»   » ಬಾಲಿವುಡ್ಡಿನ ಬಹು ನಿರೀಕ್ಷಿತ ವಿವಾಹಗಳು

ಬಾಲಿವುಡ್ಡಿನ ಬಹು ನಿರೀಕ್ಷಿತ ವಿವಾಹಗಳು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಮದುವೆ ಸ್ವರ್ಗಲೋಕದಲ್ಲೇ ನಿಶ್ಚಯವಾಗುತ್ತದೆ ಎಂಬ ಮಾತಿದೆ ಆದರೆ, ಸ್ವರ್ಗೀಯ ಬಂಧನ ಅದಕ್ಕಿಂತ ಹೆಚ್ಚಿನ ಸುಖ ಭೂಲೋಕದಲ್ಲೆ ಅನುಭವಿಸಿ ಗೊತ್ತಿದೆ. ಭಾರತೀಯ ಮದುವೆ, ಆಚರಣೆ ಸಂಭ್ರಮವನ್ನು ವಿದೇಶಿಯರು ಬೆರಗು ಗಣ್ಣಿನಿಂದ ನೋಡುವುದಿದೆ.

ಅದರಲ್ಲೂ ಬಾಲಿವುಡ್ ನ ಗಣ್ಯರು, ಉದ್ಯಮಿಗಳು, ಸಿನಿತಾರೆಯ ಮದುವೆ ಎಂದರೆ ಅದು ಇಂದ್ರ ಲೋಕದ ವೈಭೋಗವನ್ನು ಧರೆಗಿಳಿಸಿದ ಅನುಭವ.

ಹಿಂದಿ ಚಿತ್ರರಂಗ ಕೇವಲ ಮನರಂಜನೆಯ ಉದ್ಯಮವಾಗಿ ಉಳಿದಿಲ್ಲ. ಸಿನಿತಾರೆಯರನ್ನು ದೇವರಂತೆ ಪೂಜಿಸುವ ಅಭಿಮಾನಿಗಳಿದ್ದಾರೆ. ಪ್ರತಿ ತಾರೆಯರ ಮದುವೆ ವೈಭೋಗದ ಬಗ್ಗೆ ಅವರಿಗೆ ಮಕ್ಕಳಾಗುವವರೆಗೂ ಮಾತನಾಡುವ ಮಂದಿ ಇದ್ದಾರೆ.

ಬಾಲಿವುಡ್ ನಲ್ಲಿ ಐಶ್ವರ್ಯಾ ರೈ ಬಚ್ಚನ್ -ಅಭಿಷೇಕ್ ಬಚ್ಚನ್ ಮದುವೆ ಇಂದ ಹಿಡಿದು ಹೃತಿಕ್ ರೋಷನ್- ಸೂಜಾನ್ ಮದುವೆ ಕಥೆ ತನಕ ಬಿ- ಟೌನ್ ಮದುವೆ ಬಗ್ಗೆ ಎಲ್ಲರಿಗೂ ಸಹಜ ಕುತೂಹಲ ಇದ್ದೇ ಇದೆ

ಕತ್ರೀನಾ- ರಣಬೀರ್, ಜಾನ್ ಅಬ್ರಹಾಂ ಪ್ರಿಯಾ, ಗೀತಾ ಬಸ್ರಾ-ಹರ್ಭಜನ್ ಸಿಂಗ್, ದಿಯಾ ಮಿರ್ಜಾ- ಸಾಹಿಲ್ ಸಿಂಘ, ಸೋಹಾ ಅಲಿಖಾನ್ -ಕುನಾಲ್ ಖೇವು ಸೇರಿದಂತೆ ಈಗ ಮದುವೆಯ ಹೊಸ್ತಿಲಲ್ಲಿ ನಿಂತಿರುವ ಜೋಡಿಗಳ ಪಟ್ಟಿ ಇಲ್ಲಿ ನೀಡಲಾಗಿದೆ ತಪ್ಪದೇ ನೋಡಿ...

ಜಾನ್-ಪ್ರಿಯಾ

ಬಿಪಾಶಾ ಬಸು ಜತೆಗಿನ ಗೆಳೆತನವನ್ನು ಕಳೆದುಕೊಂಡ ಮೇಲೆ ಜಾನ್ ಅಬ್ರಹಾಂ ಪ್ರಿಯಾ ಜತೆ ಗೆಳೆತನ ಬೆಳೆಸಿಕೊಂಡ ಪ್ರಿಯಾ ರಾಂಚಲ್ ಜತೆ ಮುಂಬೈನ ಹೊರವಲಯದ ಕೆಫೆಗಳಲ್ಲಿ ಕಾಣಿಸಿಕೊಂಡಿದ್ದ ಜಾನ್ ಕೊನೆಗೂ ಪ್ರಿಯಾ ಜತೆ ಪ್ರೇಮ ಸಂಬಂಧದಲ್ಲಿದ್ದೇನೆ ಎಂದು ಒಪ್ಪಿಕೊಂಡ ಜತೆಗೆ ಇನ್ನು ಕೆಲವೇ ವರ್ಷಗಳಲ್ಲಿ ಪ್ರಿಯ ಜತೆ ಮದುವೆಯಾಗುತ್ತೇನೆ ಎಂದು ಘೋಷಿಸಿದ.

