»   » ಹುಚ್ಚ ವೆಂಕಟ್ ಗೂ ಕಂಗನಾ ರನೌತ್ ಇಬ್ಬರಿಗೂ ಒಂದೇ ಆಸೆ.! ಈಡೇರುತ್ತಾ.?

ಹುಚ್ಚ ವೆಂಕಟ್ ಗೂ ಕಂಗನಾ ರನೌತ್ ಇಬ್ಬರಿಗೂ ಒಂದೇ ಆಸೆ.! ಈಡೇರುತ್ತಾ.?

Posted By:
Subscribe to Filmibeat Kannada
ಹುಚ್ಚ ವೆಂಕಟ್ ಗೂ ಕಂಗನಾ ರನೌತ್ ಇಬ್ಬರಿಗೂ ಒಂದೇ ಆಸೆ | Filmibeat Kannada

'ಬಾಲಿವುಡ್ ಕ್ವೀನ್' ಅಂತಾಲೆ ಕರೆಸಿಕೊಳ್ಳುವ ಕಂಗನಾ ರನೌತ್ ತಮ್ಮ ಅದ್ಭುತ ಅಭಿನಯದ ಮೂಲಕ ಬಿಟೌನ್ ಇಂಡಸ್ಟ್ರಿಯನ್ನ ಆಳುತ್ತಿದ್ದಾರೆ. 'ಕ್ವೀನ್', 'ಫ್ಯಾಷನ್', 'ತನು ವೆಡ್ಸ್ ಮನು' ಅಂತಹ ಚಿತ್ರಗಳ ಮೂಲಕ ಸ್ಟಾರ್ ನಟ-ನಟಿಯರನ್ನ ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾರೆ.

ಹೀಗೆ, ಖಾನ್, ಕಪೂರ್ ಗಳ ಮಧ್ಯೆ ಹೀರೋಯಿನ್ ಗೂ ಡಿಮ್ಯಾಂಡ್ ಇದೆ ಎಂದು ಸಾಬೀತು ಪಡಿಸಿರುವ ಕಂಗನಾ ಈಗ ಸೆನ್ಸಷ್ನಲ್ ಹೇಳಿಕೆ ನೀಡಿದ್ದಾರೆ. ಇದು ಹೇಳಿಕೆ ಎನ್ನುವುದಕ್ಕಿಂತ ಗಟ್ಟಿಯಾದ ನಿಲುವು ಕೂಡ ಆಗಿದೆ.

ಈ ನಿಲುವು, ನಿರ್ಧಾರವನ್ನ ಗಮನಿಸಿದ ಸ್ಯಾಂಡಲ್ ವುಡ್ ಮಂದಿ ಸ್ವಲ್ಪ ಅಚ್ಚರಿಯಾಗಿದ್ದಾರೆ. ಯಾಕಂದ್ರೆ, ಇಂತಹ ನಿರ್ಧಾರವನ್ನ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಯಾವಾಗಲೋ ಕೈಗೊಂಡಿದ್ದರು. ಹೀಗಾಗಿ, ಹುಚ್ಚ ವೆಂಕಟ್ ಅವರಂತೆ ಕಂಗನಾ ಕೂಡ ಈ ಒಂದು ವಿಷ್ಯದಲ್ಲಿ ಇಂಡಸ್ಟ್ರಿ ವಿರುದ್ಧ ಸಿಡಿದೆದ್ದಿದ್ದಾರೆ. ಅಷ್ಟಕ್ಕೂ, ಕಂಗನಾ ತೆಗೆದುಕೊಂಡಿರುವ ನಿರ್ಧಾರವೇನು.? ಇದಕ್ಕೂ ಹುಚ್ಚ ವೆಂಕಟ್ ಗೂ ಸಂಬಂಧವೇನು.? ಮುಂದೆ ಓದಿ......

ಐಟಂ ಸಾಂಗ್ ಬ್ಯಾನ್ ಆಗ್ಬೇಕು.!

''ನನ್ ಮಗಂದ್....ಐಟಂ ಸಾಂಗ್ ಬ್ಯಾನ್ ಆಗ್ಬೇಕು'' ಎಂದು ಹೋದಲ್ಲಿ, ಬಂದಲ್ಲೆಲ್ಲ ಹುಚ್ಚ ವೆಂಕಟ್ ಘೋಷಣೆ ಕೂಗ್ತಾರೆ. ಆದ್ರೆ, ವೆಂಕಟ್ ಅವರ ಬೇಡಿಕೆ, ನಿಲುವಿಗೆ ಯಾರೂ ಮನ್ನಣೆ ನೀಡುತ್ತಿಲ್ಲ. ಪ್ರತಿಯೊಂದು ಚಿತ್ರದಲ್ಲೂ ಐಟಂ ಹಾಡು ಬಳಸುತ್ತಲೆ ಇದ್ದಾರೆ. ಅರೆಬರೆ ಕಾಸ್ಟ್ಯೂಮ್ ತೊಟ್ಟು ನಟಿಯರು ಕುಣಿಯುತ್ತಲೇ ಇದ್ದಾರೆ. ಇದೇ ವಿಚಾರಕ್ಕೆ ಈಗ ಕಂಗನಾ ಕೂಡ ಆಕ್ರೋಶಗೊಂಡಿದ್ದಾರೆ.

