»   » ಅಬ್ಬಬ್ಬಾ.! ಕಂಗನಾ ಕೊಂಡ ಹೊಸ ಬಂಗಲೆಯ ಬೆಲೆ ಇಷ್ಟೊಂದಾ.?

ಅಬ್ಬಬ್ಬಾ.! ಕಂಗನಾ ಕೊಂಡ ಹೊಸ ಬಂಗಲೆಯ ಬೆಲೆ ಇಷ್ಟೊಂದಾ.?

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ಬಹು ಬೇಡಿಕೆ ಹೊಂದಿರುವ ನಟಿಯರ ಪೈಕಿ ಗುಂಗುರು ಕೂದಲ ಬೆಡಗಿ ಕಂಗನಾ ಕೂಡ ಒಬ್ಬರು. 'ಕ್ವೀನ್' ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿರುವ ಕಂಗನಾ ಸಂಭಾವನೆ ರೂಪದಲ್ಲಿ ಕೋಟ್ಯಾಂತರ ರೂಪಾಯಿ ಪಡೆಯುತ್ತಾರೆ.

ಕೋಟಿ ಒಡತಿ ಕಂಗನಾ ಇದೀಗ ಮುಂಬೈನಲ್ಲಿ ಬಂಗಲೆಯೊಂದನ್ನ ಖರೀದಿಸಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಇರುವ ಪಾಲಿ ಹಿಲ್ ನಲ್ಲಿರುವ ಮೂರು ಅಂತಸ್ತಿನ ಬಂಗಲೆಯನ್ನ ಕೊಂಡುಕೊಂಡಿದ್ದಾರೆ. ಅದು ಬರೋಬ್ಬರಿ 20.7 ಕೋಟಿ ರೂಪಾಯಿ ಕೊಟ್ಟು.!

Kangana Ranaut purchased a bunglow worth rs 20.7 crore

ಯೋಗ ಗುರುವಿಗೆ ರೂ.2 ಕೋಟಿ ಫ್ಲ್ಯಾಟ್ ನೀಡಿದ ಕಂಗನಾ

ಹೌದು, ಚದರ ಅಡಿಗೆ 67,000 ರೂಪಾಯಿ ಕೊಟ್ಟು ಬೃಹತ್ ಬಂಗಲೆಗೆ ಕಂಗನಾ 'ಕ್ವೀನ್' ಆಗಿದ್ದಾರೆ. ಈಗಾಗಲೇ, ಅದರ ರಿಜಿಸ್ಟ್ರೇಷನ್ ಕಾರ್ಯ ಕೂಡ ಮುಗಿದಿದೆ.

ಮೂಲಗಳ ಪ್ರಕಾರ, ಇಲ್ಲೇ ತಮ್ಮ ಪ್ರೊಡಕ್ಷನ್ ಹೌಸ್ ತೆರೆಯಲು ಕಂಗನಾ ಮನಸ್ಸು ಮಾಡಿದ್ದಾರಂತೆ. ನಿರ್ದೇಶಕಿ ಆಗುವ ಕನಸು ಕಾಣುತ್ತಿರುವ ಕಂಗನಾ ಪ್ರೊಡಕ್ಷನ್ ಹೌಸ್ ಆರಂಭಿಸಲು ಸಕಲ ತಯಾರಿ ನಡೆಸುತ್ತಿದ್ದಾರೆ.

ಕಂಗನಾ ಅಭಿನಯದ 'ಸಿಮ್ರಾನ್' ಚಿತ್ರ ಇತ್ತೀಚೆಗಷ್ಟೇ ತೆರೆಕಂಡಿತ್ತು. ಸದ್ಯ 'ಮಣಿಕಾರ್ಣಿಕಾ - ಕ್ವೀನ್ ಅಫ್ ಝಾನ್ಸಿ' ಚಿತ್ರದಲ್ಲಿ ಕಂಗನಾ ಅಭಿನಯಿಸುತ್ತಿದ್ದಾರೆ.

English summary
Bollywood Actress Kangana Ranaut purchased a bunglow at Pali Hill, Mumbai worth Rs. 20.7 crore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada