ರೈತರ ಹೋರಾಟ ಬೆಂಬಲಿಸಿದ ಪಾಪ್ ಗಾಯಕಿ ವಿರುದ್ಧ 'ಫೂಲ್' ಎಂದು ಕಿಡಿಕಾರಿದ ಕಂಗನಾ

ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರು ಮಾಡುತ್ತಿರುವ ಪ್ರತಿಭಟನೆಗೆ ಕೆಲವು ಬಾಲಿವುಡ್ ಹಾಗು ಬೇರೆ ಬೇರೆ ಭಾಷೆಯ ಸಿನಿ ಕಲಾವಿದರು ಬೆಂಬಲ ಸೂಚಿಸಿದ್ದಾರೆ. ಆದರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಇದೀಗ ಖ್ಯಾತ ಪಾಪ್ ಗಾಯಕಿ ಮತ್ತು ಹಾಲಿವುಡ್ ನಟಿ ರಿಹಾನಾ ದೆಹಲಿ ರೈತ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ರಿಹಾನಾ, 'ಇದರ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ' ಎಂದು ಪ್ರಶ್ನೆ ಮಾಡಿದ್ದಾರೆ.

ರಿಹಾನಾ ಟ್ವೀಟ್ ಮಾಡುತ್ತಿದ್ದಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ಕಿಡಿಕಾರಿದ್ದಾರೆ. ರಿಹಾನಾಗೆ ತಿರುಗೇಟು ನೀಡಿರುವ ಕಂಗನಾ, 'ನಾವ್ಯಾಕೆ ಇದರ ಬಗ್ಗೆ ಮಾತನಾಡುತ್ತಿಲ್ಲ ಎಂದರೆ ಅವರ್ಯರು ರೈತರಲ್ಲ. ಭಾರತವನ್ನು ಇಬ್ಬಾಗ ಮಾಡಲು ನೋಡುತ್ತಿರುವ ಭಯೋತ್ಪಾದಕರು. ಇದರಿಂದ ದುರ್ಬಲಗೊಳ್ಳುವ ಭಾರತವನ್ನು ಚೀನಾ ಸ್ವಾಧೀನ ಪಡಿಸಿಕೊಂಡು ಅಮೆರಿಕದಂತೆ ಚೀನಿ ವಸಾಹತು ಮಾಡಬಹುದು. ಮೂರ್ಖರೇ ಕುಳಿತುಕೊಳ್ಳಿ. ನಿಮ್ಮಂತೆಯೇ ನಾವು ನಮ್ಮ ರಾಷ್ಟ್ರವನ್ನು ಮಾರಾಟ ಮಾಡುತ್ತಿಲ್ಲ' ಎಂದು ಹೇಳಿದ್ದಾರೆ.

ಗಾಯಕಿ ರಿಹಾನಾ 'ಪ್ರತಿಭನಾಕಾರ ರೈತರು ಪೊಲೀಸರ ನಡುವೆ ತಿಕ್ಕಾಟದ ನಂತರ ಸರ್ಕಾರವು ದೆಹಲಿ ಸುತ್ತ-ಮುತ್ತ ಇಂಟರ್ನೆಟ್ ಸ್ಥಗಿತಗೊಳಿಸಿದೆ' ಎಂಬರ್ಥದ ಹೆಡ್‌ಲೈನ್ ಉಳ್ಳ ವಿದೇಶಿ ಆನ್‌ಲೈನ್ ಪತ್ರಿಕೆಯ ವರದಿಯ ಲಿಂಕ್ ಅನ್ನು ರಿಹಾನಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ಫಾರ್ಮರ್ ಫ್ರೊಟೆಸ್ಟ್' ಎಂದು ಹ್ಯಾಷ್ ಟ್ಯಾಗ್ ಸಹ ಬಳಸಿದ್ದಾರೆ.

Kangana Ranaut attacks Singer Rihanna for support farmers protest

ಖ್ಯಾತ ಪಾಪ್ ಗಾಯಕಿ ರಿಹಾನಾರ ಹಲವಾರು ಆಲ್ಬಂ ಸಾಂಗ್ ಸೂಪರ್ ಹಿಟ್ ಆಗಿವೆ. ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ರಿಹಾನಾ ಹೊಂದಿದ್ದಾರೆ. ಕೆಲವು ಹಾಲಿವುಡ್ ಸಿನಿಮಾಗಳಲ್ಲಿಯೂ ರಿಹಾನಾ ನಟಿಸಿದ್ದಾರೆ. 'ಬ್ಯಾಟಲ್‌ಶಿಪ್', 'ಓಶನ್ಸ್ 8' , 'ಹೋಮ್' ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ರಿಹಾನಾ ನಟಿಸಿದ್ದಾರೆ.

ಇನ್ನು ರೈತ ಪ್ರತಿಭಟನೆಗೆ ನಟದಿಲ್ಜಿತ್ ದೊಸಾಂಜ್, ಪ್ರಿಯಾಂಕಾ ಚೋಪ್ರಾ, ನಟಿ ಸ್ವರಾ ಭಾಸ್ಕರ್ ಸೇರಿ ಇನ್ನೂ ಹಲವಾರು ಪಂಜಾಬಿ ನಟ-ನಟಿಯರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ನಟಿ ಕಂಗನಾ ರಣಾವತ್ ಹಾಗೂ ಕೆಲವರು ರೈತರ ಪ್ರತಿಭಟನೆಯನ್ನು ವಿರೋಧಿಸಿದ್ದಾರೆ.

More from Filmibeat

English summary
Kangana Ranaut attacks Singer Rihanna for support farmers protest. She calls them Terrorists.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X