For Quick Alerts
  ALLOW NOTIFICATIONS  
  For Daily Alerts

  ಹೊಸ ಚಿತ್ರಕ್ಕೆ ದಾಖಲೆ ಸಂಭಾವನೆ ಪಡೆದ ಕಾಜಲ್ ಅಗರ್‌ವಾಲ್

  |

  ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್‌ವಾಲ್ ಮದುವೆ ಬಳಿಕ ಸಿನಿಮಾಗಳ ಆಯ್ಕೆಯ ವಿಚಾರದಲ್ಲಿ ಹೆಚ್ಚು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಸೂಕ್ತ ಹಾಗೂ ಇಷ್ಟ ಆಗುವ ಚಿತ್ರಗಳಿಗೆ ಮಾತ್ರ ಸಮ್ಮತಿ ಸೂಚಿಸುತ್ತಿದ್ದಾರೆ.

  ಮದ್ವೆ ಆದ್ಮೇಲೆ ನಟಿಯರು ಮಹಿಳಾ ಪ್ರಧಾನ ಕಥೆಗಳ ಕಡೆ ಆಸಕ್ತಿ ತೋರುವುದು ಸಾಮಾನ್ಯ. ಕಾಜಲ್ ಸಹ ಇದೇ ಮಾರ್ಗದಲ್ಲಿ ಹೆಜ್ಜೆಯಿಟ್ಟಿದ್ದಾರೆ. ಹಿಂದಿಯಲ್ಲಿ ಹೊಸ ಚಿತ್ರ ಕೈಗೆತ್ತಿಕೊಂಡಿರುವ ಕಾಜಲ್ ಭಾರಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  'ಪತಿ ಹೇಳಿದ್ರೆ ನಟನೆ ಬಿಡ್ತೀನಿ' ಎಂದ ಕಾಜಲ್ ಹೊಸ ಚಿತ್ರಕ್ಕೆ ಸಹಿ 'ಪತಿ ಹೇಳಿದ್ರೆ ನಟನೆ ಬಿಡ್ತೀನಿ' ಎಂದ ಕಾಜಲ್ ಹೊಸ ಚಿತ್ರಕ್ಕೆ ಸಹಿ

  ಕಾಜಲ್ ಮಹಿಳಾ ಪ್ರಧಾನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಆ ಸಿನಿಮಾಗೆ 'ಉಮಾ' ಎಂದು ಹೆಸರಿಡಲಾಗಿದೆ. ಈ ಪ್ರಾಜೆಕ್ಟ್‌ಗಾಗಿ ಮಗಧೀರ ನಟಿ 2 ಕೋಟಿ ಸಂಭಾವನೆಯ ಚೆಕ್ ಪಡೆದಿದ್ದಾರೆ ಎನ್ನುವ ಮಾತಿದೆ.

  ಇದುವರೆಗಿನ ಕಾಜಲ್ ವೃತ್ತಿ ಬದುಕಿನಲ್ಲಿ ಇದೇ ದೊಡ್ಡ ಮೊತ್ತ ಎಂಬ ವರದಿಯಾಗಿದೆ. ತಥಾಗತ ಸಿಂಘಾ ಈ ಸಿನಿಮಾ ನಿರ್ದೇಶಿಸುತ್ತಿದ್ದು, ಮಿರಾಜ್ ಗ್ರೂಪ್‌ನ ಮಂತ್ರರಾಜ್ ಪಾಲಿವಾಲ್ ಮತ್ತು ಅವಿರೇಶ್ ಘೋಷ್ ನಿರ್ಮಿಸುತ್ತಿದ್ದಾರೆ. 2022ರ ಆರಂಭದಲ್ಲಿ ಸಿನಿಮಾ ಸೆಟ್ಟೇರಲಿದೆ.

  ಕಾಜಲ್ ಅಗರ್‌ವಾಲ್ ಸಿನಿಮಾಗಳು

  Recommended Video

  ನಯನತಾರ ಮದುವೆ ವಿಳಂಬಕ್ಕೆ ಕಾರಣ ಕೊಟ್ಟ ಬಾಯ್ ಫ್ರೆಂಡ್ | Filmibeat Kannada

  ದುಲ್ಕರ್ ಸಲ್ಮಾನ್ ಜೊತೆ ನಟಿಸಿರುವ 'ಹೇ ಸಿನಾಮಿಕ' ಶೂಟಿಂಗ್ ಕಂಪ್ಲೀಟ್ ಆಗಿದ್ದು, ತೆರೆಗೆ ಬರಲು ಸಜ್ಜಾಗಿದೆ. ಚಿರಂಜೀವಿ ಜೊತೆ 'ಆಚಾರ್ಯ' ಸಿನಿಮಾದಲ್ಲಿ ನಟಿಸಿದ್ದಾರೆ. ತಮಿಳಿನ ಹಾರರ್ ಚಿತ್ರವೊಂದನ್ನು ಆರಂಭಿಸಿದ್ದಾರೆ. ಕಮಲ್ ಹಾಸನ್ ಜೊತೆ 'ಇಂಡಿಯನ್ 2' ಮಾಡಲಿದ್ದಾರೆ. ಕ್ವೀನ್ ರಿಮೇಕ್ 'ಪ್ಯಾರಿಸ್ ಪ್ಯಾರಿಸ್' ರಿಲೀಸ್‌ಗೆ ರೆಡಿಯಿದೆ. ಇನ್ನು ಹೆಸರಿಡದ ತಮಿಳು ಹಾಗೂ ತೆಲುಗು ಚಿತ್ರಗಳು ಇದೆ.

  English summary
  South indian actress kajal agarwal taking 2 crore remuneration for her next film.
  Monday, June 28, 2021, 21:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X