For Quick Alerts
  ALLOW NOTIFICATIONS  
  For Daily Alerts

  'ಸಾಂಸ್ಕೃತಿಕ ಕಟ್ಟಾಳು' ನಿಹಾಲಾನಿ ಅವರ 'ಸಂಸ್ಕೃತಿ ಪ್ರಜ್ಞೆ' ಈಗ ಎಲ್ಲಿ ಹೋಯಿತು?

  By Bharath Kumar
  |

  ಕೇಂದ್ರ ಸೆನ್ಸಾರ್ ಮಂಡಳಿಯ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಾಲಾನಿ ವಿರುದ್ಧ ಇಡೀ ಬಾಲಿವುಡ್ ತಿರುಗಿ ಬಿದ್ದಿದೆ. ತಾವು ಮಂಡಳಿಯಲ್ಲಿದ್ದಾಗ ಅನುಸರಿಸುತ್ತಿದ್ದ ಕಟ್ಟುಪಾಡುಗಳನ್ನ ಈಗ ತಮ್ಮದೇ ಚಿತ್ರದಲ್ಲಿ ಪಹ್ಲಾಜ್ ನಿಹಾಲಾನಿ ಗಾಳಿಗೆ ತೂರಿದ್ದಾರೆ ಎಂಬುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

  ಹೌದು, ಸೆನ್ಸಾರ್ ಮಂಡಳಿಯಿಂದ ಹೊರ ಬಂದಿರುವ ಪಹ್ಲಾಜ್ ನಿಹಾಲಾನಿ ಸದ್ಯ, ರೈ ಲಕ್ಷ್ಮಿ ಅಭಿನಯದ 'ಜ್ಯೂಲಿ-2' ಚಿತ್ರವನ್ನ ವಿತರಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿದೆ. 'ಜ್ಯೂಲಿ-2' ಎಂಬ 'ಕಾಮಪ್ರಚೋದಕ' ಚಿತ್ರವನ್ನ 'ಸಂಸ್ಕಾರಿ' ನಿಹಾಲಾನಿ ವಿತರಣೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೀಗ, ಟ್ವಿಟ್ಟರ್ ನಲ್ಲಿ ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ.

  ಲಕ್ಷ್ಮಿ ರೈ ಚೊಚ್ಚಲ ಚಿತ್ರದ ಟೀಸರ್ ಕಂಡು ದಂಗಾದ ಬಾಲಿವುಡ್ಲಕ್ಷ್ಮಿ ರೈ ಚೊಚ್ಚಲ ಚಿತ್ರದ ಟೀಸರ್ ಕಂಡು ದಂಗಾದ ಬಾಲಿವುಡ್

  ಪಹ್ಲಾಜ್ ನಿಹಾಲಾನಿ ಅಧ್ಯಕ್ಷರಾಗಿದ್ದ ವೇಳೆ, ಚಿತ್ರದಲ್ಲಿ ದ್ವಂದ್ವ ಸಂಭಾಷಣೆ ಅಥವಾ ರೋಮ್ಯಾನ್ಸ್ ದೃಶ್ಯವಿದ್ದರೆ ಒಪ್ಪಿಕೊಳ್ಳುತ್ತಿರಲಿಲ್ಲ. ಭಾರತೀಯ ಸಂಸ್ಕ್ರತಿಗೆ ಧಕ್ಕೆ ಬರುತ್ತೆ ಎಂಬ ಕಾರಣ ಹೇಳಿ ಆ ದೃಶ್ಯಗಳಿಗೆ ಕತ್ತರಿ ಹಾಕುತ್ತಿದ್ದರು. ಅಷ್ಟೇ ಅಲ್ಲದೇ, ಆ ಚಿತ್ರಗಳಿಗೆ 'ಯು/ಎ' ಅಥವಾ 'ಎ' ಪ್ರಮಾಣ ಪತ್ರ ನೀಡುತ್ತಿದ್ದರು. ಆದ್ರೀಗ, ತಾವು ವಿತರಣೆ ಮಾಡುತ್ತಿರುವ 'ಜ್ಯೂಲಿ-2' ಚಿತ್ರವೇ ವಯಸ್ಕರ ಸಿನಿಮಾ ಆಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

  'ಜೂಲಿ' ಲಕ್ಷ್ಮಿ ರೈ ಹಾಟ್ ಅವತಾರ ಕಂಡು ಬೆರಗಾದ ಬಾಲಿವುಡ್ ಮಂದಿ!'ಜೂಲಿ' ಲಕ್ಷ್ಮಿ ರೈ ಹಾಟ್ ಅವತಾರ ಕಂಡು ಬೆರಗಾದ ಬಾಲಿವುಡ್ ಮಂದಿ!

