For Quick Alerts
  ALLOW NOTIFICATIONS  
  For Daily Alerts

  ಕಂಗನಾ ಅಕ್ಕ ರಂಗೋಲಿ ಜೀವನದಲ್ಲಿ ನಡೆದ ಕಹಿ ಘಟನೆ

  |

  ರಂಗೋಲಿ ಚಾಂಡೆಲ್ ನಟಿ ಕಂಗನಾ ರನೌತ್‌ಗೆ ಅಕ್ಕ ಮಾತ್ರವೇ ಅಲ್ಲ ಆಕೆಯ ಮ್ಯಾನೇಜರ್ ಹಾಗೂ ಆಕೆಯ ಹಿಂದಿನ ಶಕ್ತಿ ಸಹ ಹೌದು. ಅಕ್ಕನ ಬಗ್ಗೆ ನಟಿ ಕಂಗನಾಗೆ ಬಹಳ ಪ್ರೀತಿ.

  ಅಂತರಾಷ್ಟ್ರೀಯ ಯೋಗ ದಿನವಾದ ಇಂದು ಕಂಗನಾ ರನೌತ್ ಅಕ್ಕ ರಂಗೋಲಿ ಜೀವನದಲ್ಲಿ ನಡೆದ ಕಹಿ ಘಟನೆ ಹಾಗೂ ಅದರಿಂದ ರಂಗೋಲಿ ಹೊರಬಂದ ಬಗೆ ಹೇಗೆ ಹಾಗೂ ಅದಕ್ಕೆ ಯೋಗ ಹೇಗೆ ಸಹಕಾರಿಯಾಯಿತು ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ''ರಂಗೋಲಿಗೆ ಇನ್ನೂ 21 ವರ್ಷ ವಯಸ್ಸಿದ್ದಾಗ ರೋಡ್ ರೋಮಿಯೊ ಒಬ್ಬ ಅಕ್ಕನ ಮುಖಕ್ಕೆ ಆಸಿಡ್ ಎರಚಿಬಿಟ್ಟಿದ್ದ. ಆಕೆಯ ಮುಖ ಪೂರ್ತಿ ಸುಟ್ಟುಹೋಗಿತ್ತು, ಒಂದು ಕಣ್ಣಿನ ದೃಷ್ಟಿ ಹೋಗಿತ್ತು, ಎದೆಯ ಭಾಗಕ್ಕೂ ಹಾನಿಯಾಗಿತ್ತು. 2-3 ವರ್ಷಗಳಲ್ಲಿ ಸುಮಾರು 53 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು ರಂಗೋಲಿ'' ಎಂದು ನೆನಪಿಸಿಕೊಂಡಿದ್ದಾರೆ ಕಂಗನಾ.

  ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಳು ಅಕ್ಕ: ಕಂಗನಾ

  ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಳು ಅಕ್ಕ: ಕಂಗನಾ

  ''ಆಕೆ ಮಾನಸಿಕವಾಗಿ ಜರ್ಜರಿತಗೊಂಡಿದ್ದಳು. ಆಕೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಳು. ಎಲ್ಲವನ್ನೂ ನಿರ್ಭಾವುಕವಾಗಿ ನೋಡುತ್ತಿದ್ದಳಷ್ಟೆ. ಆ ಸಂದರ್ಭದಲ್ಲಿ ಏರ್‌ಫೋರ್ಸ್‌ನಲ್ಲಿ ಉದ್ಯೋಗಕ್ಕಿದ್ದ ಯುವಕನೊಟ್ಟಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ರಂಗೋಲಿಯ ಮುಖ ನೋಡಿ ಅವನು ಹೊರಟು ಹೋಗಿಬಿಟ್ಟ ಮದುವೆ ಮುರಿದು ಬಿತ್ತು. ಆಗಲೂ ರಂಗೋಲಿ ಒಂದು ಹನಿ ಕಣ್ಣೀರು ಸಹ ಹಾಕಿದೆ ನಿರ್ಭಾವುಕಳಾಗಿ ಇದ್ದಳು'' ಎಂದಿದ್ದಾರೆ ಕಂಗನಾ.

