For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಅನ್ನು 'ಫ್ಲಾಪ್ ಹೀರೋ' ಅಂತ ಕರಣ್ ಹೇಗೆ ಬಿಂಬಿಸಿದರು ಎಂದು ಬಹಿರಂಗಪಡಿಸಿದ ನಟಿ ಕಂಗನಾ

  |

  ಬಾಲಿವುಡ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ನೆಪೋಟಿಸಂ ಚರ್ಚೆ ತಾರಕ್ಕೇರಿದೆ. ಈ ವಿಚಾರವಾಗಿ ನಟಿ ಕಂಗನಾ ರಣಾವತ್ ಬಾಲಿವುಡ್ ನ ಪ್ರಮುಖ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸುಶಾಂತ್ ಸಿಂಗ್ ಅವರದ್ದು ಯೋಜಿತ ಕೊಲೆ ಎಂದು ಹೇಳುತ್ತಲೆ ಬಂದಿರುವ ಕಂಗನಾ ಇತ್ತೀಚಿಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮತ್ತಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.

  KGF ಎಡಿಟರ್ ನಮ್ಮ ಸಿನಿಮಾ ಎಡಿಟ್ ಮಾಡಿದ್ರು | Raghu Samarth | Filmibeat Kannada

  ಬಾಲಿವುಡ್ ನ ದೊಡ್ಡ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ ಮತ್ತು ಕರಣ್ ಜೋಹರ್ ವಿರುದ್ಧ ಕಂಗನಾ ಸಿಡಿದೆದ್ದಿದ್ದಾರೆ. ಅಮಾಯಕ ಸುಶಾಂತ್ ಅನ್ನು 'ಫ್ಲಾಪ್ ಹೀರೋ' ಎಂದು ಕರಣ್ ಹೇಗೆ ಬಿಂಬಿಸಿದ್ದಾರೆ ಎನ್ನುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಸುಶಾಂತ್ ಸಿಂಗ್ ಅವರ ವೃತ್ತಿ ಜೀವನವನ್ನು ನಾಶಮಾಡಲು ಕರಣ್ ಅವರ ಬಾಲ್ಯದ ಗೆಳೆಯ ಆದಿತ್ಯ ಚೋಪ್ರಾ ಜೊತೆ ಸೇರಿ ಕಾರ್ಯಸೂಚಿಯನ್ನು ಪೂರೈಸಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂದೆ ಓದಿ..

  'ಪೋಕಿರಿ' ಸಿನಿಮಾಕ್ಕೆ ಮೊದಲು ಆಯ್ಕೆಯಾಗಿದ್ದ ನಟಿಯೇ ಬೇರೆ!'ಪೋಕಿರಿ' ಸಿನಿಮಾಕ್ಕೆ ಮೊದಲು ಆಯ್ಕೆಯಾಗಿದ್ದ ನಟಿಯೇ ಬೇರೆ!

