Just In
Don't Miss!
- News
ಬಜೆಟ್; ತವರು ಜಿಲ್ಲೆ ಶಿವಮೊಗ್ಗಕ್ಕೆ ಯಡಿಯೂರಪ್ಪ ಕೊಡುಗೆಗಳು
- Sports
ಕರ್ನಾಟಕ ಬಜೆಟ್: ಮಂಡ್ಯ ಕ್ರೀಡಾಂಗಣ ಅಭಿವೃದ್ಧಿಗೆ 10 ಕೋ.ರೂ. ಘೋಷಣೆ
- Finance
ಕರ್ನಾಟಕ ರಾಜ್ಯ ಬಜೆಟ್: ಕೃಷಿ ವಲಯಕ್ಕೆ 31,021 ಕೋಟಿ ರೂಪಾಯಿ ಅನುದಾನ
- Automobiles
ಪ್ರತಿ ಚಾರ್ಜ್ಗೆ 240 ಕಿ.ಮೀ ಮೈಲೇಜ್ ನೀಡುವ ಓಲಾ ಇವಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ
- Lifestyle
ಸೂಪರ್ ಫುಡ್ ಆಗಿರುವ ಟೆಫ್ ಬಗ್ಗೆ ನಿಮಗೆಷ್ಟು ಗೊತ್ತು?
- Education
Women's Day 2021 Google Doodle: ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತನ್ನನ್ನು ಹಾಲಿವುಡ್ ನಟಿಯರೊಂದಿಗೆ ಹೋಲಿಸಿಕೊಂಡು ನಗೆಪಾಟಲಿಗೀಡಾದ ಕಂಗನಾ
ನಟಿ ಕಂಗನಾ ಟ್ವೀಟ್‌ಗಳು ದಿನೇ-ದಿನೇ ಗಂಭೀರತೆಯ ಸ್ಥರ ಕಳೆದುಕೊಳ್ಳುತ್ತಾ ಸಾಗಿವೆ. ರೈತರನ್ನು ಭಯೋತ್ಪಾದಕರೆಂದು, ಸಹ ನಟಿಯರನ್ನು 'ಪಾರ್ನ್ ಸ್ಟಾರ್'ಗಳೆಂದು. ರೈತ ಮಹಿಳೆಯನ್ನು 'ಹಣಕ್ಕೆ ಬರುವ ಹೆಣ್ಣು' ಎಂದು ಹೀಗೆ ಕಂಗನಾ ತನಗೆ ತೋಚಿದಂತೆ ಟ್ವೀಟ್‌ಗಳನ್ನು ಮಾಡುತ್ತಿರುತ್ತಾರೆ.
ಬೇರೆಯವರನ್ನು ನಿಂದಿಸಲು ಒಂದಿನಿತೂ ಯೋಚಿಸದ ಕಂಗನಾ, ತನಗೆ ತಾನು ಮಾತ್ರ ಅದ್ಭುತವಾಗಿ ಪ್ರಚಾರ ಕೊಟ್ಟುಕೊಳ್ಳುತ್ತಾರೆ. ಸ್ವಯಂ ಹೊಗಳಿಕೆಯಲ್ಲಿ ಕಂಗನಾ ರನ್ನು ಮೀರಿಸುವ ನಟ-ನಟಿಯರು ಬಾಲಿವುಡ್‌ನಲ್ಲಿ ಇಲ್ಲ.
ಇದೀಗ, ನಟಿ ಕಂಗನಾ ತಮ್ಮನ್ನು ಹಾಲಿವುಡ್‌ನ ಪ್ರಖ್ಯಾತ ನಟಿಯರಿಬ್ಬರೊಟ್ಟಿಗೆ ಹೋಲಿಸಿಕೊಂಡಿದ್ದಾರೆ. ಅದರಲ್ಲಿಯೂ ಮೂರು ಆಸ್ಕರ್ ಗೆದ್ದ ಹಾಲಿವುಡ್ ದಂತಕತೆ ಎಂದೇ ಕರೆಯಲಾಗುವ ನಟಿ ಮರ್ಲೀನ್ ಸ್ಟ್ರೀಪ್ ಜೊತೆ ತಮ್ಮನ್ನು ಹೋಲಿಸಿಕೊಂಡು ನಗೆಪಾಟಲಿಗೀಡಾಗಿದ್ದಾರೆ ನಟಿ ಕಂಗನಾ.

ಮೆರಿಲ್ ಸ್ಟ್ರೀಪ್‌ಗಳಂತೆ ಪ್ರತಿಭಾವಂತಳು ನಾನು: ಕಂಗನಾ
ತಮ್ಮ ಎರಡು ಹೊಸ ಸಿನಿಮಾಗಳಾದ 'ತಲೈವಿ', ಹಾಗೂ 'ದಾಖಡ್' ನ ಎರಡು ಪೋಸ್ಟರ್‌ಗಳನ್ನು ಹಂಚಿಕೊಂಡಿರುವ ಕಂಗನಾ, 'ನಾನು ತೆರೆಯ ಮೇಲೆ ಮಾಡುವ ಭಿನ್ನ ರೀತಿಯ ಪಾತ್ರಗಳನ್ನು ಜಗತ್ತಿನ ಇನ್ನಾವುದೇ ನಟಿ ಮಾಡುತ್ತಿಲ್ಲ. ಪಾತ್ರಗಳಿಗಾಗಿ ನನ್ನಂತೆ ಯಾರೂ ಸಹ ರೂಪಾಂತರಗೊಳ್ಳುವುದಿಲ್ಲ. ಭಿನ್ನ-ಭಿನ್ನ ಪಾತ್ರಗಳಲ್ಲಿ ನಟಿಸಲು ನನಗೆ ಖ್ಯಾತ ನಟಿ ಮೆರಿಲ್ ಸ್ಟ್ರೀಪ್‌ಳ ರೀತಿ ಸ್ವಾಭಾವಿಕ ಪ್ರತಿಭೆ ಇದೆ ಜೊತೆಗೆ ಗಲ್ ಗಡೊಟ್‌ಳಂತೆ ಗ್ಲಾಮರಸ್ ಆಗಿ ಆಕ್ಷನ್ ದೃಶ್ಯಗಳಲ್ಲಿ ಸಹ ನಟಿಸಬಲ್ಲೆ' ಎಂದಿದ್ದಾರೆ ಕಂಗನಾ.