  ''ಮಾನಸಿಕ, ದೈಹಿಕ ಸಮಸ್ಯೆಗಳು ನಿವಾರಣೆ ಆದವು''

  ''ಮಾನಸಿಕ, ದೈಹಿಕ ಸಮಸ್ಯೆಗಳು ನಿವಾರಣೆ ಆದವು''

  ''ಆಗಿನ್ನೂ ನನಗೆ 19 ವರ್ಷ ವಯಸ್ಸು ನಾನು ಆಗ ಯೋಗ ಕಲಿಯುತ್ತಿದ್ದೆ. ಅಕ್ಕನನ್ನೂ ಸೇರಿಸಿದೆ. ಅದರಿಂದ ಆಕೆಗೆ ಬಹಳ ಸಹಾಯವಾಯಿತು. ಆಕೆಯ ಮಾನಸಿಕ ಸ್ಥಿತಿ ಸರಿಹೋಯಿತು. ಆಕೆಯ ದೈಹಿಕ ಗಾಯಗಳು ಸಹ ನಿಧಾನಕ್ಕೆ ವಾಸಿಯಾದವು. ಕಣ್ಣಿನ ಸಮಸ್ಯೆ ಸಹ ಸರಿಹೋಯಿತು'' ಎಂದಿದ್ದಾರೆ ಕಂಗನಾ.

  ನೀವು ಒಮ್ಮೆ ಪ್ರಯತ್ನಿಸಿ ನೋಡಿ: ಕಂಗನಾ

  ನೀವು ಒಮ್ಮೆ ಪ್ರಯತ್ನಿಸಿ ನೋಡಿ: ಕಂಗನಾ

  ''ರಂಗೋಲಿ ನಿಧಾನಕ್ಕೆ ಚೇತರಿಸಿಕೊಳ್ಳಲು ಆರಂಭಿಸಿದರು. ಆಕೆ ಪ್ರತಿಕ್ರಿಯಿಸಲು ಆರಂಭಿಸಿದಳು. ನನ್ನ ಕೆಟ್ಟ ಜೋಕ್‌ಗಳಿಗೂ ನಗಲು ಆರಂಭಿಸಿದಳು. ಯೋಗ ಎಲ್ಲದಕ್ಕೂ ಉತ್ತರ ದುಃಖಗಳಿಗೂ ಸಹ ನೀವು ಒಮ್ಮೆ ಪ್ರಯತ್ನಿಸಿ ನೋಡಿ. ಯೋಗ ದಿನದ ಶುಭಾಶಯ'' ಎಂದು ಯೋಗದಿಂದ ರಂಗೋಲಿಗೆ ಆದ ಸಹಾಯವನ್ನು ಸ್ಮರಿಸಿಕೊಂಡಿದ್ದಾರೆ ಕಂಗನಾ.

  ಅಜಯ್ ಚಾಂಡೆಲ್ ಅನ್ನು ವಿವಾಹವಾದ ರಂಗೋಲಿ

  ಅಜಯ್ ಚಾಂಡೆಲ್ ಅನ್ನು ವಿವಾಹವಾದ ರಂಗೋಲಿ

  ನಟಿ ಕಂಗನಾ ರನೌತ್‌ಗೆ ಅಕ್ಕ ರಂಗೋಲಿ ಜೊತೆಗೆ ತಮ್ಮ ಅಕ್ಷತ್ ಸಹ ಇದ್ದಾರೆ. ರಂಗೋಲಿ ಚಾಂಡೆಲ್ ಅಜಯ್ ಚಾಂಡೆಲ್ ಎಂಬುವರನ್ನು 2011ರಲ್ಲಿ ವಿವಾಹವಾಗಿದ್ದು ಈ ದಂಪತಿಗೆ ಪೃಥ್ವಿ ಹೆಸರಿನ ಮಗನಿದ್ದಾನೆ. ಕಂಗನಾ, ರಂಗೋಲಿಯ ತಾತ ಹಿಮಾಚಲ ಪ್ರದೇಶದಲ್ಲಿ ಶಾಸಕರಾಗಿದ್ದರು. ತಂದೆ ನಿವೃತ್ತ ಐಎಎಸ್ ಅಧಿಕಾರಿ.

  ಸಂಚಾರಿ ವಿಜಯ್ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿ‌ ಒಂದಾ..ಎರಡಾ.. | Filmibeat Kannada
  English summary
  Actress Kangana Ranaut shared incident which took place in her sister Rangoli's life and how Yoga helped her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X