For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್ ಗೆ ನೀಡಿದ 'ಪದ್ಮಶ್ರೀ' ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಒತ್ತಾಯ

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಬಾಲಿವುಡ್ ನಲ್ಲಿ ಬಿರುಗಾಳಿ ಎದ್ದಿದೆ. ಬಾಲಿವುಡ್ ನ ಪ್ರಬಲ ವ್ಯಕ್ತಿಗಳ ವಿರುದ್ಧ ನೆಪೋಟಿಸಂ ಆರೋಪ ಕೇಳಿ ಬರುತ್ತಿದೆ. ನಟಿ ಕಂಗನಾ ರಣಾವತ್ ನೆಪೋಟಿಸಂ ವಿರುದ್ಧ ಸಿಡಿದೆದ್ದಿದ್ದಾರೆ. ಅದರಲ್ಲೂ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸರಿಯಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

  Upendra ಅಭಿನಯದ ಬ್ರಹ್ಮ ಚಿತ್ರ ತಯಾರಾದ ಕ್ಷಣಗಳು | FILMIBEAT KANNADA

  ನಟ ಸುಶಾಂತ್ ಸಿಂಗ್ ಖಿನ್ನತೆಯಿಂದ ಬಳಲಿ ಆತ್ಮಹತ್ಯೆ ಮಾಡಿಕೊಳ್ಳಲು ಕರಣ್ ಜೋಹರ್ ಕೂಡ ಕಾರಣರಾಗಿದ್ದಾರೆ ಎಂದು ಕಂಗನಾ ಆರೋಪಿಸುತ್ತಿದ್ದಾರೆ. ಕರಣ್ ಸ್ಟಾರ್ ಮಕ್ಕಳಿಗೆ ಮಾತ್ರ ಅವಕಾಶ ನೀಡುತ್ತಾರೆ, ಹೊರಗಿನಿಂದ ಬಂದ ಪ್ರತಿಭೆಗಳನ್ನು ತುಳಿಯುತ್ತಿದ್ದಾರೆ ಎಂದು ಕಂಗನಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಹೆಜ್ಜೆ ಮುಂದಕ್ಕೆ ಹೋಗಿರುವ ಕಂಗನಾ, ಕರಣ್ ಜೋಹರ್ ಗೆ ನೀಡಿರುವ ಪದ್ಮಶ್ರೀಯನ್ನು ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಮುಂದೆ ಓದಿ...

  2 ತಿಂಗಳ ಬಳಿಕ ಸಾಮಾಜಿಕ ಜಾಲತಾಣಕ್ಕೆ ಮರಳಿದ ಕರಣ್ ಜೋಹರ್

  ಪದ್ಮಶ್ರೀ ಪಡೆಯಲು ಕರಣ್ ಅರ್ಹರಲ್ಲ

  ಪದ್ಮಶ್ರೀ ಪಡೆಯಲು ಕರಣ್ ಅರ್ಹರಲ್ಲ

  ಕರಣ್ ಜೋಹರ್ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿಒಂದಾಗಿರುವ ಪದ್ಮಶ್ರೀ ಪಡೆಯುವ ಅರ್ಹತೆ ಇಲ್ಲ. ಅದನ್ನು ವಾಪಸ್ ಪಡೆಯಿರಿ ಎಂದು ಕಂಗನಾ ಕಿಡಿಕಾರಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಕರಣ್ ಜೋಹರ್ ನಿರ್ಮಾಣದ ಗುಂಜನಾ ಸಕ್ಸೇನಾ ಸಿನಿಮಾದ ವಿವಾದ.

