»   » ಟಾಪ್ ನಟಿ ಕಂಗನಾ ಒಂದು ಕಾಲದಲ್ಲಿ ಮನೆಯವರಿಗೆ ಬೇಡವಾಗಿದ್ದ ಮಗು

ಟಾಪ್ ನಟಿ ಕಂಗನಾ ಒಂದು ಕಾಲದಲ್ಲಿ ಮನೆಯವರಿಗೆ ಬೇಡವಾಗಿದ್ದ ಮಗು

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಲ್ಲಿ ಸಖತ್ ಬೋಲ್ಡ್ ನೆಸ್ ಇರುವ ಸ್ಟಾರ್ ನಟಿ, 'ಫ್ಯಾಶನ್' ಚಿತ್ರದಲ್ಲಿ ಅದ್ಭುತ ನಟನೆ ನೀಡಿರುವ ನಟಿ, ಸದ್ಯಕ್ಕೆ ಇಡೀ ಬಿಟೌನ್ ಕ್ಷೇತ್ರದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಗುಂಗುರು ಕೂದಲ ಚೆಲುವೆ ಕಂಗನಾ ರಾಣಾವತ್ ಅವರು ಒಂದು ಕಾಲದಲ್ಲಿ ಯಾರಿಗೂ ಬೇಡವಾಗಿದ್ದರಂತೆ.

ನಿನ್ನೆ (ಮಾರ್ಚ್ 8) ನಡೆದ ಮಹಿಳಾ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನಟಿ ಕಂಗನಾ ರಾಣಾವತ್ ಅವರು ತಮ್ಮ ಬಾಲ್ಯದ ಬಗ್ಗೆ ಹಾಗೂ ಅವರ ಪ್ರೀತಿಯ ಸಹೋದರಿ ಮೇಲೆ ಆಸಿಡ್ ದಾಳಿ ನಡೆದ ಕರುಣಾ ಜನಕ ಕಥೆಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಪುರುಷರ ಸಂತಸಕ್ಕೋಸ್ಕರ ಮಹಿಳೆಯರ ತ್ಯಾಗವನ್ನು ಬಣ್ಣಿಸುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.[ಜೋಗಯ್ಯನ ಕೈಹಿಡಿಯಲಿದ್ದಾರೆ ಕಂಗನಾ ರನಾವತ್]

Kangana Ranaut's surprising revelation about her life and sister

ತಮ್ಮ ಅಕ್ಕ ರಂಗೋಲಿ ಅವರಿಗೂ ಮುಂಚಿತವಾಗಿ ನನ್ನ ಪೋಷಕರಿಗೆ ಒಂದು ಗಂಡು ಮಗುವಾಗಿತ್ತು. ಆದರೆ ಅವನು ಜನಿಸಿದ 10 ದಿನಗಳಲ್ಲಿ ಮೃತಪಟ್ಟ. ಅವನನ್ನು ನಮ್ಮ ಮನೆಯ ಹೀರೋ ಎಂದೇ ಅಂದುಕೊಂಡಿದ್ದರು'.

Kangana Ranaut's surprising revelation about her life and sister

'ಅವನನ್ನು ಕಳೆದುಕೊಂಡ ದುಃಖದಿಂದ ನನ್ನ ಪೋಷಕರಿಗೆ ಹೊರ ಬರಲು ಸಾಧ್ಯವಾಗಲೇ ಇಲ್ಲ. ನಂತರ ಅಕ್ಕ ರಂಗೋಲಿ ಹುಟ್ಟಿದಳು, ಆವಾಗ ಮತ್ತೆ ಮನೆಯಲ್ಲಿ ಸಂಭ್ರಮ ಹುಟ್ಟಿತು'. ರಂಗೋಲಿ ಜನಿಸಿದ ನಂತರ ಮತ್ತೆ ಹೆಣ್ಣು ಮಗು ಹುಟ್ಟಿದ್ದಕ್ಕೆ ನನ್ನ ಪೋಷಕರಿಗೆ ಮತ್ತೆ ಬೇಸರ ಆಯಿತು. ಕಡೆಗೂ ಅವರು ಮತ್ತೆ ಹೆಣ್ಣು ಮಗು ಹುಟ್ಟಿದ ಬೇಸರದಿಂದ ಹೊರಬರಲೇ ಇಲ್ಲ' ಎಂದು ಕಂಗನಾ ಅವರು ತಮ್ಮ ಬಾಲ್ಯವನ್ನು ಹಂಚಿಕೊಂಡಿದ್ದಾರೆ.

Kangana Ranaut's surprising revelation about her life and sister

'ನಾನು ಜನಿಸಿದಾಗ, ನನ್ನ ಹೆತ್ತವರಿಗೆ, ಅದರಲ್ಲೂ ನನ್ನ ತಾಯಿಗೆ ಮತ್ತೊಂದು ಹೆಣ್ಣು ಮಗು ಜನಿಸಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಈ ಕಥೆಗಳೆಲ್ಲಾ ವಿವರವಾಗಿ ನನಗೆ ತಿಳಿದಿದೆ. ಏಕೆಂದರೆ ಪ್ರತೀ ಸಾರಿ ಅತಿಥಿಗಳು ಮನೆಗೆ ಬಂದಾಗ, ಅಥವಾ ಮನೆಯ ಕಾರ್ಯಕ್ರಮಗಳಲ್ಲಿ ನಾನು ಬೇರೆಯವರಿಂದ ಹೇಗೆ ತಿರಸ್ಕೃತಗೊಳ್ಳುತ್ತಿದ್ದೆ ಎಂಬ ಕಥೆಯನ್ನು ನನ್ನ ಮುಂದೆಯೇ ಪದೇ ಪದೇ ಹೇಳುತ್ತಿದ್ದರು' ಎಂದು 'ಪವರ್ ಹೌಸ್' ನಟಿ ತಮ್ಮ ಬಾಲ್ಯದ ದುಃಖದ ದಿನಗಳನ್ನು ಹಂಚಿಕೊಂಡಿದ್ದಾರೆ.

Kangana Ranaut's surprising revelation about her life and sister

ಇನ್ನು ಹುಡುಗಿಯರಿಗಿಂತಲೂ ಹುಡುಗರು ಮೇಲು ಎಂಬುದನ್ನು ತಾನೆಂದು ಒಪ್ಪಿಕೊಳ್ಳಲೇ ಇಲ್ಲ ಎಂದು 'ಕಟ್ಟಿ ಬಟ್ಟಿ' ಖ್ಯಾತಿಯ ನಟಿ ಕಂಗನಾ ರಾಣಾವತ್ ಅವರು ಹೇಳಿದ್ದಾರೆ.

English summary
Kangana Ranaut is one of the boldest actresses in the industry who doesn't think twice about opening up about her tragedies in life for she only wants to encourage others through her stories and give inspiration to all.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada