For Quick Alerts
  ALLOW NOTIFICATIONS  
  For Daily Alerts

  ಪ್ರತಿಭಟನಾಕಾರರನ್ನು ಗೇಲಿ ಮಾಡಿದ ಕಂಗನಾಗೆ ಚಳಿ ಬಿಡಿಸಿದ ನಟ ದಿಲ್ಜೀತ್

  |

  ಕಂಗನಾ ರಣೌತ್ ಟ್ವೀಟ್‌ಗಳು ಸೌಜನ್ಯದ ಗಡಿ ಮೀರಿವೆ. ಕಂಗನಾ, ತೋಚಿದಂತೆ ಟ್ವೀಟ್‌ಗಳನ್ನು ಮಾಡಲು ಪ್ರಾರಂಭಿಸಿ ಕೆಲ ತಿಂಗಳುಗಳೇ ಆಗಿವೆ. ಯಾವುದೇ ಟ್ರೋಲ್‌ ಪೇಜ್‌ಗಳಿಗೆ ಕಡಿಮೆ ಇಲ್ಲದಂತೆ ಸುಳ್ಳು ಸುದ್ದಿ ಹಂಚಿಕೊಳ್ಳುವುದು, ಉದ್ದೇಶಪೂರ್ವಕ, ಆಧಾರರಹಿತ ಚಾರಿತ್ರ್ಯ ಹರಣದಲ್ಲಿ ತೊಡಗಿದ್ದಾರೆ ಕಂಗನಾ ರಣೌತ್.

  ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ ಕಂಗನಾ ನೆಗೆಟಿವ್ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ನಿನ್ನೆ ಪೋಸ್ಟ್ ಮಾಡಿದ್ದ ಟ್ವೀಟ್‌ನಲ್ಲಿ ಹಿರಿಯ ಪ್ರತಿಭಟನಾಕಾರ್ತಿ ಮಹಿಂದರ್ ಕೌರ್‌ ಕುರಿತಂತೆ 'ಈಕೆ 100 ರೂಪಾಯಿಗೆ ಎಲ್ಲರಿಗೂ ಲಭ್ಯವಾಗುತ್ತಾಳೆ' ಎಂಬ ಕೀಳು ಹೇಳಿಕೆ ನೀಡಿದ್ದರು.

  'ಆಕೆ ನೂರು ರೂಪಾಯಿಗೆ ಸಿಗುತ್ತಾಳೆ': ಪ್ರತಿಭಟನಾಕಾರ್ತಿ ಬಗ್ಗೆ ಕಂಗನಾ ಅಹಂಕಾರದ ಟ್ವೀಟ್

  ಇದು ಬಾಲಿವುಡ್‌ನ ನಟ, ಪಂಜಾಬಿ ಗಾಯಕರೂ ಆಗಿರುವ ದಿಲ್ಜಿತ್ ದುಸ್ಸಾಂಜ್ ಗೆ ಸಿಟ್ಟು ತರಿಸಿದೆ. ಕಂಗನಾ ಟ್ವೀಟ್‌ನ ನಂತರ ಮಹಿಂದರ್ ಕೌರ್ ಅನ್ನು ಬಿಬಿಸಿ ಸಂದರ್ಶಿಸಿದ್ದು, ತಾನು ರೈತ ಮಹಿಳೆ ಆಗಿದ್ದು, ಎಲ್ಲಾ ರೈತರೊಂದಿಗೆ ನಾನು ಪ್ರತಿಭಟನೆಗೆ ಹೋಗಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ದುಸ್ಸಾಂಗ್, 'ಇಲ್ಲಿದೆ ನೋಡು ಸಾಕ್ಷಿ, ಇಷ್ಟೋಂದು ಕುರುಡಿ ಆಗಬಾರದು' ಎಂದು ಕಂಗನಾಗೆ ಟ್ವೀಟ್ ಮಾಡಿದ್ದರು.

  ಕರಣ್ ಜೋಹರ್ ನ ಚಮಚಾ ನೀನು ಎಂದ ಕಂಗನಾ

  ಕರಣ್ ಜೋಹರ್ ನ ಚಮಚಾ ನೀನು ಎಂದ ಕಂಗನಾ

  ಅಲ್ಲಿಂದ ಕಂಗನಾರ ಟ್ವೀಟ್ ಸರಣಿ ಪ್ರಾರಂಭವಾಗಿದ್ದು, ದಿಲ್ಜಿತ್ ಅನ್ನು ಕರಣ್ ಜೋಹರ್‌ನ ಸಾಕುಪ್ರಾಣಿ ಎಂದು ಕರೆದು, ನಾನು ಶಾಹೀನ್ ಬಾಗ್‌ನ ಪ್ರತಿಭನಾಕಾರ್ತಿ ಬಾಲ್ಕಿ ಬಾನೊ ಬಗ್ಗೆ ಹೇಳಿದ್ದು, ಮಹಿಂದರ್ ಕೌರ್ ನನಗೆ ಯಾರೆಂದು ಗೊತ್ತಿಲ್ಲ, ಈ ನಾಟಕವನ್ನು ಈಗಲೇ ನಿಲ್ಲಿಸಿ ಎಂದಿದ್ದಾರೆ ಕಂಗನಾ.

