For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಜೊತೆ ಸಿನಿಮಾ ಮಾಡದಿರಲು ಕಾರಣ ಹೃತಿಕ್ ರೋಷನ್: ಕಂಗನಾ ರಣಾವತ್

  |

  ನಟಿ ಕಂಗನಾ ರಣಾವತ್ ಮತ್ತು ಹೃತಿಕ್ ರೋಷನ್ ನಡುವಿನ ಕಲಹ ಸದ್ಯ ತಣ್ಣಗಾಗಿದೆ. ಒಂದು ಸಮಯದಲ್ಲಿ ತಾರಕಕ್ಕೇರಿದ್ದ ಇಬ್ಬರ ಕಿತ್ತಾಟ ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸಿತ್ತು. ಹೃತಿಕ್ ವಿರುದ್ಧ ಕಂಗನಾ ಮಾಡುತ್ತಿರುವ ಆರೋಪ ಕೇಳಿ ಎಲ್ಲರೂ ಮೌನವಾಗಿದ್ದರು. ಇಬ್ಬರ ಸಂಬಂಧ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಹೃತಿಕ್ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಕಂಗನಾ ಪಟ್ಟು ಹಿಡಿದಿದ್ದರು.

  Madagaja ಚತ್ರೀಕರಣ ನಡೆದಿದ್ದು ಹೇಗೆ , ನಿರ್ದೇಶಕ Mahesh ಹೇಳ್ತಾರೆ ಕೇಳಿ | Filmibeat Kannada

  ಇದೆಲ್ಲ ಎರಡು ಮೂರು ವರ್ಷದ ಹಿಂದಿನ ಕಲಹ. ಆದರೀಗ ಕಂಗನಾ ಮತ್ತೆ ಹೃತಿಕ್ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಸುಶಾಂತ್ ಸಿಂಗ್ ಜೊತೆ ಅಭಿನಯಿಸದೆ ಇರಲು ಕಾರಣ ಹೃತಿಕ್ ರೋಷನ್ ಎಂದು ಹೇಳಿದ್ದಾರೆ. ಬಾಲಿವುಡ್ ನಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ನಟಿ ಕಂಗನಾ ರಣಾವತ್ ನೆಪೋಟಿಸಂ ವಿರುದ್ಧ ಸಿಡಿದೆದ್ದಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮತ್ತು ನೆಪೋಟಿಸಂ ಬಗ್ಗೆ ಕಂಗನಾ ಮಾತನಾಡುತ್ತಲೆ ಇದ್ದಾರೆ. ಇದೀಗ ಮತ್ತೆ ಹೃತಿಕ್ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಮುಂದೆ ಓದಿ...

  ಸಿಂಗ್ ಪ್ರೇಯಸಿ ವಿರುದ್ಧ ತಂದೆಯಿಂದಲೇ ದೂರು: ಪ್ರಕರಣಕ್ಕೆ ಟ್ವಿಸ್ಟ್ಸಿಂಗ್ ಪ್ರೇಯಸಿ ವಿರುದ್ಧ ತಂದೆಯಿಂದಲೇ ದೂರು: ಪ್ರಕರಣಕ್ಕೆ ಟ್ವಿಸ್ಟ್

  ನಿರ್ದೇಶಕ ಹೋಮಿ ಅಡ್ಜಾನಿಯಾ ಜೊತೆ ಮಾತುಕತೆಯಾಗಿತ್ತು

  ನಿರ್ದೇಶಕ ಹೋಮಿ ಅಡ್ಜಾನಿಯಾ ಜೊತೆ ಮಾತುಕತೆಯಾಗಿತ್ತು

  ಸುಶಾಂತ್ ಸಿಂಗ್ ಜೊತೆ ಅಭಿನಯಿಸುವ ಅವಕಾಶ ಬಂದಿರುವ ಬಗ್ಗೆ ಬಹಿರಪಂಗಪಡಿಸಿದ್ದಾರೆ. ಇತ್ತೀಚಿಗೆ ನೀಡಿದ ಸಂದರ್ಶವೊಂದರಲ್ಲಿ ಕಂಗನಾ "ನಿರ್ದೇಶಕ ಹೋಮಿ ಅಡ್ಜಾನಿಯಾ ಚಿತ್ರವೊಂದರಲ್ಲಿ ಕೆಲಸ ಮಾಡಲು ಸಂಪರ್ಕ ಮಾಡಿದ್ದರು. ನಾನು ಅವರನ್ನು ಭೇಟಿಯಾಗಿದ್ದೆ, ಅಲ್ಲದೆ ಸಿನಿಮಾ ನಿರೂಪಣೆ ಮಾಡಿದ್ದರು. ಆದರೆ ಆ ಸಿನಿಮಾ ಸಾಧ್ಯವಾಗಲಿಲ್ಲ. ಏಕೆಂದರೆ ಹೃತಿಕ್ ರೋಷನ್ ಅವರಿಂದ ಲೀಗಲ್ ನೋಟೀಸ್ ಬಂತು. ಹಾಗಾಗಿ ಈ ಸಿನಿಮಾ ಕಡೆ ಗಮನ ಹರಿಸಲು ಸಾಧ್ಯವಾಗಲಿಲ್ಲ" ಎಂದಿದ್ದಾರೆ.

