For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಜೆ.ಎನ್.ಯು ಭೇಟಿ ಕುರಿತು ಮೊದಲ ಸಲ ಮಾತನಾಡಿದ ಕಂಗನಾ ಹೇಳಿದ್ದೇನು?

  |
  ಚಪಾಕ್ ಸಿನಿಮಾ ಬಗ್ಗೆ ಕಂಗನಾ ರಣಾವತ್ ಮಾತು | CHHAPAAK | KANGANA RANAUT | DEEPIKA PADUKONE

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆ ಎನ್ ಯು ಕ್ಯಾಂಪಸ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ದೀಪಿಕಾ ಅವರ ಈ ಬೆಂಬಲವನ್ನು ಹಲವರು ಖಂಡಿಸಿದರು. ಅನೇಕರು ಬೆಂಬಲಿಸಿದರು.

  ಜೆ ಎನ್ ಯು ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ ದೀಪಿಕಾ ಪಡುಕೋಣೆಜೆ ಎನ್ ಯು ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ ದೀಪಿಕಾ ಪಡುಕೋಣೆ

  ದೀಪಿಕಾ ಅಭಿನಯದ ಚಪಾಕ್ ಸಿನಿಮಾ ವಿರುದ್ಧ ಅಭಿಯಾನ ಕೂಡ ನಡೆಯಿತು. ಇದರ ಪರಿಣಾಮ ಚಪಾಕ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತು. ಜೆ ಎನ್ ಯು ವಿದ್ಯಾರ್ಥಿಗಳ ವಿಚಾರದಲ್ಲಿ ದೀಪಿಕಾ ಪಡುಕೋಣೆ ನಡೆದುಕೊಂಡ ರೀತಿ ಬಗ್ಗೆ ಇದೇ ಮೊದಲ ಸಲ ನಟಿ ಕಂಗನಾ ಪ್ರತಿಕ್ರಿಯಿಸಿದ್ದಾರೆ. ಏನಂದ್ರು? ಮುಂದೆ ಓದಿ....

  ಪ್ರಜಾಪ್ರಭುತ್ವದ ಹಕ್ಕ ಚಲಾವಣೆ

  ಪ್ರಜಾಪ್ರಭುತ್ವದ ಹಕ್ಕ ಚಲಾವಣೆ

  ''ಆಕೆ ಪ್ರಜಾಪ್ರಭುತ್ವದಲ್ಲಿ ತನಗಿರುವ ಹಕ್ಕನ್ನು ಚಲಾಯಿಸಿದ್ದಾಳೆ ಎಂದು ನನಗೆ ಅನಿಸುತ್ತಿದೆ. ಏನು ಮಾಡುತ್ತಿದ್ದಾಳೆ ಎಂದು ಆಕೆಗೆ ಅರಿವಿದೆ. ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನನಗೆ ಅಭಿಪ್ರಾಯ ಇರಬಾರದು. ಇದನ್ನು ಮಾಡಬೇಕು ಅಥವಾ ಮಾಡಬಾರದು ಎಂದು ಆಕೆಗೆ ನಾನು ಹೇಳುವುದು ಸರಿಯಿಲ್ಲ. ನಾನು ಏನು ಮಾಡಬೇಕೆನ್ನುವುದನ್ನು ನಾನು ಹೇಳುತ್ತೇನೆ'' ಎಂದರು.

  JNU ವಿದ್ಯಾರ್ಥಿಗಳಿಗೆ ದೀಪಿಕಾ ಬೆಂಬಲ: 'ಚಪಾಕ್' ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲ್ ಮಾಡುತ್ತಿರುವ ನೆಟ್ಟಿಗರುJNU ವಿದ್ಯಾರ್ಥಿಗಳಿಗೆ ದೀಪಿಕಾ ಬೆಂಬಲ: 'ಚಪಾಕ್' ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲ್ ಮಾಡುತ್ತಿರುವ ನೆಟ್ಟಿಗರು