ಬಿಟೌನ್ ನಲ್ಲಿ ಐಟಂ ನಂಬರ್ ಬ್ಯಾನ್ ಆಗಲಿ

‘ನನಗೆ ದೊಡ್ಡ ದೊಡ್ಡ ಸ್ಟಾರ್ಸ್​ಗಳ ಜತೆ ಚಿತ್ರ ಮಾಡಬೇಕೆಂಬ ಆಸೆ ಇಲ್ಲ. ಅಂತೆಯೇ ಸಿನಿಮಾಗಳಲ್ಲಿ ಬರುವ ಐಟಂ ಸಾಂಗ್ ​ಗಳಿಗೆ ನನ್ನ ವಿರೋಧವೂ ಇದೆ. ಆದ್ರೆ, ಅವುಗಳ ಮೇಲೆ ನಿರ್ಬಂಧ ಹೇರಬೇಕು ಎಂಬುದು ನನ್ನ ಅಭಿಪ್ರಾಯ'' ಎಂದು ಟಿವಿ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಟಂ ಡ್ಯಾನ್ಸ್ ನಿಂದ ಏನು ಸಿಗುತ್ತೆ.?

ಐಟಂ ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕಂಗನಾ ''ಐಟಂ ಡ್ಯಾನ್ಸ್ ಮಾಡಿದ್ರೆ ಅವರಿಗೆ ಏನು ಸಿಗುತ್ತೆ. ಆ ಹಾಡಿನಿಂದಲೆ ಅವರಿಗೊಂದು ಟೈಟಲ್ ಸಿಗುತ್ತೆ. ಅಲ್ಲಿ ಸೆಕ್ಸಿಯಾಗಿ ಕಾಣಿಸಿಕೊಳ್ಳಬೇಕು, ಕೆಟ್ಟದಾಗಿ ನಡೆದುಕೊಳ್ಳಬೇಕು....ಇದು ನಮಗೆ, ನಮ್ಮ ಸಮಾಜಕ್ಕೆ, ನಮ್ಮ ಮಕ್ಕಳಿಗೆ ತುಂಬಾ ವಿಷಕಾರಿ ಸಂಗತಿಯಾಗಿದೆ. ಇದರಿಂದ ನಮ್ಮ ಮಕ್ಕಳ ಹೆಸರುಗಳು ಕೂಡ ಅಂಟಿಕೊಳ್ಳಬೇಕೆ.? ಈ ರೀತಿ ಹಾಡುಗಳಿಗೆ ಹೆಜ್ಜೆ ಹಾಕಿದ ಕಲಾವಿದರನ್ನು ಅದೇ ಹಾಡುಗಳಿಗೆ ಬ್ರಾಂಡ್ ಮಾಡಲಾಗುತ್ತದೆ. ಅವರ ಮಕ್ಕಳನ್ನ ಕೂಡ ಹಾಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ'' ಎಂದು ಪ್ರಶ್ನಿಸಿದ್ದಾರೆ.

ನಾನು ಐಟಂ ಡ್ಯಾನ್ಸ್ ಮಾಡಲ್ಲ

''ನಾನಂತೂ ಐಟಂ ಸಾಂಗ್ ಮಾಡಲ್ಲ. ಇದು ಮಾಡದೆ ಕೂಡ ಯಶಸ್ಸು ಕಾಣಬಹುದು'' ಎಂದು ಲೇಡಿ ಬಾಂಡ್ ಕಿಡಿಕಾರಿದ್ದಾರೆ. ಸದ್ಯ, 'ಮಣಿಕರ್ಣೀಕಾ' ಚಿತ್ರದಲ್ಲಿ ಕಂಗನಾ ಅಭಿನಯಿಸುತ್ತಿದ್ದಾರೆ. ಇದು ಝಾನ್ಸಿ ರಾಣಿ ಲಕ್ಷ್ಮಿ ಭಾಯಿ ಅವರ ಕುರಿತಾದ ಸಿನಿಮಾ. ಇದರ ಜೊತೆಗೆ 'ಮೆಂಟಲ್ ಹೈ ಕ್ಯಾ' ಎಂಬ ಮತ್ತೊಂದು ವಿಭಿನ್ನ ಸಿನಿಮಾವನ್ನ ಆರಂಭಿಸಿದ್ದಾರೆ.

ಬಿಟೌನ್ ನಟಿಯರೆಲ್ಲಾ ಐಟಂಗೆ ಹೆಜ್ಜೆ ಹಾಕಿದ್ದಾರೆ

ಕಂಗನಾ ಅವರ ಈ ನಿರ್ಧಾರದ ನಡುವೆಯೂ ಬಾಲಿವುಡ್ ಇಂಡಸ್ಟ್ರಿಯ ಬಹುತೇಕ ನಟಿಯರು ಐಟಂ ಹಾಡಿಗೆ ಹೆಜ್ಜೆ ಹಾಕಿರುವುದು ಗಮನ ಸೆಳೆಯುತ್ತೆ. ಐಶ್ವರ್ಯ ರೈ, ಪ್ರಿಯಾಂಕಾ ಚೋಪ್ರಾ, ಕರೀನಾ ಕಪೂರ್, ಕತ್ರಿನಾ ಕೈಫ್, ಇತ್ತೀಗಷ್ಟೆ ಜಾಕ್ವೆಲಿನ್ ಕುಣಿದಿದ್ದ 'ಭಾಗಿ-2' ಚಿತ್ರದ 'ಏಕ್ ಧೋ ತೀನ್......' ಹಾಡು ಸಖತ್ ಹವಾ ಮಾಡುತ್ತಿದೆ.

English summary
Kangana Ranaut on item numbers: Most of them are sexist, they should be banned. Kangana said, ''Well... I don’t do item numbers because there is nothing to be done in them.''

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X