For Quick Alerts
  ALLOW NOTIFICATIONS  
  For Daily Alerts

  'ಅಕ್ಷಯ್ ನಿನ್ನ ಬಯೋಪಿಕ್ ಮಾಡ್ಸಪ್ಪಾ, ಕೆನಡಾಗೆ ಎಷ್ಟು ಆಸ್ತಿ ಹೋಗಿದೆ ಗೊತ್ತಾಗುತ್ತೆ'

  |

  ಟೋಕಿಯೋ ಒಲಂಪಿಕ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದರು. ನೀರಜ್ ಚೋಪ್ರಾ ಚಿನ್ನ ಗೆದ್ದ ಸಂಭ್ರಮವನ್ನು ಇಡೀ ಭಾರತ ಕೊಂಡಾಡಿದೆ. ಜಾವಲಿನ್ ಸ್ಪರ್ಧೆಯಲ್ಲಿ ನೀರಜ್ ಗೆಲುವು ಸಾಧಿಸುತ್ತಿದ್ದಂತೆ ಬಾಲಿವುಡ್‌ನಲ್ಲಿ ಬಯೋಪಿಕ್ ಕುರಿತು ಚರ್ಚೆ ಹುಟ್ಟಿಕೊಂಡಿತು. ಚಿನ್ನದ ಪದಕ ಗೆದ್ದ ಅಥ್ಲೆಟ್ ಜೀವನ ಆಧರಿಸಿ ಸಿನಿಮಾ ಮಾಡಬೇಕು ಎನ್ನುವ ಸುದ್ದಿ ವೈರಲ್ ಆಯಿತು.

  ವಿಶೇಷವಾಗಿ ನೀರಜ್ ಚೋಪ್ರಾ ಬಯೋಪಿಕ್ ಮಾಡಲು ಅಕ್ಷಯ್ ಕುಮಾರ್ ಸೂಕ್ತ ಆಯ್ಕೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದರು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಅಕ್ಷಯ್ ಕುಮಾರ್ ಕುರಿತು ಕೆಲವು ಗಂಭೀರ ಆರೋಪಗಳನ್ನು ಮಾಡುವ ಮೂಲಕ ವಿವಾದಾತ್ಮಕ ವಿಶ್ಲೇಷಕ ಕಮಲ್ ಆರ್ ಖಾನ್ ಸುದ್ದಿಯಾಗಿದ್ದಾರೆ.

  ಒಲಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ: ಅಕ್ಷಯ್ ಕುಮಾರ್ ಟ್ರೆಂಡಿಂಗ್ಒಲಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ: ಅಕ್ಷಯ್ ಕುಮಾರ್ ಟ್ರೆಂಡಿಂಗ್

  ಈ ಹಿಂದೆ 2018ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ ಪ್ರಶಸ್ತಿ ಗಳಿಸಿದ್ದರು. ಆ ಸಂದರ್ಭದಲ್ಲಿ ನೀರಜ್ ಚೋಪ್ರಾ ತನ್ನ ಬಯೋಪಿಕ್ ವಿಷಯವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ನಿಮ್ಮ ಬಯೋಪಿಕ್ ಮಾಡುವುದಾದರೆ ಯಾವ ಕಲಾವಿದನನ್ನು ನೀವು ಆಯ್ಕೆ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ, ''ಒಂದು ವೇಳೆ ನನ್ನ ಬಯೋಪಿಕ್ ಬಂದಿದ್ದೆ ಆದರೆ ನಿಜಕ್ಕೂ ಅದು ಅದ್ಭುತ. ವಿಶೇಷವಾಗಿ ಹರ್ಯಾಣದ ಪ್ರತಿಭಾನ್ವಿತ ಕಲಾವಿದ ರಣದೀಪ್ ಹೂಡಾ ಮತ್ತು ಅಕ್ಷಯ್ ಕುಮಾರ್ ಅಂದ್ರೆ ನನಗೆ ಇಷ್ಟ'' ಎಂದಿದ್ದರು.

  ಮೂರು ವರ್ಷದ ಹಿಂದೆ ನೀರಜ್ ಚೋಪ್ರಾ ಮಾತನಾಡಿದ್ದ ಮಾತು ಈಗ ಟೋಕಿಯೋ ಒಲಂಪಿಕ್ ಸಂದರ್ಭದಲ್ಲಿ ಚರ್ಚೆಗೆ ಬಂದಿದೆ. ಈ ವಿಷಯವಾಗಿ ಅಕ್ಷಯ್ ಕುಮಾರ್ ಅವರನ್ನು ಪ್ರಶ್ನಿಸಿದ್ದಕ್ಕೆ, ಅವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ''ನೀರಜ್ ಚೋಪ್ರಾ ನನ್ನದೇ ಬಯೋಪಿಕ್‌ನಲ್ಲಿ ನಟಿಸಲಿ'' ಎಂದಿದ್ದಾರೆ. ''ನೀರಜ್ ಚೋಪ್ರಾ ತುಂಬಾ ಚೆನ್ನಾಗಿ ಕಾಣುವ ಹುಡುಗ. ಒಂದು ವೇಳೆ ನನ್ನ ಬಯೋಪಿಕ್ ಯಾರಾದರೂ ಮಾಡುವುದಾದರೆ ನನ್ನ ಪಾತ್ರ ಮಾಡಲು ನೀರಜ್ ಒಳ್ಳೆಯ ಆಯ್ಕೆ ಎಂದು ನಾನು ಭಾವಿಸುತ್ತೇನೆ'' ಎಂದರು. ಈ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಕಮಲ್ ಆರ್ ಖಾನ್, ಅಕ್ಷಯ್ ಕುಮಾರ್ ಅವರ ರಾಷ್ಟ್ರೀಯತೆಯನ್ನು ಪ್ರಶ್ನಿಸಿದ್ದಾರೆ.

