For Quick Alerts
  ALLOW NOTIFICATIONS  
  For Daily Alerts

  ಭಾರತದ ಅತಿ ದೊಡ್ಡ ಮೀಟ್‌ಅಪ್ ಆಯೋಜಿಸುತ್ತಿದೆ 'ಜೋಶ್'

  By ಫಿಲ್ಮಿಬೀಟ್ ಡೆಸ್ಕ್
  |

  ಭಾರತದ ಜನಪ್ರಿಯ, ಅತಿ ವೇಗವಾಗಿ ಬೆಳೆಯುತ್ತಿರುವ ಕಿರು ವಿಡಿಯೋಗಳ ಅಪ್ಲಿಕೇಶನ್ 'ಜೋಶ್' ಭಾರತದ ಅತಿ ದೊಡ್ಡ ಮೀಟ್‌ಅಪ್ ಅನ್ನು ಆಯೋಜಿಸುತ್ತಿದೆ.

  2020ರಲ್ಲಿ ಆರಂಭಗೊಂಡ 'ಜೋಶ್' ಅಪ್ಲಿಕೇಶನ್ ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತದ ಅತ್ಯುತ್ತಮ ಕಿರು ವಿಡಿಯೋ ಅಪ್ಲಿಕೇಶನ್ ಆಗಿ ರೂಪ ಪಡೆದಿದೆ. 1000 ಕ್ಕೂ ಅತ್ಯುತ್ತಮ ವಿಡಿಯೋ ಕ್ರಿಯೇಟರ್‌ಗಳು ಜೋಶ್‌ ಜೊತೆಗಿದ್ದಾರೆ. 15 ಮಿಲಿಯನ್ (1.5 ಕೋಟಿ) ವಿಡಿಯೋ ಕ್ರಿಯೇಟರ್‌ಗಳು, 10 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳು ಆಗಿವೆ. 'ಜೋಶ್' ಅಪ್ಲಿಕೇಶನ್ ತನ್ನ ಹೊಸಬಗೆಯ ಕಂಟೆಂಟ್‌ನಿಂದ ಯುವಕರನ್ನು ಬಹುವಾಗಿ ಸೆಳೆಯುತ್ತಿದೆ.

  ಇದೀಗ ಜೋಶ್‌ ಭಾರತದ ಅತಿ ದೊಡ್ಡ ಮೀಟ್‌ ಅಪ್ ಆಯೋಜಿಸಿದ್ದು, ಈ ಮೀಟ್‌ಅಪ್ ನಲ್ಲಿ ಜೋಶ್‌ನ ಟಾಪ್‌ ವಿಡಿಯೋ ಕ್ರಿಯೇಟರ್‌ಗಳು ಇರಲಿದ್ದಾರೆ. ಅಭಿಮಾನಿಗಳು ನೇರವಾಗಿ ಕ್ರಿಯೇಟರ್‌ಗಳನ್ನು ಭೇಟಿಯಾಗಿ ಅವರಿಂದ ಸ್ಪೂರ್ತಿ ಪಡೆಯಬಹುದಾಗಿದೆ.

  ಜೋಶ್ ಅಪ್ಲಿಕೇಶನ್ ಇದೇ ವರ್ಷ ಮಾರ್ಚ್‌ನಲ್ಲಿ ಹೈದರಾಬಾದ್‌ನಲ್ಲಿ 'ಲೈಟ್ಸ್ ಕ್ಯಾಮೆರಾ ಜೋಶ್' ಹೆಸರಿನ ಅಭಿಯಾನ ಆರಂಭಿಸಿತ್ತು. ಈ ಅಭಿಯಾನ 126 ಮಂದಿ ಕ್ರಿಯೇಟರ್‌ಗಳೊಂದಿಗೆ ಆರಂಭವಾಯ್ತು, ಕೊನೆಗೆ ಉಳಿದಿದ್ದು 20 ಮಂದಿಯಷ್ಟೆ. ಹೈದರಾಬಾದ್ ಇನ್‌ಸ್ಟಾಗ್ರಾಂ ವಿಡಿಯೋ ಕ್ರಿಯೇಟರ್‌ಗಳು ಒಟ್ಟು 1.80 ಮಿಲಿಯನ್ ವೀವ್ಸ್ ಪಡೆದರೆ ಜೋಶ್‌ನ ಕಂಟೆಂಟ್ ಕ್ರಿಯೇಟರ್‌ಗಳ ವಿಡಿಯೋಗಳು 65 ಮಿಲಿಯನ್ ವೀವ್ಸ್ ಪಡೆದವು.