ರಾಣಿ-ಆದಿತ್ಯಾ

ರಾಣಿ ಮುಖರ್ಜಿ ಆದಿತ್ಯಾ ಛೋಪ್ರಾ ಇಬ್ಬರ ಹೆಸರು ವರ್ಷಗಳಿಂದ ಗಾಸಿಪ್ ಕಾಲಂನಲ್ಲಿ ಓಡಾಡುತ್ತಿದ್ದರೂ ಇಬ್ಬರೂ ಬಹಿರಂಗವಾಗಿ ಎಂದೂ ಸಂಬಂಧದ ಬಗ್ಗೆ ಹೇಳಿಕೊಂಡಿಲ್ಲ. ಈಗಾಗಲೇ ಇಬ್ಬರ ನಡುವೆ ಗುಟ್ಟಾಗಿ ಮದುವೆ ನಡೆದುಬಿಟ್ಟಿದೆ ಎಂಬ ಸುದ್ದಿಯೂ ಇದೆ. ಯಾವಾಗ ಬಹಿರಂಗವಾಗಿ ಮದುವೆಯಾಗ್ತಾರೋ ಕಾದು ನೋಡೋಣ

ಸೋಹಾ -ಕುನಾಲ್

ಪಟೌಡಿ -ಶರ್ಮಿಳಾ ಅವರ ಪುತ್ರಿ ಸೋಹಾ ಅಲಿ ಖಾನ್ ಅವರು ಕುನಾಲ್ ಖೇಮು ಜತೆ ಲಿನ್ ಇನ್ ಸಂಬಂಧದಲ್ಲಿರುವುದು ಗುಟ್ಟಾದ ವಿಷಯವೇನಲ್ಲ. ಇಬ್ಬರು ಒಂದಲ್ಲ ಒಂದು ದಿನ ಮದುವೆಯಾಗುತ್ತಾರೆ ಎಂಬ ನಂಬಿಕೆ ಬಾಲಿವುಡ್ ಮಂದಿಗಿದೆ.

ಅಫ್ತಾಬ್-ನಿನ್

ಅಫ್ತಾಬ್ ಶಿವದಾಸಾನಿ ಹಾಗೂ ನಿನ್ ದುಸಂಜ್ ಪ್ರೇಮಿಗಳು ಯಾವಾಗ ಮದುವೆಯಾಗುತ್ತಾರೆ ಗೊತ್ತಿಲ್ಲ

ರಣಬೀರ್- ಕತ್ರೀನಾ

ರಣಬೀರ್ ಹಾಗೂ ಕತ್ರೀನಾ ನಡುವಿನ ಪ್ರೇಮ ಕಥೆ ಬಾಲಿವುಡ್ ಸಿನಿಮಾಕ್ಕೆ ಕಥೆ ಒದಗಿಸಬಲ್ಲುದು. ದೀಪಿಕಾ ಜತೆ ಮದುವೆಗೆ ರಣಬೀರ್ ಕುಟುಂಬ ಒಪ್ಪದ ಕಾರಣ ಹಳೆ ಗೆಳತಿ ಕತ್ರೀನಾ ಕೈಫ್ ಕೈ ಹಿಡಿಯಲು ರಣಬೀರ್ ಸಿದ್ಧನಾಗಿದ್ದಾನೆ. ಸಲ್ಲೂ ಸಂಗ ಬಿಟ್ಟ ಕೈಫ್ ಕೂಡಾ ರಣಬೀರ್ ಜತೆ ಊರುರು ಸುತ್ತಿ ಗಾಸಿಪ್ ಕಾಲಂನಲ್ಲಿ ಸುದ್ದಿಯಾಗಿದ್ದಳು

ಗೀತಾ-ಹರ್ಭಜನ್

ಭಾರತ ತಂಡದಲ್ಲಿ ಮತ್ತೆ ಸ್ಥಾನ ಪಡೆಯಲು ಸತತ ಪ್ರಯತ್ನ ನಡೆಸಿರುವ ಹರ್ಭಜನ್ ಅವರಿಗೆ ಗೀತಾ ಜತೆ ಮದುವೆ ಮಾಡಲು ಮನೆಯವರು ಆತುರ ಪಡಿಸುತ್ತಿದ್ದಾರೆ. ಆದರೆ, ಹರ್ಭಜನ್ ಒಮ್ಮೆ ಓಕೆ ಅಂದರೆ ಇನ್ನೊಮ್ಮೆ ಇನ್ನೂ ಸ್ವಲ್ಪ ಟೈಂ ಕೊಡಿ ಎನ್ನುತ್ತಿದ್ದಾನಂತೆ. ಗೀತಾ -ಹರ್ಭಜನ್ ಸಿಂಗ್ ಇಬ್ಬರು ಡ್ಯಾನ್ಸಿಂಗ್ ಪಾರ್ಟ್ನರ್ ಅಗಿದ್ದವರು ಈಗ ಲೈಫ್ ಪಾರ್ಟ್ನರ್ ಆಗಲು ಸಿದ್ಧರಾಗಿದ್ದಾರೆ

ದಿಯಾ-ಸಾಹಿಲ್

ಬಾಲಿವುಡ್ ಬೆಡಗಿ ದಿಯಾ ಮಿರ್ಜಾ ತಾನು ಸಾಹಿಲ್ ಸಂಘ ಜತೆ ಮುಂದಿನ ವರ್ಷ ಮದುವೆಯಾಗುವುದಾಗಿ ಘೋಷಿಸಿದ್ದಾರೆ.

English summary
In the past, we have read a lot about the Bollywood's most celebrated weddings. And today, through this article, let's check out the most-awaited and future marriages of the tinselville. Several B-town couples like John Abraham-Priya Runchal, Soha Ali Khan-Kunal Khemu and so on.
Please Wait while comments are loading...