For Quick Alerts
  ALLOW NOTIFICATIONS  
  For Daily Alerts

  ಅಭಿಷೇಕ್ ಬಚ್ಚನ್ ನೇಣು ಹಾಕಿಕೊಂಡರೆ: ಜಯಾ ಬಚ್ಚನ್‌ಗೆ ಕಂಗನಾ ಪ್ರಶ್ನೆ

  |

  ಬಾಲಿವುಡ್‌ ವಿರುದ್ಧ, ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಸಮಯ ಸಾರಿರುವ ನಟಿ ಕಂಗನಾ ರಣೌತ್ ಈಗ ಬಾಲಿವುಡ್‌ನ ದೊಡ್ಡ ಮನೆ ಮೇಲೆ ಕಣ್ಣು ಹಾಕಿದ್ದಾರೆ.

  ಹೌದು, ಅಮಿತಾಬ್ ಬಚ್ಚನ್ ಕುಟುಂಬ ಮೇಲೆ ಕಂಗನಾ ಮಾತುಗಳ ಬಾಣವನ್ನು ಎಸೆದಿದ್ದಾರೆ. ಇದಕ್ಕೆ ಕಾರಣ ನಿನ್ನೆ ನಟಿ ಜಯಾ ಬಚ್ಚನ್ ರಾಜ್ಯಸಭೆಯಲ್ಲಿ ಆಡಿರುವ ಮಾತುಗಳು.

  ಡ್ರಗ್ಸ್ ಪ್ರಕರಣ: ನಟಿ ಕಂಗನಾ ಮತ್ತು ರವಿ ಕಿಶನ್ ವಿರುದ್ಧ ಜಯಾ ಬಚ್ಚನ್ ಆಕ್ರೋಶಡ್ರಗ್ಸ್ ಪ್ರಕರಣ: ನಟಿ ಕಂಗನಾ ಮತ್ತು ರವಿ ಕಿಶನ್ ವಿರುದ್ಧ ಜಯಾ ಬಚ್ಚನ್ ಆಕ್ರೋಶ

  ರಾಜ್ಯಸಭೆಯಲ್ಲಿ ಮಾತನಾಡಿದ್ದ ಜಯಾ ಬಚ್ಚನ್, ಯಾರೋ ಕೆಲವರು ಮಾಡಿದ ತಪ್ಪಿಗೆ ಇಡೀಯ ಬಾಲಿವುಡ್ ಉದ್ಯಮವನ್ನೇ ಹಳಿಯುವುದು ತಪ್ಪಲ್ಲ ಎಂದಿದ್ದರು. ಕೆಲವರು ಬಾಲಿವುಡ್ ಅನ್ನು ಮೋರಿಗೆ ಹೋಲಿಸಿದ್ದಾರೆ ಇದು ಖಂಡನೀಯ ಎಂದು ಕಂಗನಾ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದರು ಜಯಾ ಬಚ್ಚನ್.

  ಶ್ವೇತಾ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದರೆ: ಕಂಗನಾ ಉದ್ಧಟತನ

  ಶ್ವೇತಾ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದರೆ: ಕಂಗನಾ ಉದ್ಧಟತನ

  ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, 'ನಿಮ್ಮ ಮಗಳು ಶ್ವೇತಾ ಗೆ ಯಾರಾದರೂ ಡ್ರಗ್ಸ್ ನೀಡಿದರೆ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೆ, ಆಕೆಯ ಮೇಲೆ ಹಲ್ಲೆ ನಡೆಸಿದ್ದರೆ ನೀವು ಹೀಗೆ ಮಾತನಾಡುತ್ತಿದ್ದಿರೇ?' ಎಂದು ಪ್ರಶ್ನೆ ಮಾಡಿದ್ದಾರೆ.

