For Quick Alerts
  ALLOW NOTIFICATIONS  
  For Daily Alerts

  ವಿದೇಶಿಗನ ಜೊತೆ ಪ್ರೀತಿಗೆ ಬಿದ್ದ ಕತೆ ಹಂಚಿಕೊಂಡ ಅನುರಾಗ್ ಮಾಜಿ ಪತ್ನಿ ಕಲ್ಕಿ ಕೆಕ್ಲಾ

  |

  ಬಾಲಿವುಡ್ ನಟಿ ಕಲ್ಕಿ ಕೆಕ್ಲಾ ಇದೀಗ ಬಾಯ್‌ಫ್ರೆಂಡ್‌ ಹೆರ್ಷ್‌ಬರ್ಗ್‌ ಜೊತೆಗೆ ದಿನಗಳನ್ನು ಕಳೆಯುತ್ತಿದ್ದಾರೆ. ಈ ಜೋಡಿಗೆ ಕೆಲವು ದಿನಗಳ ಹಿಂದಷ್ಟೆ ಮುದ್ದಾದ ಹೆಣ್ಣು ಮಗುವಾಗಿದೆ.

  ಈ ಹಿಂದೆ ನಿರ್ದೇಶಕ ಅನುರಾಗ್ ಕಶ್ಯಪ್ ಜೊತೆ ವಿವಾಹವಾಗಿದ್ದ ಕಲ್ಕಿ, ವಿಚ್ಛೇಧನ ಪಡೆದುಕೊಂಡರು. ಇದೀಗ ಹೆರ್ಷ್‌ಬರ್ಗ್‌ ಜೊತೆ ಲಿವ್‌ಇನ್ ರಿಲೇಶನ್‌ಶಿಪ್‌ನಲ್ಲಿರುವ ಕಲ್ಕಿ, ತಾವು ಹೆರ್ಷಬರ್ಗ್ ಅನ್ನು ಭೇಟಿಯಾಗಿದ್ದು ಹೇಗೆ, ಪ್ರೀತಿಸಿದ್ದು ಹೇಗೆ, ತಮ್ಮ ಸಂಬಂಧ ಹೇಗಿದೆ ಎಂಬ ಬಗ್ಗೆ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.

  ಕಲ್ಕಿ ಕೆಕ್ಲಾ, ತಮ್ಮ ಬಾಯ್‌ಫ್ರೆಂಡ್ ಅನ್ನು ಪ್ರವಾಸವೊಂದಕ್ಕೆ ಹೋಗುತ್ತಿರಬೇಕಾದರೆ ಪೆಟ್ರೋಲ್ ಪಂಪ್‌ನಲ್ಲಿ ಭೇಟಿ ಮಾಡಿದ್ದರಂತೆ. ಅಲ್ಲಿಂದ ಮಾತು ಆರಂಭಿಸಿ, ಹಾಗೆಯೇ ಪರಸ್ಪರ ಹತ್ತಿರವಾದರಂತೆ ಇಬ್ಬರು. ಇದೀಗ ಇಬ್ಬರಿಗೂ ಮಗುವೂ ಸಹ ಆಗಿದೆ.

  ಜೆರುಸುಲೆಮ್‌ಗೆ ತೆಂಗಿನಕಾಯಿ ತೆಗೆದುಕೊಂಡು ಹೋಗುತ್ತಾರೆ ಕಲ್ಕಿ

  ಜೆರುಸುಲೆಮ್‌ಗೆ ತೆಂಗಿನಕಾಯಿ ತೆಗೆದುಕೊಂಡು ಹೋಗುತ್ತಾರೆ ಕಲ್ಕಿ

  ಜೆರುಸುಲೆಮ್‌ನ ವಾಸಿಯಾಗಿರುವ ಹೆರ್ಷ್‌ಬರ್ಗ್ ಅನ್ನು ನೋಡಲು ಕಲ್ಕಿ ಜೆರುಸುಲೆಮ್‌ಗೆ ತೆರಳಿದರೆ, ಕಲ್ಕಿಯನ್ನು ನೋಡಲು ಹೆರ್ಷ್‌ಬರ್ಗ್ ಮುಂಬೈಗೆ ಬರುತ್ತಾರಂತೆ. ಹೀಗೆ ಹೋಗುವಾಗ, ಕಲ್ಕಿ ತೆಂಗಿನಕಾಯಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಹೆರ್ಷ್‌ಬರ್ಗ್, ಆರೆಂಜ್, ಅವಕಾಡೊಗಳನ್ನು ಅಲ್ಲಿಂದ ಹೊತ್ತು ತರುತ್ತಾರಂತೆ.

