For Quick Alerts
  ALLOW NOTIFICATIONS  
  For Daily Alerts

  ಕಂಗನಾಗೂ ಅಂಟಿದ ಡ್ರಗ್ಸ್ ನಂಟು: ಹಳೆ ವಿಡಿಯೋ ವೈರಲ್

  |

  ಬಾಲಿವುಡ್‌ ಸ್ಟಾರ್‌ಗಳ ಉರಿದು ಬಿದ್ದಿರುವ ಕಂಗನಾ, ಬಾಲಿವುಡ್‌ನಲ್ಲಿ ಹಲವರಿಗೆ ಡ್ರಗ್ಸ್ ವ್ಯಸನ ಇರುವುದಾಗಿ ಆರೋಪ ಮಾಡಿದ್ದರು. ಆದರೆ ಡ್ರಗ್ಸ್ ಉರುಳು ಅವರಿಗೇ ಸುತ್ತಿಕೊಳ್ಳುವಂತೆ ತೋರುತ್ತಿದೆ.

  BiggBoss ಗೆ ಈ ವರ್ಷ ಫುಲ್ ಸ್ಟಾಪ್ | Filmibeat Kannada

  'ಮಾದಕ ವಸ್ತು ಸೇವಿಸಿದ್ದಾರೋ ಇಲ್ಲವೋ ಎಂದು ರಕ್ತಪರೀಕ್ಷೆ ಮಾಡಿಸಿದರೆ ಅರ್ಧ ಬಾಲಿವುಡ್‌ ಸ್ಟಾರ್‌ಗಳು ಜೈಲು ಸೇರುತ್ತಾರೆ' ಎಂದಿದ್ದರು ಕಂಗನಾ, ಅಷ್ಟೇ ಅಲ್ಲದೆ, ರಣಬೀರ್ ಕಪೂರ್, ರಣ್ವೀರ್ ಸಿಂಗ್ ಹಾಗೂ ವಿಕ್ಕಿ ಕೌಶನ್ ಪ್ರತಿದಿನ ಡ್ರಗ್ಸ್ ಸೇವಿಸುತ್ತಾರೆ ಎಂದು ನೇರ ಆರೋಪ ಮಾಡಿದ್ದರು.

  ಸ್ಟಾರ್ ನಟರನ್ನು ಟಾರ್ಗೆಟ್ ಮಾಡಿದ ಕಂಗನಾ: ರಣ್ವೀರ್, ರಣ್ಬೀರ್, ವಿಕ್ಕಿ ಕೌಶಲ್ ಡ್ರಗ್ ಪರೀಕ್ಷೆ ಮಾಡಲಿ!

  ಸ್ವತಃ ಕಂಗನಾ, ನಟನಿಗೆ ಡ್ರಗ್ಸ್ ತೆಗೆದುಕೊಳ್ಳುವಂತೆ ಹೇಳಿದ್ದರಂತೆ, ಆ ನಟ ಸಂದರ್ಶನವೊಂದರಲ್ಲಿ ಹೇಳಿದ್ದಾನೆ. ಕಂಗನಾ ತನಗೆ ಡ್ರಗ್ಸ್ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದರು ಎಂದಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.

  2016 ರ ವಿಡಿಯೋ ಭಾರಿ ವೈರಲ್

  2016 ರ ವಿಡಿಯೋ ಭಾರಿ ವೈರಲ್

  ಕಂಗನಾ ರನೌತ್ ಮಾಜಿ ಆಪ್ತ, ನಟ ಆಧ್ಯಾಯನ್ ಸುಮನ್, 2016 ರಲ್ಲಿ ಮಾಧ್ಯಮವೊಂದಕ್ಕೆ ಕೊಟ್ಟಿದ್ದ ಸಂದರ್ಶನದಲ್ಲಿ 'ಕಂಗನಾ ರನೌತ್, ನನಗೆ ಕೊಕೇನ್ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದರು' ಎಂದಿದ್ದರು. ಆ ಸಂದರ್ಶನದ ವಿಡಿಯೋ ತುಣುಕು ಇದೀಗ ಭಾರಿ ವೈರಲ್ ಆಗಿದೆ.