  ಕಾರ್ಗಿಲ್ ಗೆ ಹಾರಿದ ಮೊದಲ ಮಹಿಳಾ ಪೈಲಟ್ ಗುಂಜನ್ ಅಲ್ಲ

  ಕಾರ್ಗಿಲ್ ಗೆ ಹಾರಿದ ಮೊದಲ ಮಹಿಳಾ ಪೈಲಟ್ ಗುಂಜನ್ ಅಲ್ಲ

  'ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್' ಸಿನಿಮಾ ಗುರಿಯಾಗಿಸಿಕೊಂಡು ಮಾತನಾಡಿರುವ ಕಂಗನಾ ಸಿನಿಮಾ ಭಾರತಿಯ ವಾಯುಪಡೆಯನ್ನು ನಕರಾತ್ಮಕವಾಗಿ ತೋರಿಸಿದ್ದಾರೆ ಎನ್ನುವ ವಿವಾದ ಹೊತ್ತಿಕೊಂಡಿದೆ. ಇದರ ನಡುವೆ ಈಗ ಕಾರ್ಗಿಲ್ ಗೆ ಹಾರಿದ ಮೊದಲ ಮಹಿಳಾ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಶ್ರೀವಿದ್ಯಾ ರಾಜನ್, ಗುಂಜನ್ ಸಕ್ಸೇನಾ ಅಲ್ಲ ಎನ್ನುವ ವಿಚಾರ ಬಹಿರಂಗ ಪಡಿಸಿದ್ದಾರೆ. ಇದರಿಂದ ಸಿನಿಮಾದೆ ಮತ್ತಷ್ಟು ಹಿನ್ನಡೆಯಾಗಿದೆ.

  ಕರಾವಳಿ-ಮಲೆನಾಡಿನ ವಿಶೇಷ ಖಾದ್ಯಕ್ಕೆ ಕಂಗನಾ ಫಿದಾ: ಪತ್ರೊಡೆ ಸವಿದು ನಟಿ ಹೇಳಿದ್ದೇನು?

  ಕಂಗನಾ ರಣಾವತ್ ಹೇಳಿದ್ದೇನು?

  ಕಂಗನಾ ರಣಾವತ್ ಹೇಳಿದ್ದೇನು?

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ರಣಾವತ್ "ಕರಣ್ ಜೋಹರ್ ಪದ್ಮಶೀ ಪ್ರಶಸ್ತಿ ಪಡೆಯಲು ಅರ್ಹರಲ್ಲ. ಕರಣ್ ಜೋಹರ್ ಗೆ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಪಡೆದುಕೊಳ್ಳಬೇಕೆಂದು ಭಾರತ ಸರ್ಕಾರಕ್ಕೆ ವಿನಂತಿಸುತ್ತೇನೆ. ಕರಣ್ ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಅಂತರಾಷ್ಟ್ರಿಯ ವೇದಿಕೆಯಲ್ಲಿ ಚಿತ್ರರಂಗ ಬಿಡುವಂತೆ ಹೇಳಿದ್ದಾರೆ. ಸುಶಾಂತ್ ಸಿಂಗ್ ವೃತ್ತಿ ಜೀವನ ಹಾಳು ಮಾಡಲು ಸಂಚು ಮಾಡಿದರು, ಉರಿ ಯುದ್ಧದ ಸಮಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದರು. ಈಗ ನಮ್ಮ ಸೈನ್ಯದ ವಿರುದ್ಧ ಸಿನಿಮಾ ಮಾಡಿದ್ದಾರೆ" ಎಂದು ಕಿಡಿಕಾರಿದ್ದಾರೆ.

  ಜಾಹ್ನವಿ ಕಪೂರ್ ಅಭಿನಯದ ಸಿನಿಮಾ

  ಜಾಹ್ನವಿ ಕಪೂರ್ ಅಭಿನಯದ ಸಿನಿಮಾ

  ಶರಣ್ ಶರ್ಮಾ ನಿರ್ದೇಶನದ ಗುಂಜನ್ ಸಕ್ಸೇನಾ ಸಿನಿಮಾದಲ್ಲಿ ಜಾಹ್ನವಿ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಂಕಜ್ ತ್ರಿಪಾಠಿ, ವಿನೀತ್ ಕುಮಾರ್ ಸಿಂಗ್, ಅಂಗದ್ ಬೇಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ರಿಲೀಸ್ ಆದ ಬಳಿಕ ಸಿನಿಮಾದ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

  English summary
  Kangana Ranaut request Government to take back Karan Johar Padmashri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X