  ಇತ್ತೀಚೆಗಷ್ಟೇ ಶಾರೂಖ್ ಖಾನ್ ಅಭಿನಯಿಸಿದ್ದ 'ಜಬ್ ಹ್ಯಾರಿ ಮೆಟ್ ಸೆಜಲ್' ಚಿತ್ರದಲ್ಲಿ ಒಂದು ರೋಮ್ಯಾಂಟಿಕ್ ದೃಶ್ಯವಿದ್ದ ಕಾರಣಕ್ಕೆ 'ಯು' ಬದಲು 'ಯು/ಎ' ಸರ್ಟಿಫಿಕೇಟ್ ನೀಡಿದ್ದವರು ಪಹ್ಲಾಜ್ ನಿಹಾಲಾನಿ. ಕೇವಲ ಶಾರೂಖ್ ಖಾನ್ ಚಿತ್ರಕ್ಕೆ ಮಾತ್ರವಲ್ಲ, ಬಾಲಿವುಡ್ ನ ಹಲವು ಚಿತ್ರಗಳಿಗೆ 'ಸಂಸ್ಕಾರಿ' ನಿಹಾಲಾನಿ ಕಾಡಿದ್ದಾರೆ. ಇವರಿಂದಾಗಿ ಹಲವು ಸಿನಿಮಾಗಳ ಬಿಡುಗಡೆ ಕೂಡ ವಿಳಂಬವಾಗಿದೆ.

  'Julie 2' distributed By Pahlaj Nihalani

  ನಿಹಾಲಾನಿ ಜಾತಕ ಬಲ್ಲವರು ಇದೀಗ 'ಜ್ಯೂಲಿ-2' ಚಿತ್ರದ ಪೋಸ್ಟರ್ ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಹ್ಲಾಜ್ ನಿಹಾಲಾನಿ, ''ನಾನು ಸೆನ್ಸಾರ್ ಮಂಡಳಿಯಲ್ಲಿ ಕೆಲಸ ಮಾಡುತ್ತಿಲ್ಲ. ನಾನೊಬ್ಬ ನಿರ್ಮಾಪಕ ಮತ್ತು ವಿತರಕ. ನಾನು ಅಷ್ಟು ಮಾತ್ರ ಮಾಡುತ್ತಿದ್ದೇನೆ. ಇದು ನನ್ನ ನಿಜವಾದ ಉದ್ಯಮ'' ಎಂದಿದ್ದಾರೆ.

  'ಜ್ಯೂಲಿ'ಯ ಬಿಕಿನಿ ಮೈಮಾಟಕ್ಕೆ 'ವಾಹ್' ಎನ್ನುತ್ತಿರುವ ಚಿತ್ರಜಗತ್ತು'ಜ್ಯೂಲಿ'ಯ ಬಿಕಿನಿ ಮೈಮಾಟಕ್ಕೆ 'ವಾಹ್' ಎನ್ನುತ್ತಿರುವ ಚಿತ್ರಜಗತ್ತು

  ದೀಪಕ್‌ ಶಿವದಾಸನಿ ನಿರ್ದೇಶನದ 'ಜ್ಯೂಲಿ-2' ಅಕ್ಟೋಬರ್ 6 ರಂದು ಬೆಳ್ಳಿತೆರೆಯ ಮೇಲೆ ಬರಲಿದೆ. ಲಕ್ಷ್ಮಿ ರೈ ಜೊತೆಯಲ್ಲಿ ರತಿ ಅಗ್ನಿಹೋತ್ರಿ, ಸಾಹಿಲ್, ಅದಿತ್ಯಾ ಶ್ರೀವಾತ್ಸವ್ ನಟಿಸಿದ್ದಾರೆ.

  English summary
  'Adult Film' Julie 2 Presented and distributed By Central Board of Film Certification Ex chairman Pahlaj Nihalani.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X