  ಅಭಿಷೇಕ್ ಬಚ್ಚನ್ ಆತ್ಮಹತ್ಯೆ ಮಾಡಿಕೊಂಡರೆ: ಕಂಗನಾ ಪ್ರಶ್ನೆ

  ಅಭಿಷೇಕ್ ಬಚ್ಚನ್ ಆತ್ಮಹತ್ಯೆ ಮಾಡಿಕೊಂಡರೆ: ಕಂಗನಾ ಪ್ರಶ್ನೆ

  ಮುಂದುವರೆದು, 'ಒಂದು ವೇಳೆ ಅಭಿಷೇಕ್ ಬಚ್ಚನ್, ಬೆದರಿಕೆ ಹಾಗೂ ಕಿರುಕುಳ ನೀಡಿದ್ದಾರೆಂದು ದೂರು ನೀಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಿದ್ದರೆ ನೀವು ಹೀಗೆ ಮಾತನಾಡುತ್ತಿದ್ದಿರೇ?' ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ.

  ಮುಂಬೈ 'ಪಿಒಕೆ' ಎಂದು ಕಂಗನಾ ಹೇಳಿದರೂ ಬಾಲಿವುಡ್ ಯಾಕೆ ಮೌನ ವಹಿಸಿದೆ?: ಸಂಜಯ್ ರಾವತ್ಮುಂಬೈ 'ಪಿಒಕೆ' ಎಂದು ಕಂಗನಾ ಹೇಳಿದರೂ ಬಾಲಿವುಡ್ ಯಾಕೆ ಮೌನ ವಹಿಸಿದೆ?: ಸಂಜಯ್ ರಾವತ್

  ಕಂಗನಾ ಹೇಳಿಕೆಗೆ ವಿರೋಧ

  ಕಂಗನಾ ಹೇಳಿಕೆಗೆ ವಿರೋಧ

  'ಕಂಗನಾ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ' ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಯಾ ಬಚ್ಚನ್ ಹೇಳಿರುವ ಮಾತಿಗೂ ಕಂಗನಾ ಮಾಡಿರುವ ಪ್ರಶ್ನೆಗೂ ಸಂಬಂಧವೇ ಇಲ್ಲ ಎಂದಿದ್ದಾರೆ ನೆಟ್ಟಿಗರು. ಕೆಲವರು ಕಂಗನಾ ಗೆ ಬೆಂಬಲವನ್ನೂ ನೀಡಿದ್ದಾರೆ.

  ನಮಗೆ ತುಳಸಿಗಿಡ ಬರೀ ತುಳಸಿಗಿಡ ಮಾತ್ರ | Filmibeat Kannada
  ಬಾಲಿವುಡ್ ಅನ್ನು ಮೋರಿಗೆ ಹೋಲಿಸಿದ್ದ ಕಂಗನಾ

  ಬಾಲಿವುಡ್ ಅನ್ನು ಮೋರಿಗೆ ಹೋಲಿಸಿದ್ದ ಕಂಗನಾ

  'ಸ್ವಚ್ಛ ಭಾರತ ಅಭಿಯಾನದಡಿ ಬಾಲಿವುಡ್ ಎಂಬ ಮೋರಿಯನ್ನು ಸ್ವಚ್ಛ ಮಾಡಬೇಕು' ಎಂದು ಕಂಗನಾ ಹೇಳಿದ್ದರು. ಮತ್ತೊಬ್ಬ ನಟ, ರಾಜಕಾರಣಿ ರವಿ ಕಿಶನ್ ನಿನ್ನೆ ಲೋಕಸಭೆಯಲ್ಲಿ ಮಾತನಾಡಿ, ಬಾಲಿವುಡ್‌ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇವರಿಬ್ಬರ ಹೆಸರು ಹೇಳದೆ ಜಯಾ ಬಚ್ಚನ್ ರಾಜ್ಯಸಭೆಯಲ್ಲಿ ಇವರ ಹೇಳಿಕೆಯನ್ನು ವಿರೋಧಿಸಿದರು.

  English summary
  Actress Kangana Ranaut fires on Jaya bachchan for criticizing her in Rajya Sabha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X