For Quick Alerts
  ALLOW NOTIFICATIONS  
  For Daily Alerts

  ಮನಾಲಿಯ ಮೊದಲ ಹಿಮಪಾತದ ಸುಂದರ ದೃಶ್ಯವನ್ನು ಹಂಚಿಕೊಂಡ ನಟಿ ಕಂಗನಾ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ವಿವಾದಗಳ ಮೂಲಕವೆೇ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಕಂಗನಾ ತನ್ನ ವಿಚಾರಗಳನ್ನು, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  ಸಾಮಾಜಿಕ ಜಾಲತಾಣದಲ್ಲಿ ಅನೇಕರ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವ ಕಂಗನಾ ಇಂದು ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಕಂಗನಾ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮುಂದೆ ಓದಿ...

  'ಜಲ್ಲಿಕಟ್ಟು' ತಂಡಕ್ಕೆ ಕಂಗನಾ ಅಭಿನಂದನೆ; 'ಮಾಫಿಯಾ ಗ್ಯಾಂಗ್' ಮನೆಯಲ್ಲಿ ಅಡಗಿಕೊಂಡಿದೆ ಎಂದ ನಟಿ

  ಮನಾಲಿಯ ಮೊದಲ ಹಿಮಪಾತ

  ಮನಾಲಿಯ ಮೊದಲ ಹಿಮಪಾತ

  ಅಂದಹಾಗೆ ಕಂಗನಾ ಹಂಚಿಕೊಂಡಿರುವುದು ಮೊದಲ ಹಿಮಪಾತದ ಫೋಟೋಗಳನ್ನು. ಕಂಗನಾ ಸದ್ಯ ಮನಾಲಿಯಲ್ಲಿ ನೆಲೆಸಿದ್ದಾರೆ. ಚಿತ್ರೀಕರಣ ಮುಗಿಸಿ ಮನಾಲಿಗೆ ಹಿಂತಿರುಗಿದ್ದು, ಕುಟುಂಬದವರ ಜೊತೆ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿರುವ ಕಂಗನಾ ತನ್ನ ಮನೆಯ ಮುಂಭಾಗದಲ್ಲಿ ಹಿಮಪಾತವಾಗುತ್ತಿರುವ ಅದ್ಭುತ ನೋಟವನ್ನು ಅಭಿಮಾನಿಗಳಿಗೂ ದರ್ಶನ ಮಾಡಿಸಿದ್ದಾರೆ.

  ಹಿಮದಿಂದ ಮುಚ್ಚಿಹೋಗಿರುವ ಕಂಗನಾ ಮನೆ

  ಹಿಮದಿಂದ ಮುಚ್ಚಿಹೋಗಿರುವ ಕಂಗನಾ ಮನೆ

  ಕಂಗನಾ ಇಡೀ ಮನೆ ಹಿಮದಿಂದ ಮುಚ್ಚಿಹೋಗಿದೆ. ಈ ನೋಟ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿದೆ. ಕಂಗನಾ ಶೇರ್ ಮಾಡಿರುವ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ಸ್ ಹರಿದುಬರುತ್ತಿವೆ.

  ಹೈದರಾಬಾದ್ ಶೂಟಿಂಗ್ ಗೆ ತೆರಳಿದ್ದ ಕಂಗನಾ

  ಹೈದರಾಬಾದ್ ಶೂಟಿಂಗ್ ಗೆ ತೆರಳಿದ್ದ ಕಂಗನಾ

  ಕಳೆದ ವಾರ ಕಂಗನಾ ಚಿತ್ರೀಕರಣಕ್ಕೆಂದು ಹೈದರಾಬಾದ್ ಗೆ ತೆರಳಿದ್ದರು. ಹಾಗಾಗಿ ಮನಾಲಿಯ ಮೊದಲ ಹಿಮವನ್ನು ನೋಡಲು ಸಾಧ್ಯವಾಗಿರಲಿಲ್ಲ. ಅಂದು ಮಿಸ್ ಮಾಡಿದ್ದ ಕಂಗನಾ ಇದೀಗ ಮನೆಗೆ ತೆರಳಿ ಮೊದಲ ಹಿಮಪಾತವನ್ನು ಎಂಜಾಯ್ ಮಾಡುತ್ತಿದ್ದಾರೆ.