  ಗುರುಗ್ರಾಮದಲ್ಲಿ ಇನ್‌ಸ್ಟಾಗ್ರಾಂನ ವಿಡಿಯೋ ಕ್ರಿಯೇಟರ್‌ಗಳು ಒಟ್ಟು 10 ಮಿಲಿಯನ್ ವೀವ್ಸ್ ದಾಖಲಿಸಿದರೆ ಜೋಶ್‌ನ ಕಂಟೆಂಟ್‌ಗೆ 175 ಮಿಲಿಯನ್ ವೀವ್ಸ್ ದೊರಕಿತು. 'ಜೋಶ್' ಅಪ್ಲಿಕೇಶನ್‌ ನಿಜವಾದ ಪ್ರತಿಭಾನ್ವಿತರನ್ನು ಹುಡುಕುತ್ತಿದ್ದು, ಎಲ್ಲ ಸ್ಟಿರಿಯೋಟೈಪ್‌ಗಳನ್ನು ಮುರಿದು ಹೊಸತನ್ನು ಮೊಗೆದು ಕೊಡುವಂಥಹವರಿಗಾಗಿ ಸದಾ ಹುಡುಕಾಡುತ್ತಿರುತ್ತದೆ.

  'ಜೋಶ್' ಸಂಸ್ಥೆಯು ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತದ ಅತಿ ದೊಡ್ಡ ಶಾರ್ಟ್ ವಿಡಿಯೋ ಅಪ್ಲಿಕೇಶನ್ ಆಗಿದ್ದು, ಜೋಶ್ ತನ್ನ ಸ್ಟಾರ್ ಕ್ರಿಯೇಟರ್ಸ್ ಹಾಗೂ ಹೊಸ ಕ್ರಿಯೇಟರ್‌ಗಳ ನಡುವೆ ಇರುವ ಗ್ಯಾಪ್ ಅನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಕಮ್ಮಿ ಮಾಡಲು ಯತ್ನಿಸುತ್ತಿದೆ. ಹೊಸ ಕ್ರಿಯೇಟರ್‌ಗಳು, ಸ್ಟಾರ್ ಕ್ರಿಯೇಟರ್‌ಗಳಿಂದ ಕಲಿಯುವಂತೆ ಮಾಡುತ್ತಿದೆ.

  ಇದೀಗ ಮಾಡುತ್ತಿರುವ ಮೀಟ್‌ ಅಪ್ ಹಿಂದಿ ಭಾಷೆಯಲ್ಲಿ ಭಾರತದಲ್ಲಿ ಈವರೆಗೂ ನಡೆದಿರದ ಅತಿದೊಡ್ಡ ಮೀಟ್‌ ಅಪ್ ಆಗಿದೆ. ಈ ಮೀಟ್‌ಅಪ್, ಜೋಶ್‌ನ ಸ್ಟಾರ್ ಕ್ರಿಯೇಟರ್‌ಗಳನ್ನು ಹೊಸ ಕ್ರಿಯೇಟರ್‌ಗಳೊಂದಿಗೆ ಸೇರಿಸುತ್ತದೆ. ಅವರಿಂದ ಕಲಿಯಲು, ಸ್ಪೂರ್ತಿ ಪಡೆಯಲು ವೇದಿಕೆಯಾಗಿದೆ. ಜೋಶ್‌ನ ಈ ಮನೊರಂಜನಾತ್ಮಕ 'ಲೈಟ್ಸ್ ಕ್ಯಾಮೆರಾ ಜೋಶ್' ಮೀಟ್‌ಅಪ್‌ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಫಿಲ್ಪಿಬೀಟ್‌ನಲ್ಲಿ ಲಭ್ಯವಾಗಲಿದೆ.

  English summary
  Inida's fastest growing short video application Josh to organize biggest meet up with top creators for lightscamerajosh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X