For Quick Alerts
  ALLOW NOTIFICATIONS  
  For Daily Alerts

  '83' ಸಿನಿಮಾವನ್ನು ಹಾಳು ಮಾಡಿಬಿಟ್ಟರು: ಕಬೀರ್ ಖಾನ್ ಆರೋಪ

  |

  ಕಬೀರ್ ಖಾನ್ ನಿರ್ದೇಶನದಲ್ಲಿ ರಣಬೀರ್ ಕಪೂರ್ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಬಹುನಿರೀಕ್ಷಿತ ಚಿತ್ರ '83' ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದೆ. ಬಾಲಿವುಡ್ ವಿಶ್ಲೇಷಕರು ನಿರಂತರವಾಗಿ ಚಿತ್ರದ ಪ್ರತಿದಿನದ ಕಲೆಕ್ಷನ್ಸ್ ಬಗ್ಗೆ ರಿಪೋರ್ಟ್ ಮಾಡಿಕೊಂಡೆ ಬಂದಿದ್ದರು. ಜೊತೆಗೆ ಅದನ್ನು 'ಸ್ಪೈಡರ್ ಮ್ಯಾನ್' ಮತ್ತು 'ಪುಷ್ಪ' ಚಿತ್ರದ ಕಲೆಕ್ಷನ್ ಗಳ ಜೊತೆಯಲ್ಲಿ ನಿತ್ಯ ಹೋಲಿಕೆ ಮಾಡುತ್ತಿದ್ದರು. ಹೀಗಾಗಿ ನಿತ್ಯ ಸೋಶಿಯಲ್ ಮೀಡಿಯಾ ಗಳಲ್ಲಿ '83' ಚಿತ್ರದ ಕಲೆಕ್ಷನ್ ಟ್ರೋಲ್ ಗುರಿಯಾಗುತ್ತಲೇ ಬಂದಿದೆ. ಇದರಿಂದ ಕೆರಳಿರುವ ಚಿತ್ರದ ನಿರ್ದೇಶಕ ಕಬೀರ್ ಖಾನ್ ಈಗ ಟ್ರೇಡ್ ವಿಶ್ಲೇಷಕರ ಮೇಲೆ ಮುಗಿದು ಬಿದ್ದಿದ್ದಾರೆ.

  ಈ ವಾರ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಡಬಲ್ ಧಮಾಕಾ

  "ಅವರು ಚಿತ್ರದ ಕಲೆಕ್ಷನ್ ಅನ್ನು ನೆಗಟಿವ್ ರೂಪದಲ್ಲಿ ತೋರಿಸುತ್ತಿದ್ದಾರೆ, ಇದು ವೃತ್ತಿಪರವಲ್ಲದ ನಡವಳಿಕೆ..." ಎಂದು ಕಿಡಿಕಾರಿದ್ದಾರೆ ಕೆಲವು ವ್ಯಾಪಾರ ವಿಶ್ಲೇಷಕರು '83' ಕಲೆಕ್ಷನ್ ಗಳನ್ನು ಹೇಗೆ ವರದಿ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಕಬೀರ್ ಖಾನ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. 260 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ 83 ಚಿತ್ರ ಭಾರತದಲ್ಲಿ ನೂರು ಕೋಟಿ ಮತ್ತು ವಿದೇಶದಲ್ಲಿ 80 ಕೋಟಿ ಸೇರಿ 180 ಕೋಟಿಯನ್ನು ಬಾಕ್ಸಾಫೀಸ್ ನಲ್ಲಿ ಅಂತಿಮವಾಗಿ 180 ಕೋಟಿ ಕಲೆಕ್ಷನ್ ಮಾಡಿದೆ. ಹೀಗಾಗಿ ಈ ಚಿತ್ರವನ್ನು ಅಂತಿಮವಾಗಿ ಒಂದು ದೊಡ್ಡ ಡಿಸಾಸ್ಟರ್ ಚಿತ್ರ ಅಂತ ಘೋಷಣೆ ಮಾಡಲಾಗಿದೆ. ಚಿತ್ರದ ಕಲೆಕ್ಷನ್ ಬಗ್ಗೆ ಮೂಡಿಬಂದಿರುವ ಈ ನಕಾರಾತ್ಮಕ ಅಂಶದ ಬಗ್ಗೆ ನಿರ್ದೇಶಕ ಕಬೀರ್ ಖಾನ್ ಕೆಂಡಾಮಂಡಲರಾಗಿದ್ದಾರೆ.