  ಸುಶಾಂತ್ ಗೆಳತಿ ರಿಯಾ ಜತೆ ತನಗಿರುವ ಸಂಬಂಧವೇನು?: ಮಹೇಶ್ ಭಟ್ ನೀಡಿದ ವಿವರಣೆಸುಶಾಂತ್ ಗೆಳತಿ ರಿಯಾ ಜತೆ ತನಗಿರುವ ಸಂಬಂಧವೇನು?: ಮಹೇಶ್ ಭಟ್ ನೀಡಿದ ವಿವರಣೆ

  ಹೃತಿಕ್ ಲೀಗಲ್ ನೋಟೀಸ್ ಕಳುಹಿಸಿದರು

  ಹೃತಿಕ್ ಲೀಗಲ್ ನೋಟೀಸ್ ಕಳುಹಿಸಿದರು

  "ಹೋಮಿ ಅವರು ಅವರ ಕಚೇರಿಗೆ ಕರೆದ ಆ ದಿನ ಇನ್ನೂ ನೆನಪಿದೆ. ಆದರೆ ನಾನು ಆಗ ಹೃತಿಕ್ ರೋಷನ್ ನನಗೆ ಲೀಗಲ್ ನೋಟೀಸ್ ಕಳುಹಿಸಿದ್ದರಿಂದ ಆ ವಿಚಾರವಾಗಿ ನಾನು ಹೊರಟಿದ್ದೆ. ದಿಗ್ಭ್ರಮೆಗೊಂಡ ಸ್ಥಿತಿಯಲ್ಲಿದ್ದೆ. ನನಗೆ ಹೋಮಿ ಒಂದು ಪ್ರೇಮ ಕಥೆಯನ್ನು ನಿರೂಪಿಸಿದರು. ಆದರೆ ನನಗೆ ಅದರ ಮೇಲೆ ಕೇಂದ್ರಿಕರಿಸಲು ಸಾಧ್ಯವಾಗಿಲ್ಲ" ಎಂದು ಹೇಳಿದ್ದಾರೆ.

  ಒಂದು ವರ್ಷ ಯಾವುದೆ ಸಿನಿಮಾ ಮಾಡಿಲ್ಲ

  ಒಂದು ವರ್ಷ ಯಾವುದೆ ಸಿನಿಮಾ ಮಾಡಿಲ್ಲ

  "ನಾನು ಮತ್ತೆ ಭೇಟಿ ಮಾಡುತ್ತೇನೆ ಎಂದು ನಿರ್ದೇಶಕ ಹೋಮಿ ಅವರಿಗೆ ಹೇಳಿದೆ. ಆದರೆ ನನ್ನ ಮನಸ್ಥಿತಿ ಯಾರಿಗೂ ತಿಳಿದಿಲ್ಲ. ನಂತರ ಒಂದು ವರ್ಷ ನಾನು ಎದುರಿಸಿದ ಕೆಟ್ಟ ಪರಿಸ್ಥಿತಿಯಿಂದ ಆ ವರ್ಷ ಯಾವುದೆ ಚಿತ್ರಕ್ಕೆ ಸಹಿ ಮಾಡಲಿಲ್ಲ. ಆದರೆ ಆ ಸಿನಿಮಾ ಕಥೆಯನ್ನು ಅಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. ಒಂದು ನಗರದ ದಂಪತಿಯ ಪ್ರೇಮ ಕಥೆಯಾಗಿದೆ" ಎಂದು ಕಂಗನಾ ಹೇಳಿದ್ದಾರೆ.

   ಸಂಪೂರ್ಣ ವಿಷಯವನ್ನು ಈಗ ತನಿಖೆ ಮಾಡಲಾಗುತ್ತಿದೆ

  ಸಂಪೂರ್ಣ ವಿಷಯವನ್ನು ಈಗ ತನಿಖೆ ಮಾಡಲಾಗುತ್ತಿದೆ

  ಸುಶಾಂತ್ ಸಿಂಗ್ ತಂದೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದಾರೆ. ಸುಶಾಂತ್ ಹುಟ್ಟೂರು ಪಾಟನದಲ್ಲಿ ರಿಯಾ ಚಕ್ರವರ್ತಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ರಣಾವತ್ ಟೀಂ, "ಕಳೆದ 6 ತಿಂಗಳಿಂದ ರಿಯಾ ಸುಶಾಂತ್ ಅವರೊಂದಿಗೆ ಇದ್ದರು. ಅವರು ಮಹೇಶ್ ಭಟ್ ಅವರನ್ನು ತಮ್ಮ ಮನೋವೈದ್ಯರನ್ನಾಗಿ ನೇಮಿಸಿಕೊಂಡಿದ್ದರು. ಸುಶಾಂತ್ ಸಾವಿಗೆ ಎರಡೂ ದಿನಗಳ ಮೊದಲು ಎಲ್ಲರೂ ಕಣ್ಮರೆಯಾದರು. ಈ ಸಂಪೂರ್ಣ ವಿಷಯವನ್ನು ಈಗ ತನಿಖೆ ಮಾಡಲಾಗುವುದು ಎಂದು ಸಂತೋಷವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

  English summary
  Kangana ranaut says that Hrithik Roshan could not make a movie with Sushant Singh. kangana almost did movie with sushant but Hrithik Roshan send legal notice.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X