For Quick Alerts
  ALLOW NOTIFICATIONS  
  For Daily Alerts

  ಆರ್ಯನ್ ಖಾನ್ ಬೆಂಬಲಿಸಿದ ಬಾಲಿವುಡ್ ಸ್ಟಾರ್ಸ್ಸ್ ವಿರುದ್ಧ ಕಂಗನಾ ಕಿಡಿ

  By ಫಿಲ್ಮಿಬೀಟ್ ಡೆಸ್ಕ್
  |

  ಡ್ರಗ್ಸ್ ಪ್ರಕರಣ ಸಂಬಂಧ ಎನ್ ಸಿ ಬಿ ವಶದಲ್ಲಿರುವ ಖಾನ್​ ಪುತ್ರ ಆರ್ಯನ್​ ಖಾನ್ ಅವರನ್ನು 14 ದಿನಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಿನ್ನೆ (ಅಕ್ಟೋಬರ್ 8) ವಿಚಾರಣೆ ನಡೆಸಿದ ನ್ಯಾಯಾಲಯವು ಆರ್ಯನ್ ಖಾನ್ ಅನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳಿಸಿತು. ಆರ್ಯನ್ ಕಾನ್ ಗೆ ಬಾಲಿವುಡ್​ ನ ಅನೇಕ ಸ್ಟಾರ್​ ನಟರು ಬೆಂಬಲ ಸೂಚಿಸುತ್ತಿದ್ದಾರೆ. ಈ ಮೂಲಕ ಈ ಕಷ್ಟದಲ್ಲಿರುವ ಶಾರುಖ್ ಮತ್ತು ಪುತ್ರ ಆರ್ಯನ್ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ ಆರ್ಯನ್ ಖಾನ್‌ಗೆ ಸಲ್ಮಾನ್ ಖಾನ್, ಸುಸೇನ್ ಖಾನ್, ಸುನೀಲ್ ಶೆಟ್ಟಿ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಬೆನ್ನಿಗೆ ನಿಂತಿದ್ದಾರೆ. ಇದೀಗ ಖ್ಯಾತ ನಟ ಹೃತಿಕ್ ರೋಷನ್ ಸಹ ಆರ್ಯನ್ ಪರ ಬ್ಯಾಟ್ ಬೀಸಿದ್ದಾರೆ.

  ಶಾರುಖ್ ಪುತ್ರನನ್ನು ಬೆಂಬಲಿಸಿದ ನಟ ಬಾಲಿವುಡ್ ಸ್ಟಾರ್ಸ್ ವಿರುದ್ಧ ನಟಿ ಕಂಗನಾ ರಣಾವತ್ ಕಿಡಿ ಕಾರಿದ್ದಾರೆ. ನಟ ಹೃತಿಕ್​ ರೋಷನ್ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ನಟಿ ಕಂಗನಾ ರಣಾವತ್​ ತಿರುಗೇಟು ನೀಡಿದ್ದಾರೆ. ಬಾಲಿವುಡ್‌ನ ಎಲ್ಲಾ ಮಾಫಿಯಾ ಪಪ್ಪುಗಳು ಆರ್ಯನ್ ಖಾನ್ ರಕ್ಷಣೆಗೆ ಬಂದಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಹೃತಿಕ್ ರೋಷನ್ ಪೋಸ್ಟ್ ಬಳಿಕ ಕಂಗನಾ ತಿರುಗೇಟು ನೀಡಿ ಪೋಸ್ಟ್ ಮಾಡಿರುವುದು ವೈರಲ್ ಆಗಿದೆ.

  ಅಂದಹಾಗೆ ಹೃತಿಕ್​ ಆರ್ಯನ್ ಖಾನ್ ಹೃದಯಸ್ಪರ್ಶಿ ಪತ್ರದ ಮೂಲಕ ಧೈರ್ಯ ತುಂಬಿ (ಅಕ್ಟೋಬರ್​ 7) ಬಹಿರಂಗ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಅವರು ಆರ್ಯನ್​ ಖಾನ್​ ಅವರನ್ನು ಬೆಂಬಲಿಸಿದ್ದರು. ಪತ್ರದಲ್ಲಿ ಹೃತಿಕ್ "ಮೈ ಡಿಯರ್ ಆರ್ಯನ್....ಬದುಕು ಒಂದು ವಿಚಿತ್ರ ಸವಾರಿ. ಇದು ಅದ್ಭುತವಾಗಿದೆ ಏಕೆಂದರೆ ಇದು ಅನಿಶ್ಚಿತ. ಆದರೆ ದೇವರು ಕರುಣಾಮಯಿ. ದೇವರು ನಿಮಗೆ ದಯೆ ತೋರುತ್ತಾನೆ. ಆ ದೇವರು ಕಠಿಣವಾದ ಆಟವನ್ನು ಆಡಲು ಮಾತ್ರ ಕಠಿಣವಾದ ಚೆಂಡು ನೀಡುತ್ತಾನೆ. ಕೋಪ, ಗೊಂದಲ, ಅಸಹಾಯಕತೆ. ಆಹಾ.. ಈ ಎಲ್ಲಾ ಅಂಶಗಳು ಸುಟ್ಟು ನಿಮ್ಮೊಳಗಿನ ನಾಯಕ ಹೊರಬರುತ್ತಾನೆ. ಆದರೆ ಹುಷಾರು, ಇದೆ ಅಂಶಗಳು ನಿಮ್ಮಲ್ಲಿನ ಒಳ್ಳೆತನ ದಯೆ, ಸಹಾನುಭೂತಿ, ಪ್ರೀತಿಯನ್ನು ಸುಟ್ಟುಹಾಕಬಹುದು" ಎಂದು ದೀರ್ಘವಾಗಿ ಬರೆದಿದ್ದರು.