  ಪ್ರಮುಖ ನಿರ್ದೇಶಕರಲ್ಲಿ ಒಬ್ಬರು ಕಬೀರ್ ಖಾನ್

  ಪ್ರಮುಖ ನಿರ್ದೇಶಕರಲ್ಲಿ ಒಬ್ಬರು ಕಬೀರ್ ಖಾನ್

  ಕಬೀರ್ ಖಾನ್ ಬಾಲಿವುಡ್‌ನ ಪ್ರಮುಖ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರು. ಅವರು ಯಾವುದೇ ಕತೆಯನ್ನು ಅತ್ಯಂತ ಮನರಂಜನೆ ಮತ್ತು ಆಕರ್ಷಕವಾಗಿ ನಿರ್ದೇಶಿಸುತ್ತಾರೆ. ಆದಾಗ್ಯೂ, ಅವರ ಹಿಂದಿನ ಚಲನಚಿತ್ರಗಳು ಉತ್ತಮ ಪ್ರದರ್ಶನ ನೀಡಿದಂತೆಯೇ, '83 'ರ ಗಲ್ಲಾಪೆಟ್ಟಿಗೆಯ ಪ್ರದರ್ಶನ ಕೋವಿಡ್ -19 ರ ಮೂರನೇ ಅಲೆಯ ಪ್ರಭಾವದಿಂದ ಕಾಣಲು ಸಾಧ್ಯವಾಗಿಲ್ಲ. ಅವರ ನಿರ್ದೇಶನದ ಚೊಚ್ಚಲ 'ಕಾಬೂಲ್ ಎಕ್ಸ್‌ಪ್ರೆಸ್‌'ನಿಂದ ಇತ್ತೀಚಿನ '83' ವರೆಗೆ, ಅವರ ವಿಭಿನ್ನತೆ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

  ತಪ್ಪು ವಿಶ್ಲೇಷಣೆ ನೀಡಿದರು: ಕಬೀರ್ ಆರೋಪ

  ತಪ್ಪು ವಿಶ್ಲೇಷಣೆ ನೀಡಿದರು: ಕಬೀರ್ ಆರೋಪ

  ಕಬೀರ್ ಖಾನ್ ಅವರು ಇತ್ತೀಚೆಗೆ IANS ನೊಂದಿಗೆ 83 ಚಿತ್ರದ ಕಲೆಕ್ಷನ್ ಬಗ್ಗೆ ಮಾತನಾಡಿದ್ದಾರೆ, ಅಲ್ಲಿ ಅವರು "ಚಿತ್ರದ ಕಲೆಕ್ಷನ್ ಗಳ ಬಗ್ಗೆ ಕೆಲವು ಚಲನಚಿತ್ರ ವಿಶ್ಲೇಷಕರ ಕಡೆಯಿಂದ ತಪ್ಪಾಗಿ ವರದಿಗಳು ನಿತ್ಯ ಮಾಡಲಾಯಿತು. ನಿತ್ಯ ಇದೊಂದು ಕೆಲಸದಂತೆ ಅವರು ಮಾಡಿಕೊಂಡು ಬಂದರು ಪ್ರತಿನಿತ್ಯ ಕಲೆಕ್ಷನ್ ಗಳ ನಕಾರಾತ್ಮಕವಾದ ವರದಿಯನ್ನೇ ಬಿತ್ತರಿಸಿದರು. ಇದು ಕೂಡ ಎಲ್ಲೋ ಒಂದು ಕಡೆ ಜನಕ್ಕೆ ಚಿತ್ರಮಂದಿರಕ್ಕೆ ಬರುವುದರಲ್ಲಿ ನಿರಾಸಕ್ತಿಯನ್ನು ಉಂಟುಮಾಡಿರಬಹುದು. ಆದರೆ ನಾವು '83' ರ ರೂಪದಲ್ಲಿ ಪ್ರೇಕ್ಷಕರಿಗೆ ಜೀವಿತಾವಧಿಯ ಒಂದು ಅತ್ಯುತ್ತಮ ಕಥೆಯನ್ನು ಅವರ ಮುಂದಿಟ್ಟಿದ್ದೇವೆ ಎಂಬ ಸಂತೃಪ್ತಿ ಇದೆ" ಎಂದು ಹೇಳಿದ್ದಾರೆ.

