಖ್ ಖಾನ್ ಸಿನಿಮಾ ಸೆಟ್‌ನಲ್ಲಿ ವಿಜಯ್! ಚಿತ್ರ ವೈರಲ್ಶಾರುಖ್ ಖಾನ್ ಸಿನಿಮಾ ಸೆಟ್‌ನಲ್ಲಿ ವಿಜಯ್! ಚಿತ್ರ ವೈರಲ್

  ಸತತ ಸೋಲುಗಳಿಂದ ಶಾರುಖ್ ಖಾನ್ ಕಂಗಟ್ಟು ಹೋಗಿದ್ದರು. ನಿರಂತರವಾಗಿ ಶಾರುಖ್ ಅಭಿನಯದ ಐದಾರು ಸಿನಿಮಾಗಳು ನೆಲಕ್ಕಚ್ಚಿದ್ದವು. ಹೀಗಾಗಿ ಒಂದಿಷ್ಟು ದಿನ ಗ್ಯಾಪ್ ಕೊಟ್ಟು ಒಳ್ಲೆ ಸ್ಕ್ರಿಪ್ಟ್‌ಗಾಗಿ ಕಾದು 'ಪಠಾಣ್' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇನ್ನು ಐದು ತಿಂಗಳಿಗೆ ಶಾರುಖ್ ಖಾನ್ ಸಿನಿಮಾ ರಿಲೀಸ್ ಆಗುತ್ತೆ. ಅಸಲಿಗೆ 'ಪಠಾಣ್' ರಿಲೀಸ್ ಯಾವಾಗ? ಜಾನ್ ಅಬ್ರಾಹಂ ಲುಕ್ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಶಾರುಖ್ ಸಿನಿಮಾ ಬಿಡುಗಡೆಗೆ 5 ತಿಂಗಳು ಬಾಕಿ

  ಶಾರುಖ್ ಸಿನಿಮಾ ಬಿಡುಗಡೆಗೆ 5 ತಿಂಗಳು ಬಾಕಿ

  ಬಾಲಿವುಡ್‌ ಸೂಪರ್‌ಸ್ಟಾರ್ ಶಾರುಖ್ ಖಾನ್ ಅಭಿನಯದ ಕಮ್ ಬ್ಯಾಕ್ ಸಿನಿಮಾ 'ಪಠಾಣ್'. ಈ ಸಿನಿಮಾಗಾಗಿ ಅದೆಷ್ಟು ಮಂದಿ ಕಾದು ಕೂತಿದ್ದಾರೋ ಗೊತ್ತಿಲ್ಲ. ಇಷ್ಟು ದಿನ 'ಪಠಾಣ್' ಸಿನಿಮಾದ ಚಿಕ್ಕೊಂದು ಫೋಟೊ ಲೀಕ್ ಆದಾಗಲೂ ಅಭಿಮಾನಿಗಳು ಕಣ್ತುಂಬಿಕೊಂಡು ಖುಷಿ ಪಟ್ಟಿದ್ದರು. ಈಗ ತಮ್ಮ ಅಭಿಮಾನಿಗಳಿಗೆ ಸ್ವತ: ಶಾರುಖ್ ಖುಷಿ ವಿಷಯವೊಂದನ್ನು ತಿಳಿಸಿದ್ದಾರೆ. 'ಪಠಾಣ್' ಸಿನಿಮಾ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದು, ಜನವರಿ 25 , 2023ಕ್ಕೆ ರಿಲೀಸ್ ಆಗುತ್ತೆ ಎಂದಿದ್ದಾರೆ.

  ಜಾನ್ ಅಬ್ರಾಹಂ ಲುಕ್ ರಿಲೀಸ್

  ಜಾನ್ ಅಬ್ರಾಹಂ ಲುಕ್ ರಿಲೀಸ್

  'ಪಠಾಣ್' ಮಲ್ಟಿಸ್ಟಾರರ್ ಸಿನಿಮಾ. ಕಿಂಗ್ ಖಾನ್ ಜೊತೆ ಈ ಸಿನಿಮಾದಲ್ಲಿ ಬಾಲಿವುಡ್ ಮಸಲ್ ಮ್ಯಾನ್ ಜಾನ್ ಅಬ್ರಾಹಂ ಕೂಡ ನಟಿಸುತ್ತಿದ್ದಾರೆ. ಇಷ್ಟು ದಿನ ಜಾನ್ ಅಬ್ರಾಹಂ ಹೇಗೆ ಕಾಣಿಸಿಕೊಳ್ಳುತ್ತಾರೆ ಅನ್ನೋದನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ಸ್ವತ: ಶಾರುಖ್ ಖಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಜಾನ್ ಅಬ್ರಾಹಂ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. " ಅವನು ತುಂಬಾ ಟಫ್ ಹಾಗೇ ಸಿಕ್ಕಾಪಟ್ಟೆ ರಫ್" ಎಂದು ಶಾರುಖ್ ಖಾನ್ ಬರೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಜಾನ್ ಅಬ್ರಾಹಂ ಹಾಗೂ ಶಾರುಖ್ ಇಬ್ಬರೂ ಮಾಸ್ ಫೈಟ್ ನೋಡುವುದಕ್ಕೆ ಜನರು ಕಾತುರರಾಗಿದ್ದಾರೆ.

  ಇದು 50ನೇ ಸಿನಿಮಾ

  ಇದು 50ನೇ ಸಿನಿಮಾ

  'ಪಠಾಣ್' ಸಿನಿಮಾ ಯಶ್ ರಾಜ್‌ ಬ್ಯಾನರ್‌ನ 50ನೇ ಸಿನಿಮಾ. ಹೀಗಾಗಿ ಈ ಸಿನಿಮಾ ಗೆಲ್ಲಿಸೋಕೆ ಶತಪ್ರಯತ್ನ ನಡೆಯುತ್ತಿದೆ. ಸದ್ಯ ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುಂಡಿದೆ. ಇತ್ತೀಚೆಗೆ ತರಕಂಡ 'ಶಂಶೇರಾ' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಹೀನಾಯಾವಾಗಿ ಸೋಲುಂಡಿತ್ತು. ಈ ಕಾರಣಕ್ಕೆ 50ನೇ ಸಿನಿಮಾವನ್ನು ಗೆಲ್ಲಿಸಲೇ ಬೇಕು ಅಂತ ನಿರ್ಮಾಣ ಸಂಸ್ಥೆ ಪಣತೊಟ್ಟು ನಿಂತಿದೆ.

  'ಪಠಾಣ್' ಮೂರು ಭಾಷೆಯಲ್ಲಿ ರಿಲೀಸ್

  'ಪಠಾಣ್' ಮೂರು ಭಾಷೆಯಲ್ಲಿ ರಿಲೀಸ್

  ಶಾರುಖ್ ಖಾನ್ ಕಮ್ ಬ್ಯಾಕ್ ಸಿನಿಮಾದಲ್ಲಿ ತಾರೆಯರ ಹಿಂಡೇ ಇದೆ. ಶಾರುಖ್ ಖಾನ್ ಜೊತೆ ಜಾನ್ ಅಬ್ರಾಹಂ ಹಾಗೂ ದೀಪಿಕಾ ಪಡುಕೋಣೆ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಹಿಂದಿ ಸೇರಿದಂತೆ ತೆಲುಗು ಹಾಗೂ ತಮಿಳು ಭಾಷೆಯಲ್ಲೂ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಫ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದೆ. ಇತ್ತ ಶಾರುಖ್ ಖಾನ್ ಒಂದೇ ಸಾರಿ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  John Abraham First Look From Pathaan Revealed By Shah Rukh Khan, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X