For Quick Alerts
  ALLOW NOTIFICATIONS  
  For Daily Alerts

  ಯುಟ್ಯೂಬ್‌ನಲ್ಲಿ ಟ್ರೆಂಡ್‌ ಆದ ಕಂಗನಾ ಅಭಿನಯದ 'ಶಿ ಈಸ್ ಆನ್ ಫೈರ್‌' ಸಾಂಗ್

  |

  ಬಾಲಿವುಡ್ ಕ್ಷೀನ್ ನಟಿ ಕಂಗನಾ ರನೌತ್ ಅಭಿನನಯದ 'ಧಾಕಡ್' ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಯುಟ್ಯೂಬ್‌ನಲ್ಲಿ ಭಾರೀ ಟ್ರೆಂಡ್‌ ಸೃಷ್ಟಿ ಮಾಡುತ್ತಿದೆ. 'ಶಿ ಈಸ್‌ ಆನ್‌ ಫೈರ್‌' ಎಂಬ ಶೀರ್ಷಿಕೆಯಲ್ಲಿ ಹಾಡು ರಿಲೀಸ್‌ ಆಗಿದ್ದು, ಹಾಡಿನಲ್ಲಿ ಕಂಗನಾ ಮತ್ತು ಅರ್ಜುನ್ ರಾಂಪಲ್ ಫುಲ್ ಫೈರ್‌ ರೀತಿಯೇ ಕಾಣಿಸಿಕೊಂಡಿದ್ದಾರೆ. ಬಾದ್‌ಶಾ ರಚಿಸಿರುವ ಹಾಡು ಇದಾಗಿದ್ದು, ನಿಕಿತಾ ಗಾಂಧಿ ಹಾಗೂ ಬಾದ್‌ಶಾ ಹಾಡಿದ್ದಾರೆ.

  ಕಂಗನಾ 'ಧಾಕಡ್' ಸಿನಿಮಾದ ಏಜೆಂಟ್‌ ಅಗ್ನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಾಡಿನಲ್ಲೂ ಕೂಡ ಫುಲ್‌ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಲನ್ ಪಾತ್ರದಲ್ಲಿ ಅರ್ಜುನ್ ರಾಂಪಲ್‌ ಕಾಣಿಸಿಕೊಂಡಿದ್ದು, ಕಂಗನಾ ಹಾಗೂ ರಾಂಪಲ್‌ ನಡುವೆ ನಡೆಯುವ ಜಿದ್ದಾಜಿದ್ದಿನ ಸನ್ನಿವೇಶವನ್ನೇ ಹಾಡಿನ ರೂಪದಲ್ಲಿ ಚಿತ್ರೀಕರಿಸಲಾಗಿದೆ.

  'ಝಂಡ್' ಸಿನಿಮಾ ಒಟಿಟಿ ಬಿಡುಗಡೆಗೆ ಸುಪ್ರೀಂಕೋರ್ಟ್‌ ಅಸ್ತು'ಝಂಡ್' ಸಿನಿಮಾ ಒಟಿಟಿ ಬಿಡುಗಡೆಗೆ ಸುಪ್ರೀಂಕೋರ್ಟ್‌ ಅಸ್ತು

  ಹಾಡಿನ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿರುವ ಕಂಗನಾ ನಾನು ಹಾಡಿನ ಚಿತ್ರೀಕರಣವನ್ನು ಬಹಳ ಖುಷಿಯಿಂದ ಮಾಡಿದ್ದೇನೆ ಏಕೆಂದರೆ ಬಾದ್‌ಶಾ ಸಂಗೀತ ಸಂಯೋಜನೆಯನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ಅವರ ಪ್ರತಿ ಹಾಡುಗಳು ಸಹ ವಿಭಿನ್ನ ಶೈಲಿಯಲ್ಲಿ ಇರುತ್ತದೆ. ಈ ಹಾಡಿನಲ್ಲೂ ಸಹ ನನ್ನನ್ನು ಫೈರ್‌ ರೀತಿಯಲ್ಲೇ ತೋರಿಸಲಾಗಿದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.

  ಇತ್ತೀಚಿಗಷ್ಟೇ 'ಧಾಕಡ್' ಸಿನಿಮಾದ ಟ್ರೈಲರ್‌ ರಿಲೀಸ್ ಆಗಿ ಭಾರೀ ಸೆನ್‌ಸೇಷನ್ ಕ್ರಿಯೇಟ್ ಮಾಡಿತ್ತು. ಈ ಚಿತ್ರದಲ್ಲಿ ಕಂಗನಾ ಅದ್ಭುತ ಆ್ಯಕ್ಷನ್‌ ಸೀಕ್ವೆನ್ಸ್‌ನಲ್ಲಿ ನಟಿಸಿರುವುದು ಕಂಡುಬಂದಿದೆ. ರಜನೀಶ್ ರಾಜಿ ಘಾಯ್ ನಿರ್ದೇಶನದ ಈ ಚಿತ್ರದಲ್ಲಿ ಕಂಗನಾ ವಿವಿಧ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ ನೋಡಿದ ಅಭಿಮಾನಿಗಳು ಕೂಡ ಕಂಗನಾ ಹೊಸ ಗೆಟಪ್‌ನ್ನು ಮೆಚ್ಚಿಕೊಂಡಿದ್ದಾರೆ. ಈಗ ಇದೇ ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಿದ್ದು, ಯುಟ್ಯೂಬ್‌ನಲ್ಲಿ ಫೈರ್‌ ಎಬ್ಬಿಸಿದೆ.

  Kangana Ranaut has released the first song from her upcoming film Dhaakad She’s On Fire”

  ಆಕ್ಷನ್‌ ಡ್ರಾಮಾ ಇರುವ ಸಿನಿಮಾದಲ್ಲಿ ಕಂಗನಾ ರನೌತ್, ಅರ್ಜುನ್ ರಾಂಪಲ್ ಮತ್ತು ದಿವ್ಯಾ ದತ್ತ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಟ್ರೈಲರ್‌ ಹಾಗೂ ಹಾಡಿನ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಿರುವ 'ಧಾಕಡ್‌' ಸಿನಿಮಾ ಇದೇ ಮೇ 20 ರಂದು ರಿಲೀಸ್‌ ಆಗಲಿದ್ದು, ಕಂಗನ್ ಬೆಳ್ಳಿ ತೆರೆ ಮೇಲೆ ರಾಕ್‌ ಮಾಡಲು ಸಿದ್ದರಾಗಿದ್ದಾರೆ. ಈಗಾಗಲೇ ಯುಟ್ಯೂಬ್‌ನಲ್ಲಿ ಸಿನಿಮಾ ಟ್ರೈಲರ್‌ 30 ಮಿಲಿಯನ್‌ ವೀಕ್ಷಣೆ ಪಡೆದುಕೊಂಡಿದೆ. ಈಗ 'ಶಿ ಈಸ್‌ ಆನ್ ಫೈರ್‌' ಹಾಡು ಕೂಡ ಹೆಚ್ಚಿನ ವೀವ್ಸ್ ಪಡೆದುಕೊಳ್ಳುತ್ತಿದೆ. ಸದ್ಯ ಹಾಡು, ಟ್ರೈಲರ್ ನೋಡಿರುವ ಕಂಗನಾ ಅಭಿಮಾನಿಗಳು ಸಿನಿಮಾ ನೋಡಲು ಕಾತುರರಾಗಿದ್ದಾರೆ.

  English summary
  Kangana Ranaut has released the first song from her upcoming film Dhaakad. Titled “She’s On Fire”, the song is picturised on Kangana and Arjun Rampal.
  Friday, May 6, 2022, 11:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X