  '83' ಚಿತ್ರಕ್ಕಾಗಿ ಅಪಾರವಾದ ಶ್ರಮ ಹಾಕಿದೆವು

  '83' ಚಿತ್ರಕ್ಕಾಗಿ ಅಪಾರವಾದ ಶ್ರಮ ಹಾಕಿದೆವು

  "ನಾವು '83' ಚಲನಚಿತ್ರವನ್ನು ನಿರ್ಮಿಸಿ, 2 ವರ್ಷಗಳ ಕಾಲ ನಿರಂತರವಾಗಿ ಅದನ್ನು ತೆರೆಯ ಮೇಲೆ ತರಲು ಶ್ರಮಿಸಿದ್ದೇವೆ. ಏಕೆಂದರೆ ಜನರು ಅದನ್ನು ದೊಡ್ಡ ಪರದೆಯ ಮೇಲೆ ನೋಡಬೇಕೆಂದು ನಾವು ಬಯಸುತ್ತಿದ್ದೇವೆ ಎಂದು ನಮಗೆ ಖಚಿತವಾಗಿತ್ತು. ನಾವು ಅದನ್ನು ದೊಡ್ಡ ಪರದೆ ಅಥವಾ ಸಿನಿಮಾ ವೀಕ್ಷಣೆಯ ಅನುಭವ ಕ್ಕಾಗಿಯೇ ಅದನ್ನು ವಿನ್ಯಾಸಗೊಳಿಸಿದ್ದು". ಎನ್ನುವ ಕಬೀರ್ 83 ಚಿತ್ರದ ತಯಾರಿಕೆ ಹಿಂದಿರುವ ಶ್ರಮದ ಬಗ್ಗೆ ಮಾತನಾಡುತ್ತಾರೆ "83, ಎರಡು ವರ್ಷಗಳ ಪ್ರಕ್ರಿಯೆಯಾಗಿದೆ. ಏಕೆಂದರೆ ಅದರ ಪಯಣ ತುಂಬಾ ದೊಡ್ಡದಾಗಿತ್ತು. ಈವೆಂಟ್‌ಗಳು, ಜನರು, ಬಟ್ಟೆ, ಕೂದಲು, ಪರಿಕರಗಳು ಎಲ್ಲವೂ 80 ರ ದಶಕದ ಹಿಂದೆ ಇದ್ದದ್ದಕ್ಕಿಂತ ಭಿನ್ನವಾಗಿದೆ. ರಚನೆಗಳ ಸೆಟ್ಟಿಂಗ್, ಉಲ್ಲೇಖ, ಸಂಶೋಧನೆ, ಪಂದ್ಯಗಳ ಲೈವ್ ರೆಕಾರ್ಡಿಂಗ್‌ನಿಂದ ರೇಡಿಯೊ ಕಾಮೆಂಟರಿಯವರೆಗೆ, ಚಲನಚಿತ್ರವನ್ನು ತುಂಡು ತುಂಡುಗಳಾಗಿ ಜೋಡಿಸಲಾಗಿದೆ'' ಎಂದಿದ್ದಾರೆ.

