For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಆರೋಪ ಸಾಬೀತಾದ್ರೆ ಶಾಶ್ವತವಾಗಿ ಮುಂಬೈ ಬಿಡುತ್ತೇನೆ: ನಟಿ ಕಂಗನಾ ಸವಾಲ್

  |

  'ಬಾಲಿವುಡ್‌ನಲ್ಲಿ ಶೇ 99ರಷ್ಟು ಮಂದಿ ಡ್ರಗ್ಸ್ ಸೇವಿಸುತ್ತಾರೆ. ನನಗೆ ಭದ್ರತೆ ಕೊಟ್ಟರೆ ಎಲ್ಲರ ಹೆಸರು ಹೇಳುತ್ತೇನೆ' ಎಂದಿದ್ದ ನಟಿ ಕಂಗನಾ ರಣಾವತ್ ಗೆ ಈಗ ಡ್ರಗ್ಸ್ ಪ್ರಕರಣ ತಿರುಗುಬಾಣವಾಗಿದೆ. ಡ್ರಗ್ಸ್ ನಂಟು ಆರೋಪ ಸಂಬಂಧ ನಟಿ ಕಂಗನಾ ವಿರುದ್ಧ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ.

  Kangana Ranaut vs Shiv Sena,ಮಹಾರಾಷ್ಟ್ರ ಸರ್ಕಾರಕ್ಕೆ ಕಂಗನಾ ಅವಾಜ್ | Oneindia Kannada

  ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶ್ ಮುಖ್, ಸಂದರ್ಶನದಲ್ಲಿ ಕಂಗನಾ ಮಾಜಿ ಪ್ರೇಯಸಿ ಅಧ್ಯಯನ್ ಸುಮನ್ ಹೇಳಿರುವ ಮಾತನ್ನು ಉಲ್ಲೇಖಿಸಿ ನಟಿ ಕಂಗನಾ ರಣಾವತ್ ವಿರುದ್ಧ ಡ್ರಗ್ಸ್ ಸೇವನೆ ಆರೋಪ ಹೊರಿಸಿದ್ದಾರೆ.

  ಕಂಗನಾಗೂ ಅಂಟಿದ ಡ್ರಗ್ಸ್ ನಂಟು: ಹಳೆ ವಿಡಿಯೋ ವೈರಲ್ಕಂಗನಾಗೂ ಅಂಟಿದ ಡ್ರಗ್ಸ್ ನಂಟು: ಹಳೆ ವಿಡಿಯೋ ವೈರಲ್

  ಅನಿಲ್ ದೇಶ್ ಮುಖ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರು ಕಂಗನಾ, "ನನ್ನನ್ನು ಡ್ರಗ್ಸ್ ಪರೀಕ್ಷೆಗೆ ಒಳಪಡಿಸಿ. ನನ್ನ ಫೋನ್ ರೆಕಾರ್ಡ್ ಅನ್ನು ಪರೀಕ್ಷಿಸಿ, ನಾನು ಯಾವುದಾದರೂ ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಂಪರ್ಕದಲ್ಲಿದ್ದರೆ ನಾನು ತಪ್ಪನ್ನು ಒಪ್ಪಿಕೊಳ್ಳುತ್ತೇನೆ. ಅಲ್ಲದೆ ಶಾಶ್ವತವಾಗಿ ಮುಂಬೈ ತೊರೆಯುತ್ತೇನೆ" ಎಂದು ಸವಾಲ್ ಹಾಕಿದ್ದಾರೆ.

  ಕಂಗನಾ ರಣಾವತ್ ಮಾಜಿ ಗೆಳೆಯ ಅಧ್ಯಾಯನ್ ನಾಲ್ಕು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ 'ಕಂಗನಾ ಡ್ರಗ್ಸ್ ತೆಗೆದುಕೊಳ್ಳುತ್ತಾರೆ, ನನಗೂ ಡ್ರಗ್ಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು' ಎಂದು ಹೇಳಿದ್ದರು. ಆ ಸಂದರ್ಶನದ ವಿಡಿಯೋ ಈಗ ವೈರಲ್ ಆಗಿದ್ದು ಕಂಗನಾಗೆ ಕುತ್ತು ತಂದಿದೆ.

  ಶಿವಸೇನೆ ಜೊತೆ ಕಿತ್ತಾಟದ ನಡುವೆಯೂ ಕಂಗನಾ ಇಂದು ಮುಂಬೈಗೆ ಆಗಮಿಸುತ್ತಿದ್ದಾರೆ. ಹಿಮಾಲಯ ಪ್ರದೇಶದಿಂದ ಆಗಮಿಸುತ್ತಿರುವ ಕಂಗನಾಗೆ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಮುಂಬೈಗೆ ಎಂಟ್ರಿ ಆಗುತ್ತಿದಂತೆ ಅವರನ್ನು ಕ್ವಾರಂಟೈನ್ ಮಾಡಲಾಗುತ್ತೆ.

  English summary
  Bollywood Actress Kangana Ranaut challenge to Mumbai police to do her drug test. She Says, If links with drugs peddlers found, leave Mumbai forever.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X