For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ದರ್ಶನ್ ಜೊತೆ ಬಾಲಿವುಡ್ ನಟಿ ಕಂಗನಾ ರಣಾವತ್: ಫೋಟೋ ವೈರಲ್

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ನ ಖ್ಯಾತ ನಟಿ, ಇತ್ತೀಚಿಗೆ ವಿವಾದಗಳ ಮೂಲಕವೇ ಹೆಚ್ಚು ಸದ್ದು ಮಾಡುತ್ತಿರುವ ಕಂಗನಾ ರಣಾವತ್ ಕನ್ನಡದ ಖ್ಯಾತ ನಟ ಡಿ ಬಾಸ್ ದರ್ಶನ್ ಜೊತೆ ಕಾಣಿಸಿಕೊಂಡಿರುವ ಅಪರೂಪದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಇಬ್ಬರು ಒಂದೇ ಫ್ರೇಮಿನಲ್ಲಿ ಸೆರೆಯಾಗಿರುವ ಫೋಟೋವನ್ನು ಕಂಗನಾ ಅಭಿಮಾನಿ ಬಳಗದ ಗ್ರೋಪ್ ನಲ್ಲಿ ಶೇರ್ ಮಾಡಲಾಗಿದೆ. ಅಂದಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೇರ ಭಾಷೆಯ ಕಲಾವಿದರ ಜೊತೆ ಕಾಣಿಸಿಕೊಳ್ಳುವುದು ತೀರ ಅಪರೂಪ. ಆದರೆ ಕಂಗನಾ ಜೊತೆ ಕಾಣಿಸಿಕೊಂಡಿರುವ ಅಪರೂಪದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ದರ್ಶನ್ ಮತ್ತು ಕಂಗನಾ

  ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ದರ್ಶನ್ ಮತ್ತು ಕಂಗನಾ

  ಅಷ್ಟಕ್ಕೂ ದರ್ಶನ್ ಮತ್ತು ಕಂಗನಾ ಒಟ್ಟಿಗೆ ಕಾಣಿಸಿಕೊಂಡಿದ್ದು ದುಬೈನಲ್ಲಿ. ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ರೆಸ್ಟೊರೆಂಟ್ ಒಂದರ ಉದ್ಘಾಟನಾ ಸಮಾರಂಭ. ಹೌದು, ದುಬೈನ ಪ್ರಸಿದ್ಧ ರೆಸ್ಟೊರೆಂಟ್ ಒಂದರ ಉದ್ಘಾಟನಾ ಸಮಾರಂಭದಲ್ಲಿ ದಕ್ಷಿಣ ಭಾರತದ ಸ್ಟಾರ್ ಮತ್ತು ಬಾಲಿವುಡ್ ಸ್ಟಾರ್ ಇಬ್ಬರು ಕಾಣಿಸಿಕೊಂಡಿದ್ದರು.

  7 ವರ್ಷದ ಹಳೆಯ ಫೋಟೋ

  7 ವರ್ಷದ ಹಳೆಯ ಫೋಟೋ

  ಅಂದಹಾಗೆ ಇದು ಇಂದು ನಿನ್ನೆಯ ಫೋಟೋವಲ್ಲ. ಸುಮಾರು 7 ವರ್ಷದ ಹಳೆಯ ಫೋಟೋ. ಹೌದು, 2014ರಲ್ಲಿ ಕ್ಲಿಕ್ಕಿಸಿದ ಫೋಟೋವಿದು. 7 ವರ್ಷದ ಹಳೆಯ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ವಿಶೇಷ. ಈ ಫೋಟೋಗೆ ಡಿ ಬಾಸ್ ಅಭಿಮಾನಿಗಳು ಲೈಕ್ ಒತ್ತಿ ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ.

  ರಾಬರ್ಟ್ ರಿಲೀಸ್ ಗೆ ಕಾಯುತ್ತಿರುವ ದರ್ಶನ್

  ರಾಬರ್ಟ್ ರಿಲೀಸ್ ಗೆ ಕಾಯುತ್ತಿರುವ ದರ್ಶನ್

  ದರ್ಶನ್ ಸದ್ಯ ರಾಬರ್ಟ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಮಾರ್ಚ್ 11ರಂದು ತೆರೆಗೆ ಬರುತ್ತಿದೆ. ರಾಬರ್ಟ್ ಸಿನಿಮಾಗಾಗಿ ಅಭಿಮಾನಿಗಳು ವರ್ಷದಿಂದ ಕಾಯುತ್ತಿದ್ದರು. ಇದೀಗ ಅಭಿಮಾನಿಗಳ ಸಂಭ್ರಮಾಚರಣೆಗೆ ದಿನಾಂಕ ನಿಗದಿಯಾಗಿದೆ. ರಾಬರ್ಟ್ ಬಳಿಕ ದರ್ಶನ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  ಅಭಿಷೇಕ್ ಅಂಬರೀಷ್ ಗೆ ಶಾಕ್ ಕೊಟ್ಟ ಡಿ ಬಾಸ್ ದರ್ಶನ್ | Filmibeat Kannada
  ಕಂಗನಾ ಬಳಿ ಇರುವ ಸಿನಿಮಾಗಳು

  ಕಂಗನಾ ಬಳಿ ಇರುವ ಸಿನಿಮಾಗಳು

  ಇನ್ನು ಕಂಗನಾ ರಣಾವತ್ ಸದ್ಯ ತಲೈವಿ ಸಿನಿಮಾ ಮುಗಿಸಿ ತೇಜಸ್ ಸಿನಿಮಾದಲ್ಲಿ ನಿರತರಾಗಿದ್ದಾರೆ. ತೇಜಸ್ ಜೊತೆಗೆ ಧಾಕಡ್ ಸಿನಿಮಾ ಕೂಡ ಜೊತೆಯಲ್ಲಿದೆ. ಇದರ ಜೊತೆಗೆ ಮಣಿಕರ್ಣಿಕಾ ಸೀಕ್ವೆಲ್ ಸಹ ಅನೌನ್ಸ ಮಾಡಿದ್ದಾರೆ.

  English summary
  Bollywood Actress Kangana ranaut and Darshan photo goes viral on Social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X