  ಕರೋನಾ ದೊಡ್ಡ ಹೊಡೆತ ನೀಡಿತು : ಕಬೀರ್ ಖಾನ್

  ಕರೋನಾ ದೊಡ್ಡ ಹೊಡೆತ ನೀಡಿತು : ಕಬೀರ್ ಖಾನ್

  "83 ಚಿತ್ರದ ತಯಾರಿಕೆಯ ಬಗ್ಗೆ ನಮಗೆ ಸಂಪೂರ್ಣವಾದ ತೃಪ್ತಿಯಾಗಿದೆ. ಆದರೆ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಉಂಟಾದ ಮೂರನೇ ಅಲೆ ಚಿತ್ರದ ಕಲೆಕ್ಷನ್ ಮೇಲೆ ನೆಗಟಿವ್ ಇಂಪ್ಯಾಕ್ಟ್ ಕ್ರಿಯೇಟ್ ಮಾಡಿದೆ. ಚಿತ್ರ ವಿಮರ್ಶಕರು ಕೂಡ ಚಿತ್ರವನ್ನು ಮೆಚ್ಚಿ ಒಳ್ಳೆ ರಿವ್ಯೂ ಗಳನ್ನು ಬರೆದರು, ಜನ ನೋಡಿದವರು ಕೂಡ ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ನೀಡಿದರು. ಆದರೆ ಇದೇ ಸಮಯದಲ್ಲಿ ಕೊರೊನಾ ಮೂರನೇ ಅಲೆ ಕಾರಣದಿಂದ ನಿತ್ಯ 1.6 ಲಕ್ಷ ಪ್ರಕರಣಗಳನ್ನು ದಾಖಲಾಗಲು ಆರಂಭವಾಯಿತು. ಚಿತ್ರ ಬಿಡುಗಡೆಯಾದ ಎರಡನೇ ದಿನದ ಹೊತ್ತಿಗೆ, 3 ರಾಜ್ಯಗಳು ರಾತ್ರಿ ಕರ್ಫ್ಯೂ ಘೋಷಿಸಿದವು. 4 ನೇ ದಿನದಂದು, ದೊಡ್ಡ ಪ್ರದೇಶವಾದ ದೆಹಲಿಯು ತನ್ನ ಚಿತ್ರಮಂದಿರಗಳನ್ನು ಮುಚ್ಚಲು ನಿರ್ಧರಿಸಿತು, ಇದು ಚಿತ್ರದ ವ್ಯವಹಾರದ ಮೇಲೆ ತೀವ್ರ ಪರಿಣಾಮ ಬೀರಿತು. 6 ನೇ ದಿನದ ಹೊತ್ತಿಗೆ ಇನ್ನೂ 2-3 ರಾಜ್ಯಗಳು ತಮ್ಮ ಚಿತ್ರಮಂದಿರಗಳನ್ನು ಮುಚ್ಚಿದವು, ಇನ್ನೂ 10-11 ರಾಜ್ಯಗಳು ರಾತ್ರಿ ಕರ್ಫ್ಯೂ ಅಡಿಯಲ್ಲಿವೆ. ಕೆಲವೆಡೆ ಥಿಯೇಟರ್‌ಗಳು ಶೇ 33ರಷ್ಟು ಅಥವಾ ಶೇ 50ರಷ್ಟು ಆಕ್ಯುಪೆನ್ಸಿಯಲ್ಲಿ ನಡೆಯುತ್ತಿತ್ತು. ಹಾಗಾಗಿ ಥಿಯೇಟರ್‌ಗಳಲ್ಲಿ ಜನರಿಗೆ ಲಭ್ಯವಾಗುವಂತೆ ಮಾಡಲು ಸಾಧ್ಯವಾಗದ ವಿಷಯದಲ್ಲಿ ಇದು ನಮಗೆ ನಿಜವಾಗಿಯೂ ನಿರಾಶಾದಾಯಕವಾಗಿದೆ'' ಎಂದಿದ್ದಾರೆ.

  ಟ್ರೇಡ್ ವಿಶ್ಲೇಷಕರು ಚಿತ್ರವನ್ನು ನಾಶಮಾಡಿದರು: ಕಬೀರ್ ಖಾನ್

  ಟ್ರೇಡ್ ವಿಶ್ಲೇಷಕರು ಚಿತ್ರವನ್ನು ನಾಶಮಾಡಿದರು: ಕಬೀರ್ ಖಾನ್

  "ಒಂದೆಡೆ ಚಿತ್ರ ಕರೋನಾ ಕಾರಣದಿಂದ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಇನ್ನೊಂದಡೆ ಟ್ರೇಡ್ ವಿಶ್ಲೇಷಕರು ನಿತ್ಯ ಚಿತ್ರದ ಕಲೆಕ್ಷನ್ ಗಳ ಬಗ್ಗೆ ನಕಾರಾತ್ಮಕವಾಗಿ ಕಲೆಕ್ಷನ್ ರಿಪೋರ್ಟನ್ನು ಹಿಡಿದು ವ್ಯವಸ್ಥಿತವಾಗಿ ಅಪಪ್ರಚಾರ ಮಾಡಿಕೊಂಡೆ ಬಂದರು. ಚಿತ್ರದ ಯಶಸ್ಸು ಎಂಬುದು ಕೇವಲ ಹಣದ ಮೇಲೆ ನಿಂತಿಲ್ಲ ಅದು ಜನರ ಮನಸ್ಸಿನಲ್ಲಿ ಎಷ್ಟು ಕಾಲ ಉಳಿಯುತ್ತದೆ ಎಂಬುದರ ಮೇಲೆ ನಿರ್ಧರಿಸಲಾಗುತ್ತದೆ ಮತ್ತು ಆ '83' ಪ್ರೇಕ್ಷಕರ ಹೃದಯದಲ್ಲಿ ಬಹಳ ವಿಶೇಷವಾದ ಸ್ಥಾನವನ್ನು ಹೊಂದಿದೆ" ಎಂದಿದ್ದಾರೆ.

  English summary
  Kabir Khan holds certain section of film trade accountable for reporting the numbers without context.However he adds that despite pandemic 83 has Impressed people.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X