  ನಟನನ್ನು ಚಮಚಾ, ಬೂಟು ನೆಕ್ಕುವಾತ ಎಂದ ಕಂಗನಾ

  ನಟನನ್ನು ಚಮಚಾ, ಬೂಟು ನೆಕ್ಕುವಾತ ಎಂದ ಕಂಗನಾ

  ಅಷ್ಟೇ ಅಲ್ಲದೆ, ದಿಲ್ಜಿತ್ ದುಸ್ಸಾಂಜ್ ಅನ್ನು ಚಮಚಾ, ಪ್ರಭಾವಿಗಳ ಬೂಟು ನೆಕ್ಕಿ ಸಿನಿಮಾ ಗಿಟ್ಟಿಸಿಕೊಂಡವನು ಇನ್ನೂ ಬೇರೆ-ಬೇರೆ ಕೆಟ್ಟ ಮಾತುಗಳನ್ನು ಆಡಿದ್ದಾರೆ. ಇದಕ್ಕೆ ಪ್ರತಿಯಾಗಿ ದಿಲ್ಜಿತ್ ದುಸ್ಸಾಂಜ್ ಸಹ ಸರಿಯಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

  ತಾಪ್ಸಿ ಪನ್ನು, ಸ್ವರಾ ಭಾಸ್ಕರ್ ಮೇಲೆ ಹರಿಹಾಯ್ದ ಕಂಗನಾ ಸಹೋದರಿ

  'ನಿನಗೆ ಎಷ್ಟು ಮಂದಿ ಮಾಲೀಕರು?'

  'ನಿನಗೆ ಎಷ್ಟು ಮಂದಿ ಮಾಲೀಕರು?'

  ನನಗಿಂತಲೂ ನೀನು (ಕಂಗನಾ) ಹೆಚ್ಚು ಸಿನಿಮಾ ಮಾಡಿದ್ದೀಯಾ? ಆ ಎಲ್ಲಾ ಸಿನಿಮಾಗಳನ್ನು ನೀನು ಬೂಟು ನೆಕ್ಕಿಯೇ ಸಂಪಾದನೆ ಮಾಡಿದೆಯಾ? ಒಂದು ಸಿನಿಮಾ ಮಾಡಿದ್ದಕ್ಕೆ ಕರಣ್‌ನ ಸೇವಕ ನಾನಾಗಿದ್ದರೆ, ನಿನಗೆ ಹಾಗಿದ್ದರು ಸಾಕಷ್ಟು ಮಾಲೀಕರಿದ್ದಾರೆ ಎಂದು ಉತ್ತರಿಸಿದ್ದಾ ದಿಲ್ಜಿತ್ ದುಸ್ಸಾಂಜ್.

  ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ ದಿಲ್ಜಿತ್

  ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ ದಿಲ್ಜಿತ್

  ದಿಲ್ಜಿತ್ ದುಸ್ಸಾಂಜ್ ಪಂಜಾಬಿನವರೇ ಆಗಿದ್ದು, ಬಾಲಿವುಡ್‌ನ ಉದಯೋನ್ಮುಖ ನಟರಾಗಿದ್ದಾರೆ. ಕರೀನಾ ಕಪೂರ್ ಜೊತೆ ಉಡ್ತಾ ಪಂಜಾಬ್, ಅನುಷ್ಕಾ ಶರ್ಮಾ ಜೊತೆ ಪಿಲೌರಿ, ಸೂರ್ಮಾ, ಅರ್ಜುನ್ ಪಟಿಯಾಲಾ, ಅಕ್ಷಯ್ ಕುಮಾರ್ ಜೊತೆಗೆ ಗುಡ್‌ ನ್ಯೂಸ್, ಸೂರಜ್ ಪೆ ಮಂಗಲ್ ಭಾರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಪಂಜಾಬಿ ಸಿನಿಮಾದಲ್ಲಿ ನಟಿಸಿರುವ ಅವರು, ಪಂಜಾಬ್ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.

  English summary
  Kangana Ranaut and Bollywood actor Diljit Dosanjh engaged in tweet war regarding farmers protest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X