»   » ಈ ಕಾರಣಕ್ಕೆ ಬಾಲಿವುಡ್ ನಟಿ ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಇಲ್ಲ.!

ಈ ಕಾರಣಕ್ಕೆ ಬಾಲಿವುಡ್ ನಟಿ ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಇಲ್ಲ.!

Posted By:
Subscribe to Filmibeat Kannada

ಇಂದಿನ ಯುವ ಜನತೆಗೆ ಮೊಬೈಲ್, ಇಂಟರ್ನೆಟ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಇದ್ರೆ ಸಾಕು. ಊಟ ಬೇಡ, ನಿದ್ದೆಯೂ ಬೇಡ. ರಾತ್ರಿ-ಹಗಲು ಸೋಷಿಯಲ್ ಮೀಡಿಯಾದಲ್ಲೇ ಮುಳುಗಿರುವ ಮಂದಿ ಲೆಕ್ಕವಿಲ್ಲದಷ್ಟು.

ಸೆಲೆಬ್ರಿಟಿಗಳೂ ಅಷ್ಟೇ... ಸೋಷಿಯಲ್ ಮೀಡಿಯಾದಲ್ಲೇ ಅಭಿಮಾನಿಗಳ ಜೊತೆಗೆ ಹೆಚ್ಚಾಗಿ ಕನೆಕ್ಟ್ ಆಗಿರುತ್ತಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ರಿಂದ ಹಿಡಿದು ಹೃತಿಕ್ ರೋಷನ್, ಶಾರೂಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್ ನ ಬಹುತೇಕ ಮಂದಿ ಫೇಸ್ ಬುಕ್, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿದ್ದಾರೆ.

ದಿನೇ ದಿನೇ ಸೆಲೆಬ್ರಿಟಿಗಳಿಗೆ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹೀಗಿದ್ದರೂ, ನಟಿ ಕಂಗನಾ ಮಾತ್ರ ಸೋಷಿಯಲ್ ಮೀಡಿಯಾಗೆ ಕಾಲಿಟ್ಟಿಲ್ಲ. ಯಾಕೆ ಅಂತ ಕೇಳಿದ್ರೆ, 'ಟೈಮ್ ಇಲ್ಲ' ಅಂತಾರೆ ನಟಿ ಕಂಗನಾ.

kangana-ranaut-explains-why-she-is-not-on-social-media

''ಸೋಷಿಯಲ್ ಮೀಡಿಯಾ ಹೆಚ್ಚು ಟೈಮ್ ಕನ್ ಸ್ಯೂಮ್ ಮಾಡುತ್ತದೆ. ನನ್ನ ಬಳಿ ಅಷ್ಟೊಂದು ಸಮಯ ಇಲ್ಲ'' ಎಂದಿದ್ದಾರೆ ನಟಿ ಕಂಗನಾ.

ಅರೆನಗ್ನ ಪ್ರತಿಭಟನೆ ಮಾಡಿದ ಶ್ರೀರೆಡ್ಡಿ ಬಗ್ಗೆ ಕಂಗನಾ ಬೇಸರ.!

''ಕೆಲ ಏಜೆಂಟ್ ಗಳು ನನ್ನ ಬಳಿ ಬಂದು ಒಂದು ಸೋಷಿಯಲ್ ಮೀಡಿಯಾ ಅಕೌಂಟ್ ಓಪನ್ ಮಾಡಿ ಸಾಕು. ಅದರಲ್ಲಿ ನಾವೇ ಪೋಸ್ಟ್ ಮಾಡ್ತೀವಿ. ನಾವೇ ಅಕೌಂಟ್ ಮ್ಯಾನೇಜ್ ಮಾಡ್ತೀವಿ ಅಂತಾರೆ. ಆದ್ರೆ, ನನಗೆ ಅದು ಸರಿ ಎನಿಸಲಿಲ್ಲ. ಲಕ್ಷಾಂತರ ಜನರ ಮುಂದೆ ನನ್ನ ಹೆಸರಲ್ಲಿ ಇನ್ನೊಬ್ಬರು ಪೋಸ್ಟ್ ಮಾಡುವುದು, ಫೇಕ್ ಮಾಡುವುದು ನನಗೆ ಇಷ್ಟ ಆಗುವುದಿಲ್ಲ'' ಅಂತ ಹೇಳಿದ್ದಾರೆ ನಟಿ ಕಂಗನಾ.

ಜೈರಾಗೆ ಕಿರುಕುಳ: ಎಚ್ಚರಿಕೆಯ ಸಂದೇಶ ನೀಡಿದ ಕಂಗನಾ

ಸದ್ಯ ಕಂಗನಾ 'ಮಣಿಕಾರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಹಾಗೂ 'ಮೆಂಟಲ್ ಹೈ ಕ್ಯಾ' ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.

English summary
Bollywood Actress Kangana Ranaut explains why she is not on social media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X