Don't Miss!
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Automobiles
ಟಾಟಾಗೆ ಸೆಡ್ಡು ಹೊಡೆಯಲು 6 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮಾರುತಿ ಸುಜುಕಿ
- Finance
Multibagger stock: 1 ವರ್ಷದಲ್ಲೇ ಶೇ.1000 ರಿಟರ್ನ್ ಪಡೆಯಿರಿ!
- Technology
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- Lifestyle
ಒಣಕೆಮ್ಮಿಗೆ ಕಾರಣವೇನು? ಯಾವ ಮನೆಮದ್ದು ಒಳ್ಳೆಯದು?
- Sports
IND vs AUS Test : ಫೆಬ್ರವರಿ 1 ರಂದು ಭಾರತಕ್ಕೆ ಆಸ್ಟ್ರೇಲಿಯಾ ತಂಡ : ಬೆಂಗಳೂರಿನಲ್ಲಿ ಅಭ್ಯಾಸ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾಜೋಲ್ ಮಗಳ ಜೊತೆ ಶಾರುಖ್ ಖಾನ್ ಪುತ್ರನ ಮದುವೆ ಸುದ್ದಿ ವೈರಲ್
ಬಾಲಿವುಡ್ ನಟಿ ಕಾಜೋಲ್ ಪುತ್ರಿ ಜೊತೆ ಶಾರುಖ್ ಖಾನ್ ಮಗನ ಮದುವೆ ಸುದ್ದಿ ವೈರಲ್ ಆಗಿದೆ. ಶಾರುಖ್ ಮತ್ತು ಕಾಜೋಲ್ ಇಬ್ಬರು ಬಾಲಿವುಡ್ ನ ಮೋಸ್ಟ್ ಸಕ್ಸಸ್ ಫುಲ್ ಜೋಡಿ. ತೆರೆಮೇಲೆ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಶಾರುಖ, ಕಾಜೋಲ್ ಜೋಡಿ ಕೂಡ ಒಂದು. ಇಬ್ಬರು ತೆರೆ ಮೇಲೆ ಮಾತ್ರವಲ್ಲ ತೆರೆಹಿಂದೆಯೂ ಕೂಡ ಉತ್ತಮ ಸ್ನೇಹಿತರು.
ಈ ಜೋಡಿ ಅಭಿನಯದ ಸೂಪರ್ ಹಿಟ್ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾ ರಿಲೀಸ್ ಆಗಿ 25 ವರ್ಷಗಳನ್ನು ಪೂರೈಸಿದೆ. ಈ ಸಮಯದಲ್ಲಿ ಶಾರುಖ್ ಮತ್ತು ಕಾಜೋಲ್ ಮಕ್ಕಳ ಮದುವೆ ಸುದ್ದಿ ವೈರಲ್ ಆಗಿರುವುದು ಅಚ್ಚರಿ ಮೂಡಿಸಿದೆ. ಅಂದ್ಹಾಗೆ ಕಾಜೋಲ್ ಮಗಳ ಜೊತೆ ಶಾರುಖ್ ಪುತ್ರನ ಮದುವೆ ಫಿಕ್ಸ್ ಆಗಿದೆಯಾ ಅಂತ ಯೋಚಿಸಬೇಡಿ. ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ಕಾಜೋಲ್ ಮಗಳು ನೈಸಾ ಜೊತೆ ಓಡಿ ಹೋಗಿ ಮದುವೆಯಾದರೆ? ಎನ್ನುವ ಪ್ರಶ್ನೆ 2007ರ ಸಂದರ್ಶನದಲ್ಲಿ ಕಾಜೋಲ್ ಗೆ ಎದುರಾಗಿತ್ತು. ಸಂದರ್ಶನದ ಈ ಪ್ರಶ್ನೆ ಈಗ ವೈರಲ್ ಆಗಿದೆ.
'DDLJ'
ಚಿತ್ರಕ್ಕೆ
25ನೇ
ವರ್ಷದ
ಸಂಭ್ರಮ:
ಹೆಸರು
ಬದಲಾಯಿಸಿಕೊಂಡ
ಶಾರುಖ್-ಕಾಜೋಲ್
ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಕರಣ್ ಜೋಹರ್, ಕಾಜೋಲ್ ಗೆ ಈ ಪ್ರಶ್ನೆ ಮಾಡುತ್ತಾರೆ. ಕರಣ್ ಕೇಳಿದ ಪ್ರಶ್ನೆಗೆ ಕಾಜೋಲ್ 'ದಿಲ್ ವಾಲೆ ದುಲ್ಹೆ ಲೇ ಜಾಯೇಂಗೆ' ಎಂದು ಉತ್ತರಿಸುತ್ತಾರೆ. ಅಂದರೆ 'ಮದುಮಗನನ್ನು ಹೃದಯವಂತಳು ಕರೆದುಕೊಂಡು ಹೋಗುತ್ತಾಳೆ' ಎನ್ನುವ ಅರ್ಥದಲ್ಲಿ ಹೇಳಿದರು. ಕಾಜೋಲ್ ಉತ್ತರಕ್ಕೆ ಶಾರುಖ್ ಜೋರಾಗಿ ನಕ್ಕು ಈ ಜೋಕ್ ನನಗೆ ಅರ್ಥವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದರು.
'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾದ 25ನೇ ವರ್ಷದ ಸಂದರ್ಭದಲ್ಲಿ ಸಾಕಷ್ಟು ಇಂಟರೆಸ್ಟಿಂಗ್ ವಿಚಾರಗಳು ವೈರಲ್ ಆಗುತ್ತಿವೆ. ಅಭಿಮಾನಿಗಳು ಈಗ ಅನೇಕ ವಿಚಾರಗಳನ್ನು ನೆನಪು ಮಾಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದರೆ. ಇನ್ನೂ ಇದೇ ಸಂಭ್ರಮದಲ್ಲಿ ಈ ಸೂಪರ್ ಹಿಟ್ ಸಿನಿಮಾವನ್ನು ರೀ ರಿಲೀಸ್ ಮಾಡಲಾಗುತ್ತಿದೆ.
Recommended Video
ಕಾಜೋಲ್ ಮತ್ತು ಶಾರುಖ್ ಇಬ್ಬರು ಟ್ವಿಟ್ಟರ್ ನಲ್ಲಿ ಹೆಸರು ಬದಲಾಸಿಕೊಂಡಿದ್ದಾರೆ. DDLJ ಸಿನಿಮಾದ ಪ್ರಸಿದ್ಧ ಪಾತ್ರಗಳಾದ ರಾಜ್ ಮಲ್ಹೋತ್ರಾ ಮತ್ತು ಸಿಮ್ರಾನ್ ಹೆಸರನ್ನು ಶಾರುಖ್ ಮತ್ತು ಕಾಜೋಲ್ ಇಟ್ಟುಕೊಂಡಿದ್ದಾರೆ. 25ನೇ ವರ್ಷದ ನೆನಪಿಗೆ ಲಂಡನ್ ನಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ಇಬ್ಬರ ಕಂಚಿನ ಪ್ರತಿಮೆ ಅನಾವರಣವಾಗುತ್ತಿದೆ.