For Quick Alerts
  ALLOW NOTIFICATIONS  
  For Daily Alerts

  ದೇಶದಲ್ಲಿ ಬೆಂಕಿ ಹಚ್ಚಿ ವಿದೇಶದಲ್ಲಿ ಮಜಾ ಮಾಡುತ್ತಿದ್ದೀರಾ: ದಿಲ್ಜಿತ್ ರನ್ನು ತರಾಟೆಗೆ ತೆಗೆದುಕೊಂಡ ಕಂಗನಾ

  By ಫಿಲ್ಮ್ ಡೆಸ್ಕ್
  |

  ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಮ್ಮೆ ಪಂಜಾಬಿ ನಟ ಮತ್ತು ಗಾಯಕ ದಿಲ್ಜಿತ್ ದೊಸಾಂಜ್ ಅವರನ್ನು ಕೆಣಕಿದ್ದಾರೆ. ದೆಹಲಿಯಲ್ಲಿ ಕೊರೆಯುವ ಚಳಿಯ ನಡುವೆಯೂ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ನೀವು ಅವರಿಗೆ ಪ್ರಚೋದನೆ ನೀಡಿ, ಈಗ ವಿದೇಶ ಟ್ರಿಪ್ ಎಂಜಾಯ್ ಮಾಡುತ್ತಿದ್ದೀರಾ? ಎಂದು ಕಿಡಿಕಾರಿದ್ದಾರೆ.

  ನಟ ದಿಲ್ಜಿತ್ ದೊಸಾಂಜ್ ಸದ್ಯ ವಿದೇಶಿ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಹಿಮರಾಶಿಯ ನಡುವೆ ನಿಂತು ಕ್ಯಾಮರಾಗೆ ಪೋಸ್ ನೀಡಿರುವ ದಿಲ್ಜಿತ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರೈತರ ಪ್ರತಿಭಟನೆಗೆ ಬೆಂಗಲ ನೀಡಿ, ಇದೀಗ ವಿದೇಶಿ ಪ್ರವಾಸ ಆನಂದಿಸುತ್ತಿರುವ ದಿಲ್ಜಿತ್ ವಿರುದ್ ನೆಟ್ಟಿಗರು ಸಹ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

  BJP ಮೆಚ್ಚಿಸಲು ಹೋಗಿ ನನಗೆ ಸಿಕ್ಕಿದು 25-30 ಕೇಸುಗಳು, ಊರ್ಮಿಳಾ ಕಾಂಗ್ರೆಸ್ ಮೆಚ್ಚಿಸಿ ಹೊಸ ಆಫೀಸ್ ಖರೀದಿಸಿದರು; ಕಂಗನಾ ಟಾಂಗ್

  ದಿಲ್ಜಿತ್ ವಿರುದ್ಧ ಕಂಗನಾ ಕಿಡಿ

  ದಿಲ್ಜಿತ್ ವಿರುದ್ಧ ಕಂಗನಾ ಕಿಡಿ

  ಇದೀಗ ಕಂಗನಾ ರಣಾವತ್ ಸಹ ದಿಲ್ಜಿತ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. ದಿಲ್ಜಿಜ್ ಪೋಸ್ಟ್ ಮಾಡಿರುವ ಫೋಟೋಗಳನ್ನು ಶೇರ್ ಮಾಡಿ ಕಂಗನಾ, 'ವಾವ್ ಸಹೋದರ..ಇಂತಹ ಕೊರೆಯುವ ಚಳಿಯಲ್ಲಿ ರೈತನ್ನು ಪ್ರತಿಭಟನೆಗೆ ಪ್ರಚೋದಿಚಿಸಿ, ಅವರನ್ನು ರಸ್ತೆಯಲ್ಲಿ ಬಿಟ್ಟು. ಸ್ಥಳಿಯ ಕ್ರಾಂತಿಕಾರಿ ನೀವು ವಿದೇಶದಲ್ಲಿ ರಜಾದಿನಗಳನ್ನು ಎಂಜಾಯ್ ಮಾಡುತ್ತಿದ್ದೀರಿ. ಇದನ್ನೇ ಸ್ಥಳಿಯ ಕ್ರಾಂತಿಕಾರಿ ಎಂದು ಕರೆಯುವುದಾ? ಎಂದು ವ್ಯಂಗ್ಯವಾಡಿದ್ದಾರೆ.

  ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯನ್ನು ಅವಮಾನಿಸಿದ್ದ ಕಂಗನಾ

  ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯನ್ನು ಅವಮಾನಿಸಿದ್ದ ಕಂಗನಾ

  ರೈತರ ಪ್ರತಿಭಟನೆ ವಿಚಾರವಾಗಿ ಈ ಮೊದಲು ಕಂಗನಾ ಮತ್ತು ದಿಲ್ಜಿತ್ ನಡುವೆ

  ಟ್ವಿಟ್ಟರ್ ಸಮರ ನಡೆದಿದ್ದು. ಪ್ರತಿಭಟನೆಯಲ್ಲಿ ನಿರತರಾಗಿದ್ದ ಮಹಿಂದರ್ ಕೌರ್ ಕುರಿತಂತೆ ಈಕೆ 100 ರೂಪಾಯಿಗೆ ಎಲ್ಲರಿಗೂ ಲಭ್ಯವಾಗುತ್ತಾಳೆ ಎಂದು ಹೇಳಿ ವಿವಾದದ ಕಿಡಿಹೊತ್ತಿಸಿದ್ದರು. ಕಂಗನಾ ಈ ಹೇಳಿಕೆ ಅನೇಕರ ಕಣ್ಣು ಕೆಂಪಗೆ ಮಾಡಿತ್ತು.

  ಪ್ರತಿಭಟನೆ ಮಾಡುತ್ತಿರುವ ರೈತರಿಗೆ 1 ಕೋಟಿ ರೂ. ನೀಡಿದ ನಟ ದಿಲ್ಜಿತ್ ದೊಸಾಂಜ್

  ಕಂಗನಾ ಕಳಿ ಬಡಿಸಿದ್ದ ದಿಲ್ಜಿತ್

  ಕಂಗನಾ ಕಳಿ ಬಡಿಸಿದ್ದ ದಿಲ್ಜಿತ್

  ಬಳಿಕ ಕಂಗನಾ ವಿರುದ್ಧ ನಟ ಮತ್ತು ಗಾಯಕ ದಿಲ್ಜಿತ್ ಗುಡುಗಿದ್ದರು. ಕಂಗನಾ ಮಾತಿಗೆ ಪ್ರತಿಕ್ರಿಯೆ ನೀಡಿದ್ದರು. ಕಂಗನಾ ಟ್ವೀಟ್ ನಂತರ ಬಿಬಿಸಿ ಮಹಿಂದರ್ ಕೌರ್ ಅನ್ನು ಸಂದರ್ಶನ ಮಾಡಿತ್ತು. ತಾನು ರೈತ ಮಹಿಳೆ ಆಗಿದ್ದು, ಎಲ್ಲಾ ರೈತರೊಂದಿಗೆ ನಾನು ಪ್ರತಿಭಟನೆಗೆ ಹೋಗಿದ್ದೇನೆ ಎಂದು ಹೇಳಿದ್ದರು. ಈ ವಿಡಿಯೋವನ್ನು ಪೋಸ್ಟ್ ಮಾಡಿ ದಿಲ್ಜಿತ್, 'ಇಲ್ಲಿದೆ ನೋಡು ಸಾಕ್ಷಿ, ಇಷ್ಟೋಂದು ಕುರುಡಿ ಆಗಬಾರದು' ಎಂದು ಕಂಗನಾಗೆ ತಿರುಗೇಟು ನೀಡಿದ್ದರು.

  ಊರ್ಮಿಳಾ ವಿರುದ್ಧ ಕಂಗನಾ ಕಿಡಿ

  ಊರ್ಮಿಳಾ ವಿರುದ್ಧ ಕಂಗನಾ ಕಿಡಿ

  ನಟಿ ಮತ್ತು ರಾಜಕಾರಣಿ ಊರ್ಮಿಳಾ ಮುಂಬೈನಲ್ಲಿ ಮನೆ ಖರೀದಿ ಮಾಡಿದ ಬಳಿಕ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಉರ್ಮಿಳಾ ಅವರ ಕೆಲೆಳೆದಿದ್ದರು. 'ಊರ್ಮಿಳಾ ಅವರೇ ನಾನು ಕಷ್ಟ ಪಟ್ಟು ದುಡಿದ ಹಣದಲ್ಲಿ ಖರೀದಿಸಿದ್ದ ಕಚೇರಿಯನ್ನು ಕಾಂಗ್ರೆಸ್ ನಾಶ ಮಾಡಿತು. ಬಿಜೆಪಿ ಮನವೊಲಿಸಲು ಹೋಗಿದ್ದಕ್ಕೆ ನನಗೆ ಸಿಕ್ಕಿದ್ದು 25 ರಿಂದ 30 ಕೇಸುಗಳು. ನಾನು ಮೂರ್ಖಳಾದೆ. ನಿಮ್ಮಷ್ಟು ಜಾಣೆ ಆಗಿದ್ದರೆ ನಾನು ಕಾಂಗ್ರೆಸ್ ಖುಷಿ ಪಡಿಸುತ್ತಿದ್ದೆ. ನಾನು ಎಷ್ಟು ಮೂರ್ಖಳು'ಎಂದು ವ್ಯಂಗ್ಯವಾಗಿದ್ದರು.

  English summary
  Bollywood Actress Kangana Ranaut slammed Actor Diljit Dosanjh for Enjoying his holiday while farmers protesting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X