For Quick Alerts
  ALLOW NOTIFICATIONS  
  For Daily Alerts

  ಇಂದಿರಾ ಗಾಂಧಿ ಸಿನಿಮಾಕ್ಕಾಗಿ ತನ್ನೆಲ್ಲ ಆಸ್ತಿ ಅಡವಿಟ್ಟ ಕಂಗನಾ ರನೌತ್!

  By ಫಿಲ್ಮಿಬೀಟ್ ಡೆಸ್ಕ್
  |

  ಕಂಗನಾ ರನೌತ್ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವವರು. ಒಂದರ ಹಿಂದೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಕೇಸುಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ.

  ಆದರೆ ನಟನೆ ವಿಷಯಕ್ಕೆ ಬಂದಾಗ ಆಕೆಯನ್ನು ಮೀರಿಸುವ ನಟಿ ಬಾಲಿವುಡ್‌ನಲ್ಲಿ ಮತ್ತೊಬ್ಬರಿಲ್ಲ. ಯಾವುದೇ ಪಾತ್ರವಾದರೂ ಪರಕಾಯ ಪ್ರವೇಶ ಮಾಡುವ ಕಂಗನಾ, ಪಾತ್ರವೇ ತಾವಾಗಿಬಿಡುತ್ತಾರೆ. ಕಂಗನಾರನ್ನು ದ್ವೇಷಿಸುವವರು ಸಹ ಆಕೆಯ ನಟನೆಗೆ ಮಾರು ಹೋಗದೇ ಬೇರೆ ವಿಧಿಯಿಲ್ಲ.

  ನಟನೆಗೆ ಎರಡು ರಾಷ್ಟ್ರಪ್ರಶಸ್ತಿ ಪಡೆದಿರುವ ಕಂಗನಾ ಇದೀಗ ಮತ್ತೊಂದು ರಾಷ್ಟ್ರಪ್ರಶಸ್ತಿ ಮೇಲೆ ಕಣ್ಣು ಹಾಕಿದಂತೆ ಕಾಣುತ್ತಿದೆ. ಭಾರತದ ಪ್ರಮುಖ ರಾಜಕೀಯ ಘಟನೆ ತುರ್ತು ಪರಿಸ್ಥಿತಿ ಕುರಿತ ಸಿನಿಮಾವನ್ನು ಕಂಗನಾ ರನೌತ್ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದು ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುವ ಕಂಗನಾ, ಈ ಬಾರಿಯಂತೂ ಈ ಸಿನಿಮಾಕ್ಕಾಗಿ ತಮ್ಮ ಆಸ್ತಿಯನ್ನು ಸಹ ಅಡವಿಟ್ಟಿದ್ದಾರಂತೆ.

  'ಎಮರ್ಜೆನ್ಸಿ' ಸಿನಿಮಾವನ್ನು ಕಂಗನಾ ರನೌತ್ ನಿರ್ದೇಶನ ಮಾಡಿ, ಸಹ ನಿರ್ಮಾಣವೂ ಮಾಡಿದ್ದಾರೆ. ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೆ ಮುಗಿದಿದ್ದು, ಶೂಟಿಂಗ್‌ ಸೆಟ್‌ನ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಂಗನಾ ರನೌತ್ ಶೂಟಿಂಗ್ ಮುಗಿದಿರುವ ವಿಷಯ ಹಂಚಿಕೊಂಡಿದ್ದಾರೆ ಜೊತೆಗೆ ಈ ಸಿನಿಮಾ ಮುಗಿಸಲು ಬಹಳ ಕಷ್ಟಪಟ್ಟಿರುವುದಾಗಿಯೂ ಹೇಳಿಕೊಂಡಿದ್ದಾರೆ.

  ಈ ಸಿನಿಮಾ ನಟಿಯಾಗಿ, ವ್ಯಕ್ತಿಯಾಗಿ ನನಗೆ ಬಹಳ ಮುಖ್ಯ. ಈ ಸಿನಿಮಾದ ಚಿತ್ರೀಕರಣ ಮುಗಿಸಲು ನನ್ನ ಎಲ್ಲ ಆಸ್ತಿಯನ್ನು ಅಡವಿಟ್ಟಿದ್ದೇನೆ. ಶೂಟಿಂಗ್‌ನ ಮೊದಲ ಶೆಡ್ಯೂಲ್ ವೇಳೆ ಡೆಂಗ್ಯೂ ನನ್ನ ಆವರಿಸಿಕೊಂಡು ಬಹಳ ತ್ರಾಸು ನೀಡಿತ್ತು. ಬ್ಲಡ್ ಕೌಂಟ್ ಬಹಳ ಕಡಿಮೆಯಾಗಿಬಿಟ್ಟಿತ್ತು'' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಕಂಗನಾ.

  ''ನಾನು ನನ್ನ ಖಾಸಗಿ ಜೀವನದ ಬಗ್ಗೆ ನನ್ನ ಭಾವನೆಗಳ ಬಗ್ಗೆ ಸಾಕಷ್ಟು ವಿಷಯವನ್ನು ಸಾಂಆಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತೇನೆ. ಆದರೆ ಈ ವಿಷಯವನ್ನು ನಾನು ಹಂಚಿಕೊಂಡಿರಲಿಲ್ಲ ಏಕೆಂದರೆ, ಜನ ಅನವಶ್ಯಕವಾಗಿ ಆತಂಕಕ್ಕೆ ಒಳಗಾಗುವುದು ನನಗೆ ಇಷ್ಟವಿರಲಿಲ್ಲ, ಮತ್ತು ನನ್ನನ್ನು ದ್ವೇಷಿಸುವ ಜನರಿಗೆ ಖುಷಿ ಕೊಡುವುದು ಸಹ ನನಗೆ ಇಷ್ಟವಿರಲಿಲ್ಲ'' ಎಂದಿದ್ದಾರೆ.

  English summary
  Kangana Ranaut mortgage all her property to complete emergency movie. She acting as Indira Gandhi in Energency movie.
  Sunday, January 22, 2023, 10:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X