»   » ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು?

ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು?

Posted By:
Subscribe to Filmibeat Kannada

ಬಾಲಿವುಡ್ ಒಂದು ಸಾಗರ ಇದ್ಹಾಗೆ. ಇದ್ರಲ್ಲಿ ಈಜೋದು ತುಂಬಾನೇ ಕಷ್ಟ. ಅಂಥದ್ರಲ್ಲಿ ಗಾಡ್ ಫಾದರ್ ಇಲ್ಲದೇ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಕಂಗನಾ ರಣೌತ್ ಇಂದು ಇಡೀ ಬಿಟೌನ್ ಗೆ 'ಕ್ವೀನ್' ಆಗಿದ್ದಾರೆ.

'ಕ್ವೀನ್', 'ತನು ವೆಡ್ಸ್ ಮನು ರಿಟರ್ನ್ಸ್' ಸೇರಿದಂತೆ ಬ್ಯಾಕ್ ಟು ಬ್ಯಾಕ್ ಹಿಟ್ಸ್ ನೀಡುತ್ತಿರುವ ಕಂಗನಾ, ಈಗ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 11 ಕೋಟಿ. [ಐಐಎಫ್ಎ ಪ್ರಶಸ್ತಿ: 'ಕ್ವೀನ್' ಕಂಗನಾ, 'ಹೈದರ್' ಕಪೂರ್ ಬೆಸ್ಟ್]

kangana-ranaut

ನೀವು ನಂಬ್ತೀರೋ, ಬಿಡ್ತೀರೋ...ಇತ್ತೀಚಿಗಷ್ಟೆ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ ಕಂಗನಾ ರಣೌತ್ ಪಡೆದಿರುವ ಸಂಭಾವನೆ 11 ಕೋಟಿ. ಆ ಮೂಲಕ ನಟಿಯರ ಪೈಕಿ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಖ್ಯಾತಿ ಕಂಗನಾ ಪಾಲಾಗಿದೆ. [100 ಕೋಟಿ ಕ್ಲಬ್ಬಿಗೆ ತನು ವೆಡ್ಸ್ ಮನು ರಿಟರ್ನ್ಸ್]

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಗನಾ, ''ನಾನು ಮಾಡುವ ಪಾತ್ರ ಮತ್ತು ಸಿನಿಮಾ ಒಂದು ವರ್ಷ ಹಿಡಿಯುತ್ತದೆ. ಹೀಗಾಗಿ ಅಷ್ಟು ಸಂಭಾವನೆ ಅವಶ್ಯಕ'' ಅಂತ ಬೋಲ್ಡ್ ಸ್ಟೇಟ್ಮೆಂಟ್ ನೀಡಿದ್ದಾರೆ. (ಏಜೆನ್ಸೀಸ್)

English summary
According to the reports, Kangana Ranaut is currently Bollywood's highest paid Actress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada