For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಪ್ರಕರಣದಲ್ಲಿ ಆಮೀರ್ ಖಾನ್ ಮೌನವಹಿಸಿದ್ದೇಕೆ? ಸ್ಟಾರ್ ನಟರ ವಿರುದ್ಧ ಕಂಗನಾ ಆಕ್ರೋಶ

  |

  ಸುಶಾಂತ್ ಸಿಂಗ್ ಸಾವಿನ ಪ್ರಕರಣ ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಸುಶಾಂತ್ ನಿಧನದ ಬಳಿಕ ಸುಶಾಂತ್ ಬಾಲಿವುಡ್ ನ ಕರಾಳ ಮುಖ ಬಹಿರಂಗವಾಗಿದೆ. ಬಾಲಿವುಡ್ ಮಾಫಿಯಾದ ಬಗ್ಗೆ ನಟಿ ಕಂಗನಾ ರಣಾವತ್ ಎಳೆಎಳೆಯಾಗಿ ಬಿಚ್ಚಿಡುತ್ತಾ ಬಂದಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಕಂಗನಾ ಬಾಲಿವುಡ್ ಪ್ರಬಲ ವ್ಯಕ್ತಿಗಳ ವಿರುದ್ಧ ಕಿಡಿಕಾತ್ತಿದ್ದಾರೆ.

  Upendra ಬ್ರಹ್ಮ ಚಿತ್ರದಲ್ಲಿನ ಡುಯೆಟ್ ಹಾಡು ತಯಾರಾದ ಕ್ಷಣಗಳು | Filmibeat Kannada

  ಸಾಕಷ್ಟು ಅನುಮಾನಗಳನ್ನು ಮೂಡಿಸಿದ್ದ ಸುಶಾಂತ್ ಸಿಂಗ್ ಸಾವಿನ ಪ್ರಕರಣ ಈಗ ಸಿಬಿಐಗೆ ಹಸ್ತಾಂತರ ಮಾಡಲಾಗಿದೆ. ಸುಶಾಂತ್ ಸಿಂಗ್ ಸಾವಿನ ಹಿಂದಿನ ನಿಜವಾದ ರಹಸ್ಯ ತಿಳಿಯಲು ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬದವರು ಹೋರಾಟ ಮಾಡುತ್ತಿದ್ದರು. ಸಿಬಿಐಗೆ ಒಪ್ಪಿಸುತ್ತಿದ್ದಂತೆ ಅಭಿಮಾನಿಗಳ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಓದಿ...

  ಸಾರಾ-ಸುಶಾಂತ್ ಲವ್ ಬ್ರೇಕ್ ಅಪ್: ಆಸೆ ತೋರಿಸಿ, ಬಿಸಾಡಿ ಹೋಗುತ್ತಾರೆ ಸ್ಟಾರ್ ಮಕ್ಕಳು ಎಂದ ಕಂಗನಾ

  ಆಮೀರ್ ಖಾನ್ ಮೌನ ವಹಿಸಿದ್ದೇಕೆ

  ಆಮೀರ್ ಖಾನ್ ಮೌನ ವಹಿಸಿದ್ದೇಕೆ

  ಈ ಸಂಬಂಧ ಖಾಸಗಿ ವಾಹಿನಿ ಜೊತೆ ಮಾತನಾಡಿದ ನಟಿ ಕಂಗನಾ ಸುಶಾಂತ್ ಸಿಂಗ್ ಪ್ರಕರಣದ ಬಗ್ಗೆ ಬಾಲಿವುಡ್ ನ ಕೆಲವು ಸ್ಟಾರ್ ನಟರು ಮೌನವನ್ನು ಕಂಗನಾ ಪ್ರಶ್ನಿಸಿದ್ದಾರೆ. ಅದರಲ್ಲೂ ನಿಖರವಾಗಿ ಕಂಗನಾ ಆಮೀರ್ ಖಾನ್ ಹೆಸರನ್ನು ಉಲ್ಲೇಖಿಸಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಯಾವ ನಟರು ಸಹ ಸಿಬಿಐ ತನಿಖೆಗೆ ಒತ್ತಾಯ ಮಾಡಲಿಲ್ಲ. ಪಿಕೆ ಸಿನಿಮಾದಲ್ಲಿ ಸುಶಾಂತ್ ಜೊತೆ ಆಮೀರ್ ಖಾನ್ ಕೆಲಸ ಮಾಡಿದ್ದರೂ ಸಹ ಧ್ವನಿ ಎತ್ತಲಿಲ್ಲ ಎಂದು ಹೇಳಿದ್ದಾರೆ.