ನನಗಿಂತ ಉತ್ತಮ ನಟಿಯನ್ನು ತೋರಿಸಿ ನೋಡೋಣ: ಕಂಗನಾ ಸವಾಲು
ಕಂಗನಾ ರ ಸ್ವಯಂ ಪ್ರಶಂಸೆ ಇಲ್ಲಿಗೆ ನಿಂತಿಲ್ಲ. 'ನನಗಿಂತ ಉತ್ತಮವಾದ ಹಾಗೂ ಪ್ರತಿಭಾಶಾಲಿ ನಟಿಯನ್ನು ಯಾರಾದರೂ ತೋರಿಸಿದರೆ ನಾನು ಅಹಂಕಾರವನ್ನು ಬೇಕಾದರೆ ಬಿಟ್ಟುಬಿಡುತ್ತೇನೆ. ಇದು ನನ್ನ ಬಹಿರಂಗ ಸವಾಲು. ಅಲ್ಲಿಯವರೆಗೆ ನಾನು ಹೆಮ್ಮೆಯಿಂದ ನನ್ನ ಪ್ರತಿಭೆ ಬಗ್ಗೆ ಹೇಳಿಕೊಳ್ಳುತ್ತೇನೆ' ಎಂದಿದ್ದಾರೆ ಕಂಗನಾ.

ತಲೈವಿ, ದಾಖಡ್ ಸಿನಿಮಾದ ಪೋಸ್ಟರ್
ನಟಿ ಕಂಗನಾ ರಣೌತ್ ತಲೈವಿ ಸಿನಿಮಾಕ್ಕಾಗಿ ದಪ್ಪ ಆಗಿದ್ದರು. ದಪ್ಪ ಕಾಣುವಂತೆ ಉಡುಪು ಧರಿಸಿ ನಟಿಸಿದ್ದಾರೆ. ಇದೀಗ ದಾಖಡ್ ಸಿನಿಮಾಕ್ಕಾಗಿ ತೆಳ್ಳಗಾಗಿದ್ದಾರೆ. ಈ ಎರಡೂ ಚಿತ್ರಗಳನ್ನು ಒಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಾವು ಭಿನ್ನ ನಟಿ ಎಂದು ಮೇಲಿನಂತೆ ಟ್ವೀಟ್ ಮಾಡಿದ್ದಾರೆ ಕಂಗನಾ.

ಮೂರು ಆಸ್ಕರ್, ಒಂಬತ್ತು ಗೋಲ್ಡನ್ ಗ್ಲೋಬ್ ಗೆದ್ದಿರುವ ಮೆರಿಲ್
ಕಂಗನಾ ತಮ್ಮನ್ನು ತಾವು ಹೋಲಿಸಿಕೊಂಡಿರುವ ಹಾಲಿವುಡ್ ನಟಿ ಮೆರಿಲ್ ಸ್ಟ್ರೀಪ್ ಗೆ ಮೂರು ಬಾರಿ ಆಸ್ಕರ್ ಪ್ರಶಸ್ತಿ ಸಂದಿದೆ. ಆಸ್ಕರ್ ನಾಮಿನೇಶನ್‌ಗಳಂತೂ ಮುವತ್ತಕ್ಕೂ ಹೆಚ್ಚಿಗೆ ಇವೆ. ಒಂಬತ್ತು ಬಾರಿ ಗೋಲ್ಡಲ್ ಗ್ಲೋಬ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇನ್ನು ಗಲ್ ಗಡೊಟ್, 'ವಂಡರ್ ವುಮನ್' ಖ್ಯಾತಿಯ ನಟಿ. ಆಕೆಯ ಗ್ಲಾಮರ್ ಹಾಗೂ ಅದ್ಭುತವಾಗಿ ಆಕ್ಷನ್‌ನಿಂದ ಗೆಡೊಟ್ ಖ್ಯಾತರು.

ನಗೆಪಾಟಲಿಗೀಡಾದ ಕಂಗನಾ
ನಟಿ ಕಂಗನಾ ತಮ್ಮನ್ನು ತಾವು ಹೊಗಳಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹಲವಾರು ಮಂದಿ ಕಂಗನಾ ರ ಟ್ವೀಟ್‌ಗಳನ್ನು ಮೀಮ್ ಮಾಡಿ ಹರಿಬಿಡುತ್ತಿದ್ದಾರೆ. ಇನ್ನು ಕೆಲವರು, 'ವ್ಯಕ್ತಿ ತನ್ನ ಬಗ್ಗೆ ತಾನು ಹೇಳಬಾರದು, ಬೇರೆಯವರು ಮಾತನಾಡಬೇಕು' ಎಂದು ಬುದ್ಧಿವಾದ ಹೇಳಿದ್ದಾರೆ.