For Quick Alerts
  ALLOW NOTIFICATIONS  
  For Daily Alerts

  ಸಾರಾ-ಸುಶಾಂತ್ ಲವ್ ಬ್ರೇಕ್ ಅಪ್: ಆಸೆ ತೋರಿಸಿ, ಬಿಸಾಡಿ ಹೋಗುತ್ತಾರೆ ಸ್ಟಾರ್ ಮಕ್ಕಳು ಎಂದ ಕಂಗನಾ

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಕುಟುಂಬದವರಿಗೆ, ಸ್ನೇಹಿತರಿಗೆ ಮತ್ತು ಅಭಿಮಾನಿಗಳಿಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಾಲಿವುಡ್ ನಲ್ಲಿ ಜನಪ್ರಿಯ ನಟನಾಗಿ ಗುರುತಿಸಿಕೊಂಡಿದ್ದ ಸುಶಾಂತ್ ಸಿಂಗ್ ನಿಧನದ ಬಳಿಕ ಸಾಕಷ್ಟು ವಿಚಾರಗಳು ಹೊರಬರುತ್ತಿವೆ. ಸುಶಾಂತ್ ಸಿಂಗ್ ಮತ್ತು ರಿಯಾ ಚಕ್ರವರ್ತಿ ಇಬ್ಬರು ಒಬ್ಬರನ್ನು ಪ್ರೀತಿಸುವ ಮೊದಲು ಸುಶಾಂತ್ ಸಿಂಗ್ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಅವರನ್ನು ಪ್ರೀತಿಸುತ್ತಿದ್ದರು ಎನ್ನುವ ಅಚ್ಚರಿಕರ ವಿಚಾರ ಬಹಿರಂಗವಾಗಿದೆ.

  Upendra ಬ್ರಹ್ಮ ಚಿತ್ರದಲ್ಲಿನ ಡುಯೆಟ್ ಹಾಡು ತಯಾರಾದ ಕ್ಷಣಗಳು | Filmibeat Kannada

  ಸಾರಾ ಮತ್ತು ಸುಶಾಂತ್ ಪ್ರೀತಿಯ ವಿಚಾರವನ್ನು ಸುಶಾಂತ್ ಗೆಳೆಯ ಸ್ಯಾಮ್ಯುಯೆಲ್ ಹಾಕಿಪ್ ಬಹಿರಂಗಪಡಿಸಿದ್ದಾರೆ. 'ಸಾರಾ ಮತ್ತು ಸುಶಾಂತ್ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಕೇದಾರನಾಥ ಸಿನಿಮಾದ ಪ್ರಚಾರ ಸಮಯದಲ್ಲಿ ಇಬ್ಬರು ಪ್ರೀತಿಯಲ್ಲಿ ಇದ್ದಿದ್ದು ನಿಜ. ನಂತರ ಬೇರೆ ಬೇರೆಯಾದರು. ಸುಶಾಂತ್ ಜೊತೆ ಲವ್ ಬ್ರೇಕ್ ಅಪ್ ಮಾಡಿಕೊಳ್ಳಲು ಕಾರಣ ಬಾಲಿವುಡ್ ಮಾಫಿಯಾದ ಒತ್ತಡ ಇರಬಹುದು' ಎಂದು ಹೇಳಿದ್ದಾರೆ. ಮುಂದೆ ಓದಿ..

  ಸುಶಾಂತ್ ಸಹೋದರಿ ಕುಡಿದು ರಾತ್ರಿ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು: ರಿಯಾ ಗಂಭೀರ ಆರೋಪ

  ಸ್ಟಾರ್ ಮಕ್ಕಳು ಹೊರಗಿನಿಂದ ಬಂದವರಿಗೆ ಆಸೆ ತೋರಿಸಿ ಬಿಸಾಡುತ್ತಾರೆ

  ಸ್ಟಾರ್ ಮಕ್ಕಳು ಹೊರಗಿನಿಂದ ಬಂದವರಿಗೆ ಆಸೆ ತೋರಿಸಿ ಬಿಸಾಡುತ್ತಾರೆ

  ಸುಶಾಂತ್ ಮತ್ತು ಸಾರಾ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸುತ್ತಿದ್ದಂತೆ ನಟಿ ಕಂಗನಾ ರಣಾವತ್ ಸ್ಟಾರ್ ಮಕ್ಕಳ ವಿರುದ್ಧ ಕಿಡಿಕಾರಿದ್ದಾರೆ. ಸುಶಾಂತ್ ಸಾವಿನ ತನಿಖೆಯ ಪ್ರತಿಯೊಂದು ಬೆಳವಣಿಗೆಯನ್ನು ಗಮನಿಸುತ್ತಿರುವ ಕಂಗನಾ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸ್ಟಾರ್ ಮಕ್ಕಳು ಹೊರಗಿನಿಂದ ಬಂದವರಿಗೆ ಆಸೆ ತೋರಿಸಿ, ಪ್ರೀತಿಸಿ ನಂತರ ಯಾವುದೊ ಒತ್ತಡಕ್ಕೆ ಬಿಸಾಡಿ ಹೋಗುತ್ತಾರೆ ಎಂದು ಕಿಡಿ ಕಾರಿದ್ದಾರೆ.

