For Quick Alerts
  ALLOW NOTIFICATIONS  
  For Daily Alerts

  ಈಜಿಪ್ಟ್ ಮೂಲದ ಇಮ್ರಾನ್ ಜೊತೆ ಕಂಗನಾ ರಣಾವತ್ ಡೇಟಿಂಗ್?

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಇನ್ನು ಮದುವೆಯಾಗಿಲ್ಲ. ಒಂದೆರಡು ಪ್ರೀತಿ ವಿಚಾರಗಳು ವರದಿಯಾದರೂ ಯಾವುದು ದಾಂಪತ್ಯದವರೆಗೂ ಬಂದಿಲ್ಲ. ಆದಿತ್ಯ ಪಾಂಚೋಲಿ, ಅಜಯ್ ದೇವಗನ್, ಹೃತಿಕ್ ರೋಷನ್ ಜೊತೆ ಅಫೇರ್ ಸುದ್ದಿಗಳು ಚಾಲ್ತಿಯಲ್ಲಿತ್ತು. ಈಗ ಕಂಗನಾ ರಣಾವತ್ ಸಿಂಗಲ್ ಎನ್ನುವುದು ತೆರೆದ ಪುಸ್ತಕ. ಪ್ರಸ್ತುತ, ಬಾಲಿವುಡ್ ಪ್ರಭಾವಿಗಳ ವಿರುದ್ಧ ಕುಟುಕುವ ಮೂಲಕ ಕಂಗನಾ ಹೆಚ್ಚು ಸುದ್ದಿಯಲ್ಲಿರ್ತಾರೆ.

  ಈ ನಡುವೆ ಈಜಿಪ್ಟ್ ಮೂಲದ ವ್ಯಕ್ತಿಯೊಬ್ಬರ ಜೊತೆ ಕಂಗನಾ ರಣಾವತ್ ಡೇಟಿಂಗ್‌ನಲ್ಲಿದ್ದಾರೆ ಎಂಬ ಚರ್ಚೆ ಹುಟ್ಟುಹಾಕಿದ್ದಾರೆ ಕಮಲ್ ಆರ್ ಖಾನ್.

  ಕಂಗನಾ ಹಾಟ್ & ಸೆಕ್ಸಿ ಫೋಟೋ ವೈರಲ್: ಯೂರೋಪ್‌ನಲ್ಲಿ 'ಕ್ವೀನ್' ಪಾರ್ಟಿಕಂಗನಾ ಹಾಟ್ & ಸೆಕ್ಸಿ ಫೋಟೋ ವೈರಲ್: ಯೂರೋಪ್‌ನಲ್ಲಿ 'ಕ್ವೀನ್' ಪಾರ್ಟಿ

  ''ಬ್ರೇಕಿಂಗ್ ನ್ಯೂಸ್: ಈಜಿಪ್ಟ್ ಮೂಲದ ಇಮ್ರಾನ್ ಎಂಬ ವ್ಯಕ್ತಿಯೊಂದಿಗೆ ಕಂಗನಾ ರಣಾವತ್ ಡೇಟ್ ಮಾಡ್ತಿದ್ದಾರೆ. ಇದು ಲವ್ ಜಿಹಾದ್ ಇರಬಹುದಾ?'' ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದರು. ಈ ವೇಳೆ ಕಂಗನಾ ಜೊತೆ ಅನಾಮಿಕ ವ್ಯಕ್ತಿಯಿರುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದರು. ಇದು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಡಿಲೀಟ್ ಆಗಿದೆ.

  ಕೆಆರ್‌ಕೆ ಟ್ವೀಟ್ ಡಿಲೀಟ್ ಆಗಿದ್ದರೂ ಕೆಲವು ಕಡೆ ಆ ಟ್ವೀಟ್ ಹಾಗೂ ಫೋಟೋಗಳು ವೈರಲ್ ಆಗಿದೆ. ಇದೇ ವಿಚಾರವಾಗಿ ನೆಟ್ಟಿಗರು ಸಹ ಗೊಂದಲಕ್ಕೆ ಒಳಗಾಗಿದ್ದಾರೆ.

  ಬಳಿಕ, ಈ ಫೋಟೋಗಳು ಮತ್ತು ಕೆಆರ್‌ಕೆ ಟ್ವೀಟ್ ಬಗ್ಗೆ ಕಂಗನಾ ರಣಾವತ್ ಪರ ವಕೀಲರು ಸ್ಪಷ್ಟನೆ ಕೊಟ್ಟಿದ್ದಾರೆ. ಕಂಗನಾ ಬಾಯ್‌ಫ್ರೆಂಡ್ ಎಂದು ಫೋಟೋಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಅದು ಕಂಗನಾ ಅವರ ಮ್ಯಾನೇಜರ್ ರಿಜ್ವಾನ್ ಸೈಯದ್. ಈ ಫೋಟೋ ಬಳಸಿ ಕಂಗನಾ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದಿರುವ ವಕೀಲರು ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

  ಹಾಟ್ ಆದ ಬೆನ್ನಲ್ಲೇ ಕಂಗನಾ ಬಗ್ಗೆ ಕೇಳಿಬರ್ತಿದೆ ಸೂಪರ್ ಡೂಪರ್ ಸುದ್ದಿಹಾಟ್ ಆದ ಬೆನ್ನಲ್ಲೇ ಕಂಗನಾ ಬಗ್ಗೆ ಕೇಳಿಬರ್ತಿದೆ ಸೂಪರ್ ಡೂಪರ್ ಸುದ್ದಿ

  ಜುಲೈ ಕೊನೆಯಲ್ಲಿ ರಿಜ್ವಾನ್ ಹುಟ್ಟುಹಬ್ಬವಿತ್ತು. ಸ್ವತಃ ಕಂಗನಾ ರಣಾವತ್ ತಮ್ಮ ಮ್ಯಾನೇಜರ್ ಬರ್ತಡೇ ಆಚರಿಸಿದ್ದರು. ಆಗ ಕ್ಲಿಕ್ಕಿಸಿರುವ ಕೆಲವು ಫೋಟೋಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

  English summary
  KRK Claims Bollywood actress Kangana Ranaut is dating a man from Egypt, later he deleted tweets.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X