  ಅಕ್ಷಯ್ ಕುಮಾರ್ ಹೇಳಿಕೆ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಕೆಆರ್‌ಕೆ, ''ಅಕ್ಷಯ್ ಬಯೋಪಿಕ್‌ನಲ್ಲಿ ನೀರಜ್ ಚೋಪ್ರಾರನ್ನು ನೋಡಲು ನಾನು ಕಾತುರದಿಂದ ಕಾಯುತ್ತಿದ್ದೇನೆ. ಏಕಂದ್ರೆ, ಅಕ್ಷಯ್ ಬಗ್ಗೆ ಪ್ರಶ್ನೆಯಾಗಿ ಉಳಿದುಕೊಂಡಿರುವ ಅನೇಕ ವಿಷಯಗಳಿಗೆ ಉತ್ತರ ಸಿಗಬಹುದು'' ಎಂದು ಕೆನಡಾದ ರಾಷ್ಟ್ರೀಯತೆಯ ಬಗ್ಗೆ ಟ್ರೋಲ್ ಮಾಡಿದ್ದಾರೆ. ''ನಿಜವಾಗಲೂ ಇದು ಒಳ್ಳೆಯ ಉಪಾಯ. ಅಕ್ಷಯ್ ಬಯೋಪಿಕ್‌ನಲ್ಲಿ ನೀರಜ್ ಚೋಪ್ರಾ ನಟಿಸಲಿ. ಕನಿಷ್ಠ ಪಕ್ಷ ಕೆನಡಾ ರಾಷ್ಟ್ರೀಯತೆ ಹೊಂದಲು ನೀವು ಭಾರತೀಯ ರಾಷ್ಟ್ರೀಯತೆಯನ್ನು ಏಕೆ ಕೈಬಿಟ್ಟರಿ ಎಂದು ತಿಳಿಯಲಿ. ಕೆನಡಾಗೆ ಎಷ್ಟು ಆಸ್ತಿ ಹೋಗಿದೆ ಹಾಗೂ ಹೇಗೆ ಹೋಗಿದೆ ಎಂದು ನಾನು ಮೊದಲ ಪ್ರದರ್ಶನದಲ್ಲಿ ನೋಡೋಣ'' ಎಂದು ಟ್ವೀಟ್ ಮಾಡಿದ್ದಾರೆ.

  Kamaal R Khan Badly Wants Akshay Kumar’s Biopic Featuring Neeraj Chopra

  ಬಯೋಪಿಕ್ ಚಿತ್ರಗಳು ಹಾಗೂ ನೈಜ ಘಟನೆ ಆಧರಿಸಿ ಸಿನಿಮಾಗಳನ್ನು ಮಾಡುವುದರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಯಶಸ್ಸು ಕಂಡಿದ್ದಾರೆ. ಏರ್‌ಲಿಫ್ಟ್, ರುಸ್ತುಂ, ಪ್ಯಾಡ್‌ಮ್ಯಾನ್, ಗೋಲ್ಡ್, ಕೇಸರಿ, ಮಿಷನ್ ಮಂಗಲ್, ಸ್ಪೆಷಲ್ 26 ಹೀಗೆ ಹಲವು ಚಿತ್ರಗಳಲ್ಲಿ ನಟಿಸಿ ಸಕ್ಸಸ್ ಪಡೆದಿದ್ದಾರೆ.

  ಅಂದ್ಹಾಗೆ, ಶನಿವಾರ (ಆಗಸ್ಟ್ 7) ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಚೋಪ್ರಾ 87.58 ಮೀಟರ್ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದರು. ಈ ವೇಳೆ ಟ್ವೀಟ್ ಮಾಡಿದ್ದ ಅಕ್ಷಯ್ ಕುಮಾರ್, ''ದೇಶಕ್ಕೆ ಚಿನ್ನ ಗೆದ್ದು ಕೊಟ್ಟ ನಿಮಗೆ ಶುಭಾಶಯಗಳು. ಇದು ನಿಜಕ್ಕೂ ಇತಿಹಾಸ'' ಎಂದು ಶುಭಕೋರಿದ್ದರು.

  ಬೆಲ್ ಬಾಟಮ್ ಬಿಡುಗಡೆಗೆ ಸಜ್ಜು

  ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಮ್ ಸಿನಿಮಾ ಆಗಸ್ಟ್ 19ರಂದು ರಿಲೀಸ್ ಆಗುತ್ತಿದೆ. ವಿಮಾನ ಅಪಹರಣದ ಕುರಿತಾಗಿ ಕಥೆ ಮಾಡಿದ್ದು, ಭಾರತೀಯ ಸ್ಪೈ ಏಜೆಂಟ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಪತ್ನಿ ಪಾತ್ರದಲ್ಲಿ ವಾಣಿ ಕಪೂರ್ ಅಭಿನಯಿಸಿದ್ದು, ವಿಶೇಷ ಪಾತ್ರದಲ್ಲಿ ಹುಮಾ ಖುರೇಶಿ ನಟಿಸಿದ್ದಾರೆ. ಭಾರತದ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಪಾತ್ರದಲ್ಲಿ ಲಾರಾ ದತ್ತಾ ನಟಿಸಿದ್ದು, ಅವರ ಪಾತ್ರ ಹೆಚ್ಚು ಗಮನ ಸೆಳೆದಿದೆ. ಇನ್ನು ರಂಜಿತ್ ಎಂ ತಿವಾರಿ ನಿರ್ದೇಶಿಸಿದ್ದಾರೆ.

  English summary
  Controversial actor and Analyst Kamaal R Khan Badly Wants Akshay Kumar’s Biopic Featuring Neeraj Chopra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X