  ಪಟಾಕಿ ಕಿಡಿ: ಐಪಿಎಸ್ ಅಧಿಕಾರಿ ಡಿ. ರೂಪಾ ವಿರುದ್ಧ ಸಿಡಿದೆದ್ದ ನಟಿ ಕಂಗನಾ

  ಕಂಗನಾ ಟ್ವೀಟ್

  ಕಂಗನಾ ಟ್ವೀಟ್

  ಟ್ವಿಟ್ಟರ್ ನಲ್ಲಿ ಸುಂದರ ಫೋಟೋಗಳನ್ನು ಶೇರ್ ಮಾಡಿ, 'ನನ್ನ ಮನೆಯ ಕೆಲವು ಚಿಲ್ಲಿಂಗ್ ಚಿತ್ರಗಳು ಇಲ್ಲಿವೆ. ಮನಾಲಿಯಲ್ಲಿ ಮೊದಲ ಹಿಮಪಾತದ ಒಂದು ನೋಟ' ಎಂದು ಬರೆದುಕೊಂಡಿದ್ದಾರೆ.

  'ಜಲ್ಲಿಕಟ್ಟು' ತಂಡಕ್ಕೆ ಕಂಗನಾ ಅಭಿನಂದನೆ

  'ಜಲ್ಲಿಕಟ್ಟು' ತಂಡಕ್ಕೆ ಕಂಗನಾ ಅಭಿನಂದನೆ

  ಅಂದ್ಹಾಗೆ ಕಂಗನಾ ಭಾರತದಿಂದ ಆಸ್ಕರ್ ಅಂಗಳಕ್ಕೆ ಕಾಲಿಟ್ಟಿರುವ ಜಲ್ಲಿಕಟ್ಟು ಸಿನಿಮಾದ ಬಗ್ಗೆಯೂ ಟ್ವೀಟ್ ಮಾಡಿದ್ದಾರೆ. 'ಭಾರಿ ವಿರೋಧದ ಬಳಿಕ ಅಂತಿಮವಾಗಿ ಕೆಲವು ಫಲಿತಾಂಶ ಸಿಕ್ಕಿದೆ. ಭಾರತೀಯ ಸಿನಿಮಾಗಳು ಕೇವಲ 4 ಚಲನಚಿತ್ರ ಕುಟುಂಬಗಳಲ್ಲ. ಸಿನಿಮಾ ಮಾಫಿಯಾ ಗ್ಯಾಂಗ್ ತಮ್ಮ ಮನೆಯಲ್ಲಿ ಅಡಗಿಕೊಂಡಿದೆ. ಆಯ್ಕೆದಾರರು ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಿದ್ದಾರೆ. ಜಲ್ಲಿಕಟ್ಟು ತಂಡಕ್ಕೆ ಅಭಿನಂದನೆಗಳು' ಎಂದು ಹೇಳಿದ್ದಾರೆ.

  ಅಂದು ಪ್ರಥಮ್ ಮಾಡಿದ ಒಳ್ಳೆ ಕೆಲಸ ಇಂದು ಎಷ್ಟೋ ಮಕ್ಕಳಿಗೆ ಉಪಯೋಗ ಆಗ್ತಿದೆ | Olle Hudga Pratham
  ಕಂಗನಾ ಸಿನಿಮಾಗಳು

  ಕಂಗನಾ ಸಿನಿಮಾಗಳು

  ಕಂಗನಾ ಸದ್ಯ ತಲೈವಿ ಸಿನಿಮಾದ ಚಿತ್ರೀಕರಣ ಮುಗಿಸಿ ಮುಂದಿನ ಸಿನಿಮಾಗಳ ತಯಾರಿಯಲ್ಲಿದ್ದಾರೆ. ತೇಜಸ್ ಸಿನಿಮಾಗಾಗಿ ಕಂಗನಾ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ತೇಜಸ್ ಜೊತೆಗೆ ಕಂಗನಾ ಧಾಕಡ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ.

  English summary
  Bollywood Actress Kangana Ranaut shares pictures of first snowfall in Manali.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X