  ರಿಯಾ ಚಕ್ರವರ್ತಿ ರಣಹದ್ದು

  ರಿಯಾ ಚಕ್ರವರ್ತಿ ರಣಹದ್ದು

  ಸಾರಾ ಅಲಿ ಖಾನ್ ಪ್ರೀತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ, ರಿಯಾ ಚಕ್ರವರ್ತಿಯನ್ನು ರಣಹದ್ದು ಎಂದು ಕರೆದಿದ್ದಾರೆ. "ಸಾರಾ ಮತ್ತು ಸುಶಾಂತ್ ಸಂಬಂಧ ಎಲ್ಲಾ ಮೀಡಿಯಾದಲ್ಲಿ ಪ್ರಸಾರವಾಗಿದೆ. ಇಬ್ಬರು ಚಿತ್ರೀಕರಣಕ್ಕೆ ಹೋದಾಗ ಒಂದೇ ರೂಮ್ ಶೇರ್ ಮಾಡಿಕೊಂಡಿದ್ದರು ಎನ್ನುವುದು ಸ್ಪಷ್ಟವಾಗಿದೆ. ಯಾಕೆ ಈ ಫ್ಯಾನ್ಸಿ ನೆಪೋಟಿಸಂ ಮಕ್ಕಳು ಹೊರಗಿನಿಂದ ಬಂದವರಿಗೆ ಆಸೆಗಳನ್ನು ತೋರಿಸುತ್ತಾರೆ. ನಂತರ ಅವರನ್ನು ಸಾರ್ವಜನಿಕವಾಗಿ ಬಿಸಾಡುತ್ತಾರೆ. ಆ ನಂತರ ರಣಹದ್ದು ಜೊತೆ ಸುಶಾಂತ್ ಪ್ರೀತಿಯಲ್ಲಿ ಬಿದ್ದಿರುವುದರ ಬಗ್ಗೆ ಯಾವುದೆ ಅಚ್ಚರಿ ಇಲ್ಲ" ಎಂದು ಹೇಳಿದ್ದಾರೆ.

  ಸುಶಾಂತ್ ಸಿಂಗ್ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

  ಸುಶಾಂತ್ ಏನು ಮೂರ್ಖನಲ್ಲ

  ಸುಶಾಂತ್ ಏನು ಮೂರ್ಖನಲ್ಲ

  ಸಾರಾ ಅಲಿ ಖಾನ್ ನಿಂದ ದೂರ ಆದ ಬಳಿಕ ಸುಶಾಂತ್ ಮತ್ತಷ್ಟು ಕುಗ್ಗಿ ಹೋಗಿದ್ದರು. ಸಾರಾ ಜೊತೆಗಿನ ಬ್ರೇಕ್ ಅಪ್ ಸುಶಾಂತ್ ಗೆ ಆಳವಾದ ಪರಿಣಾಮ ಬೀರಿತ್ತು ಎಂದು ಹೇಳಲಾಗುತ್ತಿದೆ. ಮತ್ತೊಂದು ಟ್ವೀಟ್ ಮಾಡಿರುವ ಕಂಗನಾ "ಸಾರಾ, ಸುಶಾಂತ್ ನನ್ನು ಪ್ರೀತಿ ಮಾಡಿರುವುದು ನಿಜ ಅನಿಸುತ್ತೆ. ನಿಜವಾದ ಭಾವನೆ ಇಲ್ಲದೆ ಇರುವವರ ಜೊತೆ ಪ್ರೀತಿಯಲ್ಲಿ ಬೀಳಲು ಸುಶಾಂತ್ ಮೂರ್ಖನಲ್ಲ." ಎಂದಿದ್ದಾರೆ.

  ಹೃತಿಕ್ ನನ್ನನ್ನು ಬಿಟ್ಟುಹೋದ ಕಾರಣ ರಹಸ್ಯವಾಗಿದೆ

  ಹೃತಿಕ್ ನನ್ನನ್ನು ಬಿಟ್ಟುಹೋದ ಕಾರಣ ರಹಸ್ಯವಾಗಿದೆ

  ಸುಶಾಂತ್ ಮತ್ತು ಸಾರಾ ಪ್ರೀತಿ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಹೃತಿಕ್ ಜೊತೆಗಿನ ಪ್ರೀತಿ ವಿಚಾರವನ್ನು ಮತ್ತೆ ಉಲ್ಲೇಖಿಸಿದ್ದಾರೆ. "ಆ ಸಮಯದಲ್ಲಿ ಹೃತಿಕ್ ಜೊತೆ ನನ್ನ ಸಂಬಂಧ ಪ್ರಾಮಾಣಿಕವಾಗಿತ್ತು ಎನ್ನುವುದರಲ್ಲಿ ಯಾವುದೆ ಅನುಮಾನವಿಲ್ಲ. ಆದರೆ ಇದ್ದಕ್ಕಿಂದ್ದಂತೆ ನನ್ನನ್ನು ದ್ವೇಷಿಸಲು ಕಾರಣವೇನು ಎನ್ನುವುದು ರಹಸ್ಯವಾಗಿದೆ." ಎಂದು ಹೇಳಿದ್ದಾರೆ.

  English summary
  Kangana Ranaut reaction about Sara Ali Khan and sushant love story. She compared Sushant and sara love affair to her alleged affair with Hritick.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X