  ಗ್ಯಾಂಗ್ ಆಗಿ ಕಾರ್ಯನಿರ್ವಹಿಸುತ್ತಿದೆ

  ಗ್ಯಾಂಗ್ ಆಗಿ ಕಾರ್ಯನಿರ್ವಹಿಸುತ್ತಿದೆ

  ಇಡೀ ಉದ್ಯಮ ಗ್ಯಾಂಗ್ ಆಗಿ ಕಾರ್ಯನಿರ್ವಹಿಸುತ್ತಿದೆ. ಆಮೀರ್ ಖಾನ್ ಮಾತ್ರವಲ್ಲ ಅನುಷ್ಕಾ ಶರ್ಮಾ ಕೂಡ ಮಾತನಾಡಲಿಲ್ಲ. ಅನುಷ್ಕಾ ಶರ್ಮಾ ಪಿಕೆ ಸಿನಿಮಾದಲ್ಲಿ ಸುಶಾಂತ್ ಸಿಂಗ್ ಜೊತೆ ಕೆಲಸ ಮಾಡಿದ್ದಾರೆ. ಆದರೂ ಸುಶಾಂತ್ ಸಿಂಗ್ ಬಗ್ಗೆ ಧ್ವನಿ ಎತ್ತಲಿಲ್ಲ. ಚಿತ್ರರಂಗದಲ್ಲಿ ನಿಧನಹೊಂದಿದ ಒಬ್ಬ ಸಹಕಲಾವಿದನಿಗಾಗಿ ಯಾರೊಬ್ಬರು ಮಾತನಾಡಿಲ್ಲ ಎಂದು ಕಂಗನಾ ಹೇಳಿದ್ದಾರೆ.

  ಸುಶಾಂತ್ ಸಿಂಗ್ ಪ್ರಕರಣ ಸಿಬಿಐಗೆ: ಅಕ್ಷಯ್, ಕಂಗನಾ ಸೇರಿದ್ದಂತೆ ಕಲಾವಿದರ ಪ್ರತಿಕ್ರಿಯೆ ಹೀಗಿದೆ

  ದೀಪಿಕಾ ಖಿನ್ನತೆಯನ್ನು ವ್ಯವಹಾರಿಕವಾಗಿ ಪರಿವರ್ತಿಸಿಕೊಂಡರು

  ದೀಪಿಕಾ ಖಿನ್ನತೆಯನ್ನು ವ್ಯವಹಾರಿಕವಾಗಿ ಪರಿವರ್ತಿಸಿಕೊಂಡರು

  ಕೆಲವರು ಈಗ ಮಾತನಾಡುತ್ತಿದ್ದಾರೆ. ಆದರೆ ಉಳಿದವರು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದಿದ್ದಾರೆ. ದೀಪಿಕಾ ಪಡುಕೋಣೆ ಬಗ್ಗೆ ಮಾತನಾಡಿರುವ ಕಂಗನಾ, ಸುಶಾಂತ್ ಸಾವಿನ ಬಳಿಕ ಖಿನ್ನತೆ ಬಗ್ಗೆ ಜಾಗೃತಿ ಮೂಡಿಸುವಂತೆ ಅಭಿಮಾನಿಗಳನ್ನು ಒತ್ತಾಯಿಸಿದ್ದರು. ನಂತರ ತನ್ನ ಖಿನ್ನತೆಯನ್ನು ವ್ಯವಹಾರಿಕವಾಗಿ ಪರಿವರ್ತಿಸಿಕೊಂಡರು ಎಂದು ದೀಪಿಕಾ ವಿರುದ್ಧವೂ ಕಿಡಿಕಾರಿದ್ದಾರೆ.

  ಮೊದಲ ಬಾರಿಗೆ ಮಾತನಾಡಿದ ಅಕ್ಷಯ್

  ಮೊದಲ ಬಾರಿಗೆ ಮಾತನಾಡಿದ ಅಕ್ಷಯ್

  ಬಾಲಿವುಡ್ ಮಾಫಿಯಾದ ವಿರುದ್ಧ ಕಿಡಿಕಾರುತ್ತಿರುವ ಕಂಗನಾ ಇದೀಗ ಸ್ಟಾರ್ ಕಲಾವಿದರ ಮೌನವನ್ನು ಪ್ರಶ್ನಿಸಿದ್ದಾರೆ. ಕೆಲವು ನಟರು ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಶ್ಲಾಘಿಸಿದ್ದಾರೆ. ಇದುವರೆಗೂ ಮೌನ ವಹಿಸಿದ್ದ ನಟ ಅಕ್ಷಯ್ ಕುಮಾರ್ ಸುಪ್ರೀಂ ಕೋರ್ಟ್ ತೀರ್ಪನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.

  English summary
  Bollywood Actress Kangana Ranaut questions on Aamir Khan silence in Sushant singh case. He worked with Sushant Singh in PK movie but not raise voice.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X