  ಸೈನಿಕರು ಸತ್ತಾಗ ಸಂಭ್ರಮಿಸುವವರಿಗೆ ನನ್ನ ಬೆಂಬಲ ಇಲ್ಲ

  ಸೈನಿಕರು ಸತ್ತಾಗ ಸಂಭ್ರಮಿಸುವವರಿಗೆ ನನ್ನ ಬೆಂಬಲ ಇಲ್ಲ

  ''ಈ ದೇಶವನ್ನು ವಿಭಜಿಸುವ ಯಾರನ್ನೂ ನಾನು ಬೆಂಬಲಿಸುವುದಿಲ್ಲ. ಸೈನಿಕರು ಸತ್ತಾಗ ಸಂಭ್ರಮಿಸುವ ಜನರಿಗೆ ಅಧಿಕಾರ ನೀಡಲು ನಾನು ಇಷ್ಟಪಡುವುದಿಲ್ಲ. ನಾನು ಅವರೊಂದಿಗೆ ಇರುವುದಿಲ್ಲ. ನಾನು ಏನು ಹೇಳುವೆ ಎಂಬುದರ ಬಗ್ಗೆ ನಾನು ಮಾತನಾಡುತ್ತೇನೆ. ಆದರೆ ಆಕೆ ಏನು ಮಾಡುತ್ತಾಳೆ ಎನ್ನುವುದರ ಬಗ್ಗೆ ಪ್ರತಿಕ್ರಿಯಿಸಿಲ್ಲ'' ಎಂದರು ಕಂಗನಾ.

  JNU ಎಂಟ್ರಿ ಎಫೆಕ್ಟ್: ದೀಪಿಕಾ ನಟಿಸಿದ ಜಾಹೀರಾತುಗಳ ಮೇಲೆ ಹೊಡೆತJNU ಎಂಟ್ರಿ ಎಫೆಕ್ಟ್: ದೀಪಿಕಾ ನಟಿಸಿದ ಜಾಹೀರಾತುಗಳ ಮೇಲೆ ಹೊಡೆತ

  ಸಿನಿಮಾ ಚೆನ್ನಾಗಿದ್ದರೆ ನೋಡುತ್ತಾರೆ

  ಸಿನಿಮಾ ಚೆನ್ನಾಗಿದ್ದರೆ ನೋಡುತ್ತಾರೆ

  ಇನ್ನು ಚಪಾಕ್ ಸಿನಿಮಾಕ್ಕೆ ಎದುರಾದ ವಿರೋಧದ ಬಗ್ಗೆ ಮಾತನಾಡಿದ ಕಂಗನಾ ''ಸಿನಿಮಾ ಚೆನ್ನಾಗಿದ್ದರೇ ಶತ್ರುಗಳು ಕೂಡ ಹೋಗಿ ಸಿನಿಮಾ ನೋಡ್ತಾರೆ. ಒಳ್ಳೆಯ ಚಿತ್ರವನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ'' ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.

  ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿ ಬಿದ್ದ ದೀಪಿಕಾ: 'ಚಪಾಕ್' ಚಿತ್ರದ ಕಲೆಕ್ಷನ್ ಅಷ್ಟಕಷ್ಟೆ.!ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿ ಬಿದ್ದ ದೀಪಿಕಾ: 'ಚಪಾಕ್' ಚಿತ್ರದ ಕಲೆಕ್ಷನ್ ಅಷ್ಟಕಷ್ಟೆ.!

  ಪಂಗಾ ಸಿನಿಮಾ ಬಿಡುಗಡೆ!

  ಪಂಗಾ ಸಿನಿಮಾ ಬಿಡುಗಡೆ!

  ಕಂಗನಾ ಅಭಿನಯದ 'ಪಂಗಾ' ಸಿನಿಮಾ ಜನವರಿ 24 ರಂದು ತೆರೆಕಾಣುತ್ತಿದೆ. ಐಶ್ವರ್ಯ ರೈ ಅಯ್ಯರ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಮದುವೆ ಬಳಿಕ ವಿವಾಹಿತ ಮಹಿಳೆಯೊಬ್ಬರು ರಾಷ್ಟ್ರಿಯ ತಂಡದಲ್ಲಿ ಕಬಡ್ಡಿ ಆಡುವ ಸ್ಫೂರ್ತಿದಾಯಕ ಕಥೆ ಹೊಂದಿದ್ದು, ಟ್ರೈಲರ್ ಈಗಾಗಲೇ ಮೆಚ್ಚುಗೆ ಗಳಿಸಿಕೊಂಡಿದೆ.

  English summary
  Bollywood actress Kangana Ranaut has reacts about on Deepika Padukone JNU visit. what she told?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X