  ಕೊಕೇನ್ ಸೇವಿಸೋಣ ಎಂದರು ಕಂಗನಾ: ಆಧ್ಯಾಯನ್

  ಕೊಕೇನ್ ಸೇವಿಸೋಣ ಎಂದರು ಕಂಗನಾ: ಆಧ್ಯಾಯನ್

  ಅಂದಿನ ಸಂದರ್ಶನದಲ್ಲಿ ಕಂಗನಾ ಬಗ್ಗೆ ಹಲವು ವಿಷಯ ಮಾತನಾಡಿದ್ದ ಆಧ್ಯಾಯನ್, 'ಐಶಾರಾಮಿ ಹೋಟೆಲ್ ಒಂದರಲ್ಲಿ ಕಂಗನಾ ಪಾರ್ಟಿ ಮಾಡಿದ್ದಳು, ನಾನೂ ಹೋಗಿದ್ದೆ, ಎಲ್ಲರೂ ಇಂದು ಕೊಕೇನ್ ಡ್ರಗ್ಸ್ ಸೇವಿಸೋಣ ಎಂದು ಕಂಗನಾ ಒತ್ತಾಯಿಸಿದರು ಆದರೆ ನಾನು ಸೇವಿಸಲಿಲ್ಲ. ಇದರಿಂದ ನನ್ನೊಂದಿಗೆ ಕಂಗನಾ ಜಗಳವನ್ನೂ ಆಡಿದರು' ಎಂದಿದ್ದರು.

  ಕಂಗನಾ ಬದುಕಿನ ಕರಾಳ ಘಟನೆಗಳು: ಅಬ್ಬಾ ಭಯಾನಕ!

  ಕಂಗನಾ ಜೊತೆಗೆ ಗಾಂಜಾ ಸೇದಿದ್ದೇನೆ: ಆಧ್ಯಾಯನ್

  ಕಂಗನಾ ಜೊತೆಗೆ ಗಾಂಜಾ ಸೇದಿದ್ದೇನೆ: ಆಧ್ಯಾಯನ್

  ಅದೇ ಸಂದರ್ಶನದಲ್ಲಿ, ಕಂಗನಾ ಜೊತೆಗೆ ಹಲವು ಬಾರಿ ಗಾಂಜಾ ಸೇವನೆ ಮಾಡಿದ್ದಾಗಿಯೂ ಆಧ್ಯಾಯನ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕಂಗನಾ ಹಾಗೂ ಹೃತಿಕ್ ರೋಷನ್ ನಡುವಿನ ಸಂಬಂಧದ ಬಗ್ಗೆಯೂ ಆಧ್ಯಾಯನ್ ಅಂದು ಮಾತನಾಡಿದ್ದರು. ಡಿಎನ್‌ಎ ಆ ಸಂದರ್ಶನವನ್ನು ಮಾಡಿತ್ತು.

  ನೆಟ್ಟಿಗರಿಂದ ಕಂಗನಾಗೆ ಪ್ರಶ್ನೆ

  ನೆಟ್ಟಿಗರಿಂದ ಕಂಗನಾಗೆ ಪ್ರಶ್ನೆ

  ಆಧ್ಯಾಯನ್ ನ ಹಳೆಯ ವಿಡಿಯೋ ಭಾರಿ ವೈರಲ್ ಆಗಿದ್ದು, ಕಂಗನಾ ಅನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 'ಕಂಗನಾ ಸ್ವತಃ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಆದರೆ ಇತರರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

  'ಆ ಒಂದು ಪರೀಕ್ಷೆ ಮಾಡಿಸಿದರೆ ಬಾಲಿವುಡ್‌ನ ಸ್ಟಾರ್‌ಗಳೆಲ್ಲಾ ಜೈಲು ಸೇರುತ್ತಾರೆ'

  English summary
  Adhyayan Suman's old video went viral. In that video Adhyayan accusing that Kangana Ranaut forced him to do drugs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X