  ಸುಶಾಂತ್ ಹೊಸ ಯೋಜನೆಗೆ ಯಶ್ ರಾಜ್ ಸಂಸ್ಥೆ ಒಪ್ಪಗೆ ಬೇಕಿತ್ತು

  ಸುಶಾಂತ್ ಹೊಸ ಯೋಜನೆಗೆ ಯಶ್ ರಾಜ್ ಸಂಸ್ಥೆ ಒಪ್ಪಗೆ ಬೇಕಿತ್ತು

  ಆದಿತ್ಯ ಚೋಪ್ರಾ, ಸುಶಾಂತ್ ಸಿಂಗ್ ಜೊತೆ ಯಶ್ ರಾಜ್ ಸಂಸ್ಥೆಯೊಂದಿಗೆ ಕಾಂಟ್ರಾಕ್ಟ್ ಗೆ ಸಹಿ ಮಾಡಿಸಿಕೊಂಡಿದ್ದರು. ಇದರಿಂದ ಸುಶಾಂತ್ ಗೆ ಬೇರೆ ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆದಿತ್ಯ ಚೋಪ್ರಾ ಒಪ್ಪಿಗೆ ಇಲ್ಲದೆ ಯಾವುದೇ ಯೋಜನೆಯನ್ನು ತೆಗೆದುಕೊಳ್ಳುವ ಹಾಗಿರಲಿಲ್ಲ. ಇದರಿಂದ ಸುಶಾಂತ್ ಗೆ ಉತ್ತಮ ಅವಕಾಶಗಳು ಕೈತಪ್ಪಿಹೋದವು. ಸಂಜಯ್ ಲೀಲಾ ಬನ್ಸಾಲಿ ಅವರ ರಾಮ್ ಲೀಲಾ, ಗೋಲಿಯಾನ್ ಕಿ ರಾಸ್ಲೀಲಾ, ಬಾಜಿರಾವ್ ಮಸ್ತಾನಿಯಂತಹ ಅದ್ಭುತ ಸಿನಿಮಾಗಳು ರಣವೀರ್ ಸಿಂಗ್ ಪಾಲಾದವು. ಎಂದು ಕಂಗನಾ ಹೇಳಿದ್ದಾರೆ.

  ಸುಶಾಂತ್ ಗೆ ಬಕೆಟ್ ಹಿಡಿಯಲು ಬರುತ್ತಿರಲಿಲ್ಲ

  ಸುಶಾಂತ್ ಗೆ ಬಕೆಟ್ ಹಿಡಿಯಲು ಬರುತ್ತಿರಲಿಲ್ಲ

  ಯಾಕೆ ಹೀಗಾಯಿತು ಎಂದರೆ ಸುಶಾಂತ್ ಸಿಂಗ್ ಗೆ ಬಕೆಟ್ ಹಿಡಿಯಲು ಬರುತ್ತಿರಲಿಲ್ಲ. ಇದಕ್ಕಾಗಿಯೆ ಅವರು ವೃತ್ತಿ ಜೀವನವನ್ನು ಹಾಳುಮಾಡಿಕೊಂಡರು. ಶೇಖರ್ ಕಪೂರ್ 'ಪಾನಿ' ಸಿನಿಮಾದಿಂದ, ಯಶ್ ರಾಜ್ ಫಿಲ್ಮ್ ನಿಂದ ಸುಶಾಂತ್ ಹೊರಬಂದರು. ಪ್ರೊಡಕ್ಷನ್ ಹೌಸ್ ಜೊತೆಗಿನ ಎಲ್ಲಾ ಸಂಬಂಧಗಳನ್ನು ಸುಶಾಂತ್ ಮುರಿದುಕೊಂಡರು. ಆ ನಂತರ ಸುಸಾಂತ್ ಜೊತೆ ಯಾವತ್ತು ಕೆಲಸ ಮಾಡುವುದಿಲ್ಲ ಎಂದು ಆದಿತ್ಯ ಚೋಪ್ರಾ ಹೇಳಿದರು. ಅಂತ ಕಂಗನಾ ಹೇಳಿದ್ದಾರೆ.

  'ಬಿ' ಗ್ರೇಡ್ ನಟಿ ಎಂದ ಕಂಗನಾಗೆ ತಾಪ್ಸಿ ತಿರುಗೇಟು: ತಾಪ್ಸಿ ಬೆಂಬಲಕ್ಕೆ ನಿಂತ ಬಾಲಿವುಡ್ ಸ್ಟಾರ್ಸ್'ಬಿ' ಗ್ರೇಡ್ ನಟಿ ಎಂದ ಕಂಗನಾಗೆ ತಾಪ್ಸಿ ತಿರುಗೇಟು: ತಾಪ್ಸಿ ಬೆಂಬಲಕ್ಕೆ ನಿಂತ ಬಾಲಿವುಡ್ ಸ್ಟಾರ್ಸ್