  ಆರ್ಯನ್ ಬೆಂಬಲಕ್ಕೆ ನಿಂತವರಿಗೆ ಕೌಂಟರ್ ಕೊಟ್ಟಿರುವ ಕಂಗನಾ "ಎಲ್ಲಾ ಮಾಫಿಯಾ ಪಪ್ಪುಗಳು ಆರ್ಯನ್​ ಖಾನ್​ ಅವರ ರಕ್ಷಣೆಗೆ ಬಂದಿದ್ದಾರೆ. ನಾವು ತಪ್ಪುಗಳನ್ನು ಮಾಡುತ್ತೇವೆ, ಆದರೆ ಅದನ್ನು ವೈಭವೀಕರಿಸಬಾರದು. ಈ ಘಟನೆ ಆರ್ಯನ್‌​ಗೆ ಹೊಸ ದೃಷ್ಟಿಕೋನ ನೀಡಲಿದೆ ಮತ್ತು ಇದರ ಪರಿಣಾಮಗಳ ಬಗ್ಗೆ ಅರಿವಾಗುವಂತೆ ಮಾಡುತ್ತದೆ ಎನ್ನುವ ನಂಬಿಕೆ ಇದೆ. ಈ ಘಟನೆ ಆರ್ಯನ್​ ಅವರನ್ನು ಮತ್ತಷ್ಟು ವಿಕಸನಗೊಳಿಸಲಿದೆ. ಯಾರಾದರೂ ದುರ್ಬಲರಾದಾಗ ಅವರ ಬಗ್ಗೆ ಗಾಸಿಪ್ ಮಾಡಬಾರದು. ಆದರೆ ಅವರು ತಪ್ಪೇ ಮಾಡಿಲ್ಲ ಎಂದು ಭಾವಿಸುವುದು ಅಪರಾಧ" ಎಂದು ಕಂಗನಾ ಕುಟುಕಿದ್ದಾರೆ. ಈ ಮೂಲಕ ಹೃತಿಕ್​ ಗೂ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

  ಅಂದಹಾಗೆ ಹೃತಿಕ್ ರೋಷನ್ ಮತ್ತು ಕಂಗನಾ ಇಬ್ಬರು ಬಾಲಿವುಡ್‌ನಲ್ಲಿ ಹಾವು ಮುಂಗಿಸಿ ಹಾಗೆ ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಒಂದು ಕಾಲದಲ್ಲಿ ಕಂಗನಾ ಮತ್ತು ಹೃತಿಕ್ ಡೇಟಿಂಗ್ ನಲ್ಲಿದ್ದರು. ಬಳಿಕ ಕಂಗನಾರಿಂದ ದೂರ ಆದ ಹೃತಿಕ್ ವಿರುದ್ಧ ಕಂಗನಾ ತಿರುಗಿ ಬಿದ್ದಿದ್ದರು. ಇಬ್ಬರ ರಂಪಾಟ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿತ್ತು. ಇಂದಿಗೂ ಕಂಗನಾ, ಹೃತಿಕ್ ವಿರುದ್ಧ ಹರಿಹಾಯುತ್ತಿರುತ್ತಾರೆ. ಆದರೆ ಹೃತಿಕ್ ಯಾವುದೇ ಪ್ರತಿಕ್ರಿಯೆ ನೀಡದೆ ಸೈಲೆಂಟ್ ಆಗಿದ್ದಾರೆ. ಇದೀಗ ಆರ್ಯನ್ ಖಾನ್ ವಿಚಾರದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಕಂಗನಾ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

  English summary
  Bollywood Actress Kangana Ranaut reacts to Hrithik Roshan post on Aryan Khan’s arrest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X