For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಗೆ ಕಮಲ್ ಹಾಸನ್ ಎರಡನೇ ಪುತ್ರಿ ಎಂಟ್ರಿ

  By Rajendra
  |

  ಮಹಾನ್ ಕಲಾವಿದ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ. ಕಮಲ್ ಅವರ ಮೊದಲ ಪುತ್ರಿ ಶ್ರುತಿ ಹಾಸನ್ ಈಗಾಗಲೆ ಬೆಳ್ಳಿಪರದೆ ಮೇಲೆ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಹಾಟ್ ಬೆಡಗಿಯಾಗಿಯೂ ಗುರುತಿಸಿಕೊಂಡಿದ್ದಾರೆ.

  ಈಗ ಕಮಲ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ನೇರವಾಗಿ ಬಾಲಿವುಡ್ ಚಿತ್ರದ ಮೂಲಕ ಬೆಳ್ಳಿಪರದೆಗೆ ಪರಿಚಯವಾಗುತ್ತಿದ್ದಾರೆ. ಆರ್. ಬಾಲ್ಕಿ ಅವರು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಅಕ್ಷರಾ ಅವರು ನಾಯಕಿ. ಇಷ್ಟು ದಿನ ಅಕ್ಷರಾ ಅವರು ಅಸೋಸಿಯೇಟ್ ಡೈರೆಕ್ಟರ್ ಆಗಿ ಹಲವರ ಜೊತೆ ಕೆಲಸ ಮಾಡಿದ್ದಾರೆ.

  ಈಗ ನಟನೆ ಕಡೆಗೆ ತಮ್ಮ ಒಲವನ್ನು ತೋರಿರುವುದು ವಿಶೇಷ. ಅಕ್ಷರಾ ಅವರು ಬಣ್ಣಹಚ್ಚುತ್ತಿರುವುದಕ್ಕೆ ಅಪ್ಪನ ಸಹಾಯ, ಸಹಕಾರಗಳೂ ಧಾರಾಳವಾಗಿವೆ. ಈಗಾಗಲೆ ಅವರು ಮಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ಇನ್ನು ಅಕ್ಷರಾ ಜೊತೆ ತೆರೆ ಹಂಚಿಕೊಳ್ಳಲಿರುವ ಹೀರೋ ಯಾರು ಎಂಬುದು ಇನ್ನಷ್ಟೇ ಗೊತ್ತಾಗಬೇಕು.

  ತಂಗಿಗೆ ಅಕ್ಕ ಶ್ರುತಿ ಹಾಸನ್ ಮುಂಬೈಗೆ ಸ್ಥಳಾಂತರವಾಗುವಂತೆಯೂ ಸಲಹೆ ನೀಡಿದ್ದಾರಂತೆ. ಮುಂಬೈನಲ್ಲಿ ಈಗಾಗಲೆ ಅಕ್ಷರಾ ಹಾಸನ್ ಫ್ಲಾಟ್ ಗಾಗಿ ಹುಡುಕಾಟವನ್ನೂ ನಡೆಸಿದ್ದಾರಂತೆ. ಅಕ್ಕಂನಂತೆ ತಂಗಿಯೂ ಬಹುಮುಖ ಪ್ರತಿಭಾವಂತೆ.

  ಆರಂಭದಲ್ಲಿ ಶ್ರುತಿ ಹಾಸನ್ ಗಾಯಕಿಯಾಗಿ ಸಂಗೀತ ನಿರ್ದೇಶಕಿಯಾಗಿ ಇಂಡಸ್ಟ್ರಿಗೆ ಅಡಿಯಿಟ್ಟಿದ್ದರು. ಈಗ ಅಕ್ಷರಾ ಸಹ ಅಷ್ಟೆ ಚಿತ್ರಕಥೆ ರಚನೆ, ನಿರ್ದೇಶಕಿಯಾಗಿ ಅನುಭವ ಪಡೆದುಕೊಂಡು ಈಗ ನಟನೆಗೆ ಮರಳುತ್ತಿದ್ದಾರೆ. (ಏಜೆನ್ಸೀಸ್)

  English summary
  After Shruti Haasan ruling the film industry down South and slowly carving a niche in Bollywood as well, it’s Akshara’s turn to make her mark. Reportedly, Kamal Haasan’s younger daughter Akshara is soon to make her debut in Bollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X