For Quick Alerts
  ALLOW NOTIFICATIONS  
  For Daily Alerts

  ಕಂಗನಾ ಮನೆಯಲ್ಲಿ ಮದುವೆ ಸಂಭ್ರಮ: ಅಕ್ಕ-ತಂಗಿಯರು ಸಖತ್ ಮಿಂಚಿಂಗ್!

  |

  ನಟಿ ಕಂಗನಾ ರಣೌತ್ ಮನೆಯಲ್ಲಿ ಮದುವೆ ಸಂಭ್ರಮ ಕಳೆ ಕಟ್ಟಿದೆ. ಕಂಗನಾ ರಣೌತ್ ಸಹೋದರ ಅಕ್ಷತ್ ಮದುವೆ ಸಂಭ್ರಮ ಆರಂಭವಾಗಿದೆ.

  ಮದುವೆ ಶಾಸ್ತ್ರಗಳು ಈಗಾಗಲೇ ಆರಂಭವಾಗಿದ್ದು, ತಮ್ಮನಿಗೆ ಅರಿಶಿಣ ಹಚ್ಚುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ ನಟಿ ಕಂಗನಾ.

  ಅಕ್ಷತ್ ವಿವಾಹ ನವೆಂಬರ್‌ ನಲ್ಲಿದೆ. ಆದರೆ ಹಿಮಾಚಲ ಪ್ರದೇಶದ ಪದ್ಧತಿಯಂತೆ ಮೊದಲ ಲಗ್ನ ಪತ್ರಿಕೆಯನ್ನು ಮನೆಯ ಹಿರಿಯ ತಲೆಮಾರಿನವರಿಗೆ ನೀಡಲಾಗುತ್ತದಂತೆ, ಮೊದಲ ಲಗ್ನ ಪತ್ರಿಕೆ ನೀಡುವ ಮೊದಲು ವಧುವಿಗೆ ಅರಿಶಿಣ ಹಚ್ಚುವ ಶಾಸ್ತ್ರ ಮಾಡಲಾಗುತ್ತದೆ.

  ಅರಿಶಿಣ ಶಾಸ್ತ್ರದಲ್ಲಿ ಅಕ್ಷತ್‌ನ ಇಬ್ಬರು ಸಹೋದರಿಯರಾದ ಕಂಗನಾ ರಣೌತ್ ಹಾಗೂ ರಂಗೋಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಸೀರೆ ಧರಿಸಿ, ಆಭರಣಗಳನ್ನು ಧರಿಸಿ ತಮ್ಮನ ಅರಿಶಿನ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದಾರೆ. ಕಂಗನಾ ಹಾಗೂ ರಂಗೋಲಿ ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮದ ಚಿತ್ರಗಳು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

  Kangana Ranauts Brother Aksht Getting Married
  ಚಿರು ನನಗೆ 10 ಸಾವಿರ ಆಡಿಯೋ ಮೆಸೇಜ್ ಕಳಿಸಿದ್ದಾರೆ | Chiranjeevi Sarja | Pratham | Filmibeat Kannada

  ಈ ಹಿಂದೆ ರಕ್ಷಾ ಬಂಧನ ಸಮಯದಲ್ಲಿ ತಮ್ಮನ ಬಗ್ಗೆ ದೀರ್ಘವಾದ ಭಾವುಕ ಪೋಸ್ಟ್ ಹಾಕಿದ್ದ ಕಂಗನಾ, 'ಸಹೋದರ ನಿನ್ನ ಕೈಗೆ ನಿಲುಕಲಾಗದವರೊಂದಿಗೆ ನಾನು ವೈರತ್ವ ಬೆಳೆಸಿಕೊಂಡಿದ್ದೇನೆ. ನನಗೆ ಯಾರಾದರೂ ಬೈದಾಗ, ನನ್ನ ವ್ಯಕ್ತಿತ್ವದ ಬಗ್ಗೆ ಮಾತನಾಡಿದಾಗ ನಿನಗೆ ಬಹಳ ಸಿಟ್ಟು ಬರುತ್ತದೆ, ಆದರೆ ನಿನ್ನ ಅಸಹಾಯಕತೆಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ' ಎಂದು ಬರೆದಿದ್ದರು.

  English summary
  Actress Kangana Ranaut's brother Aksht getting married in November. Rituals started in Kangana's house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X