  ಸುಶಾಂತ್ ವೃತ್ತಿ ಜೀವನ ಹಾಳು ಮಾಡಿದರು ಕರಣ್

  ಸುಶಾಂತ್ ವೃತ್ತಿ ಜೀವನ ಹಾಳು ಮಾಡಿದರು ಕರಣ್

  ಚಿತ್ರರಂಗದಲ್ಲಿ ತುಂಬಾ ಕಷ್ಟಕಟ್ಟ ಬಳಿಕ ಎಂ.ಎಸ್ ದೋನಿ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು. ಆನಂತರ ಆದಿತ್ಯ ಚೋಪ್ರಾ ಬಾಲ್ಯದ ಗೆಳೆಯ ಕರಣ್ ಜೋಹರ್, ಸುಶಾಂತ್ ಜೊತೆ ಡ್ರೈವ್ ಸಿನಿಮಾ ಮಾಡಿ ಸುಶಾಂತ್ ವೃತ್ತಿ ಜೀವನವನ್ನು ಹಾಳುಮಾಡಿದರು.

  ಫ್ಲಾಪ್ ಹೀರೋ ಎಂದು ಬಿಂಬಿಸಿದರು

  ಫ್ಲಾಪ್ ಹೀರೋ ಎಂದು ಬಿಂಬಿಸಿದರು

  ಸುಶಾಂತ್ ಜೊತೆ ಡ್ರೈವ್ ಸಿನಿಮಾ ಮಾಡಿದರು ಆದರೆ ಆ ಸಿನಿಮಾವನ್ನು ರಿಲೀಸ್ ಮಾಡಲೇ ಇಲ್ಲ. ಈ ಫ್ಲಾಪ್ ಸ್ಟಾರ್ ನೊಂದಿಗೆ ಈ ಚಿತ್ರವನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಅವರು ರಚಿಸಿದ ಸಂಪೂರ್ಣ ವ್ಯವಹಾರದ ದಂಧೆ. ಅವರ ಸಿನಿಮಾಗಳನ್ನು ಹಿಟ್ ಎನ್ನುವುದು. ಚಿಚೋರೆ, ಎಂ.ಎಸ್ ದೋನಿ ಅಂತಹ ಉತ್ತಮ ಸಿನಿಮಾಗಳನ್ನು ಸೆಮಿ ಹಿಟ್ ಎನ್ನುವುದು.

  ಆದಿತ್ಯ ಮತ್ತು ಕರಣ್ ಪ್ಲಾನ್ ಮಾಡಿಯೇ ಕೆಲಸ ಮಾಡುತ್ತಾರೆ

  ಆದಿತ್ಯ ಮತ್ತು ಕರಣ್ ಪ್ಲಾನ್ ಮಾಡಿಯೇ ಕೆಲಸ ಮಾಡುತ್ತಾರೆ

  ಡ್ರೈವ್ ಸಿನಿಮಾವನ್ನು ರಿಲೀಸ್ ಮಾಡಿಲ್ಲ. ಸುಶಾಂತ್ ಫ್ಲಾಪ್ ನಟ ಹಾಗಾಗಿ ವಿತರಕರು ಯಾರು ಮುಂದೆ ಬರುತ್ತಿಲ್ಲ ಎಂದು ಸುದ್ದಿಯಾಗುತ್ತಿದೆ ಅಷ್ಟೆ. ಯಶ್ ರಾಜ್ ಫಿಲ್ಮ್ ಮತ್ತು ಕರಣ್ ಜೋಹರ್ ಧರ್ಮ ಫಿಲ್ಮ್ ಒಟ್ಟಿಗೆ ಕಾರ್ಯನಿರ್ವಹಿಸುತ್ತಿವೆ. ಯಾರನ್ನು ಉತ್ತೇಜಿಸಬೇಕು, ಯಾರನ್ನು ಕೆಳಗಿಳಿಸಬೇಕು, ಯಾರನ್ನು ನಾಶಮಾಡಬೇಕು ಎಂದು ಪ್ಲಾನ್ ಮಾಡಿ ಮಾಡುತ್ತಾರೆ. ಎಂದು ಕಂಗನಾ ಆರೋಪಿಸಿದ್ದಾರೆ.

  English summary
  Bollywood actress Kangana Ranaut revealed how Karan Johar calls Sushant Singh a flop Hero.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X