  ಬಿರಿಯಾನಿ ಮಾಡುವುದು ಕಲಿಸಿದ್ದಾರೆ ಕಲ್ಕಿ

  ಬಿರಿಯಾನಿ ಮಾಡುವುದು ಕಲಿಸಿದ್ದಾರೆ ಕಲ್ಕಿ

  ಮಧ್ಯ-ಪೂರ್ವ ದೇಶಗಳ ಉಪಹಾರ ಸೇವಿಸುವಂತೆ ಹೆರ್ಷ್‌ಬರ್ಗ್ ಮಾಡಿದರೆ, ದಿನಕ್ಕೆ ಮೂರು ಬಾರಿ ಊಟ ಮಾಡುವ ಅಭ್ಯಾಸವನ್ನು ಕಲ್ಕಿ, ಹೆರ್ಷ್‌ಬರ್ಗ್‌ಗೆ ಮಾಡಿಸಿದ್ದಾರಂತೆ. ಹೆರ್ಚ್‌ಬರ್ಗ್‌ಗೆ ಬಿರಿಯಾನಿ ಮಾಡುವುದು ಹೇಳಿಕೊಟ್ಟಿದ್ದಾರಂತೆ ಕಲ್ಕಿ, ಅವರೂ ಸಹ ಶಾಕ್ಶುಕಾ ಮಾಡುವುದು ಕಲಿತಿದ್ದಾರಂತೆ.

  ಹಿಂದಿ ತರಗತಿ ಸೇರಿರುವ ಹೆರ್ಷ್‌ಬರ್ಗ್

  ಹಿಂದಿ ತರಗತಿ ಸೇರಿರುವ ಹೆರ್ಷ್‌ಬರ್ಗ್

  ಕಲ್ಕಿಗಾಗಿ ಹೆರ್ಷ್‌, ಹಿಂದಿ ತರಗತಿ ಸೇರಿದ್ದಾರೆ ಜೊತೆಗೆ ಫ್ರೆಂಚ್ ಸಿನಿಮಾಗಳನ್ನು ನೋಡಲು ಪ್ರಾರಂಭಿಸಿದ್ದಾರಂತೆ. ಇನ್ನು ಕಲ್ಕಿ, ಆನ್‌ಲೈನ್ ಹಿಬ್ರೂ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರಂತೆ ಮತ್ತು ಪಾಶ್ಚಿಮಾತ್ಯ ಸಂಗೀತ ಕೇಳಲು ಆರಂಭಿಸಿದ್ದಾರೆ.

  ಹೆರ್ಷ್‌ಬರ್ಗ್ ಜ್ಯೂಯಿಶ್, ಕಲ್ಕಿ ಫ್ರೆಂಚ್-ಇಂಡಿಯನ್

  ಹೆರ್ಷ್‌ಬರ್ಗ್ ಜ್ಯೂಯಿಶ್, ಕಲ್ಕಿ ಫ್ರೆಂಚ್-ಇಂಡಿಯನ್

  ಪೋಲಿಷ್, ಇರಾನಿ, ರಷ್ಯನ್ ಪೋಷಕರನ್ನು ಹೊಂದಿರುವ ಹೆರ್ಷ್‌ಬರ್ಗ್ ಜ್ಯೂಯಿಷ್ ಆಗಿದ್ದಾರೆ. ಇನ್ನು ಕಲ್ಕಿ ಫ್ರೆಂಚ್ ಆಗಿದ್ದರೂ ಭಾರತದಲ್ಲೇ ಹುಟ್ಟಿ ಇಲ್ಲಿಯೇ ಬೆಳೆದಿದ್ದಾರೆ. ಮಗಳಿಗೆ ಗ್ರೀಕ್ ಹೆಸರನ್ನು ಇಟ್ಟಿದ್ದಾರೆ ಈ ಜೋಡಿ. ಮಗಳೊಂದಿಗೆ ಹಿಬ್ರು, ಹಿಂದಿ, ತಮಿಳು, ಫ್ರೆಂಚ್‌ ನಲ್ಲಿ ಮಾತನಾಡುತ್ತಾರಂತೆ ಇವರು.

  ಹೋಟೆಲ್ ನಲ್ಲಿ ವೈನ್ ಬಾಟೇಲ್ ಹಿಡಿದು ನಿಂತ ದರ್ಶನ್ | Filmibeat Kannada
  ಇಬ್ಬರೂ ದಿನವೂ ಜಗಳವಾಡುತ್ತಾರಂತೆ

  ಇಬ್ಬರೂ ದಿನವೂ ಜಗಳವಾಡುತ್ತಾರಂತೆ

  ಮನೆಯಲ್ಲಿ ಯಾವುದೇ ಧಾರ್ಮಿಕ ಆಚರಣೆಯನ್ನು ಈ ಜೋಡಿ ಮಾಡುವುದಿಲ್ಲವಂತೆ. ಆದರೆ ಅವರವರ ಸಂಪ್ರದಾಯದ ಆಹಾರ ಸೇವಿಸುವುದು, ಉಡುಪು ಧರಿಸುವುದು ಮಾಡುತ್ತಾರಂತೆ. ಯಾರು ಪಾತ್ರೆ ತೊಳೆಯಬೇಕು ಎಂಬುದನ್ನು ಪ್ರತಿದಿನ ಜಗಳವಾಡುತ್ತಾರಂತೆ. ಮತ್ತು ಊಟದ ನಂತರ ಡೆಸರ್ಟ್‌ ಅನ್ನು ಇಬ್ಬರೂ ಸಮಾನವಾಗಿ ಹಂಚಿಕೊಳ್ಳುತ್ತಾರಂತೆ.

  English summary
  kalki koechlintalks about her boyfriend Guy Hershberg. They both have a baby girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X