For Quick Alerts
  ALLOW NOTIFICATIONS  
  For Daily Alerts

  5 ಜಿ ತಂತ್ರಜ್ಞಾನದ ವಿರುದ್ಧ ಹೋರಾಟ: ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ ಹೇಳಿದ್ದೇನು?

  |

  5 ಜಿ ತಂತ್ರಜ್ಞಾನದ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ನಟಿ ಮತ್ತು ಪರಿಸರವಾದಿ ಜೂಹಿ ಚಾವ್ಲಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಮೂಲಕ ಮಾತನಾಡಿರುವ ಜೂಹಿ ಚಾವ್ಲಾ 5ಜಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಬೇಕೆಂದು ಹೇಳಿದ್ದಾರೆ.

  5 ಜಿ ತಂತ್ರಜ್ಞಾನದ ವಿರುದ್ಧ ಹೋರಾಡಲು ದಿಢೀರ್ ಎಚ್ಚೆತ್ತುಕೊಂಡ ಜೂಹಿ ಚಾವ್ಲಾ ಅವರಿಗೆ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಜೀಹಿ, 'ಇಂದು ಎಚ್ಚೆತ್ತುಕೊಂಡಿದ್ದಲ್ಲ. ಕಳೆದ 10 ವರ್ಷಗಳಿಂದ ವಿಕಿರಣ, ಸುರಕ್ಷಿತ ಸೆಲ್ ಫೋನ್ ಬಳಕೆ, ಸೆಲ್ ಫೋನ್ ಟವರ್ ರೇಡಿಯೇಶನ್ ಬಗ್ಗೆ ಮಾತನಾಡುತ್ತಿದ್ದೇನೆ ಮತ್ತು ಸಾಧ್ಯವಾದಷ್ಟು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇನೆ' ಎಂದಿದ್ದಾರೆ.

  5ಜಿ ವಿರುದ್ಧ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಜೂಹಿ ಚಾವ್ಲಾ ವಿರುದ್ಧ ತರಹೇವಾರಿ ಮೀಮ್ ಗಳು ಹರಿದಾಡುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ 'ಜೂಹಿ ಚಾವ್ಲಾ ನನ್ನ ಮೇಲೆ ಮೀಮ್ಸ್ ಗಳು ಹರಿದಾಡುತ್ತಿವೆ. ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಈ ಮೀಮ್ ಗಳಿಂದ ಬಹಳಷ್ಟು ಜನರು ಈ ಬಗ್ಗೆ ತಿಳಿದುಕೊಂಡರು. ಮುಂದುವರೆಸಿ. ಈ ರೈಡ್ ಅನ್ನು ಎಂಜಾಯ್ ಮಾಡೋಣ' ಎಂದು ಜೂಹಿ ಹೇಳಿದ್ದಾರೆ.

  Sonu Sood ಈಗ ಕೆಲವರ ಪಾಲಿನ ದೇವರು | Filmibeat Kannada

  ನಿನ್ನೆ (ಜೂನ್ 2) ಜೂಹಿ ಚಾವ್ಲ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಇದು ದೋಷಯುಕ್ತ ಎಂದು ಹೇಳಿದೆ. ಇದನ್ನು ಮಾಧ್ಯಮ ಪ್ರಚಾರಕ್ಕಾಗಿ ಸಲ್ಲಿಸಲಾಗಿದೆ ಎಂದಿದೆ. ಮೊದಲು ಸರ್ಕಾರವನ್ನು ಸಂಪರ್ಕಿಸಬೇಕು. ಒಂದುವೇಳೆ ಸರ್ಕಾರ ನಿರಾಕರಿಸಿದರೆ ಮಾತ್ರ ಅವರನ್ನು ನ್ಯಾಯಾಲಯಕ್ಕೆ ಬರಬೇಕು ಎಂದು ಕೋರ್ಟ್ ಹೇಳಿದೆ.

  English summary
  Actress Juhi Chawla opens up about Filed Against Implementation Of 5G.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X