For Quick Alerts
  ALLOW NOTIFICATIONS  
  For Daily Alerts

  ಹೈ ಸೊಸೈಟಿಯ ಮಕ್ಕಳು 'ಮಾಲ್' ಕೇಳುತ್ತಾರೆ: ದೀಪಿಕಾ ಕಾಲೆಳೆದ ಕಂಗನಾ

  |

  ಡ್ರಗ್ಸ್ ಮಾಫಿಯಾದ ಪ್ರಕರಣದಲ್ಲಿ ನಟಿ ದೀಪಿಕಾ ಪಡುಕೋಣೆ ಹೆಸರು ಕೇಳಿ ಬರುತ್ತಿದೆ. ಡ್ರಗ್ಸ್ ವಿಚಾರವಾಗಿ ದೀಪಿಕಾ ನಡೆಸಿರುವ ವಾಟ್ಸಪ್ ಸಂದೇಶ ಬಹಿರಂಗವಾಗಿದ್ದು, ಮಾದಕ ವಸ್ತುಗೆ ಹೇಗೆಲ್ಲ ಬೇಡಿಕೆ ಇಟ್ಟಿದ್ದಾರೆ ಎನ್ನುವುದು ತಿಳಿದುಬಂದಿದೆ. ದೀಪಿಕಾ ಹೆಸರು ಬಹಿರಂಗಾಗುತ್ತಿದ್ದಂತೆ ನಟಿ ಕಂಗನಾ ರಣಾವತ್ ಸಮಾಜದ ಮೇಲ್ವರ್ಗದ ಕುಟುಂಬದಿಂದ ಬಂದ ಮಕ್ಕಳು ತಮ್ಮ ಮ್ಯಾನೇಜರ್ ಬಳಿ 'ಮಾಲ್' ಕೇಳುತ್ತಾರೆ ಎಂದು ದೀಪಿಕಾಗೆ ಟಾಂಗ್ ನೀಡಿದ್ದಾರೆ.

  ಡ್ರಗ್ಸ್ ಮಾಫಿಯಾ ಬಾಲಿವುಡ್ ನಲ್ಲಿ ಸದ್ಯ ಸಂಚಲನ ಸೃಷ್ಟಿ ಮಾಡಿದೆ. ಈ ಮಾಫಿಯಾದಲ್ಲಿ ಘಟಾನುಘಟಿಗಳ ಹೆಸರು ಕೇಳಿ ಬರುತ್ತಿದೆ. ಇದೀಗ ಸ್ಟಾರ್ ನಟಿ ದೀಪಿಕಾಗೂ ಮುಳುವಾಗುವ ಸಾಧ್ಯತೆ ಇದೆ. ದೀಪಿಕಾ ವಾಟ್ಸಪ್ ಸಂದೇಶ ಕಲೆ ಹಾಕಿದ ತನಿಖಾತಂಡ ದೀಪಿಕಾರನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ. ದೀಪಿಕಾ ಹೆಸರು ಬಹಿರಂಗವಾದ ಬಳಿಕ ನಟಿ ಕಂಗನಾ, ಖಿನ್ನತೆಯು ಮಾದಕ ದ್ರವ್ಯ ಸೇವನೆಯ ಪರಿಣಾಮವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ..

  ಡ್ರಗ್ಸ್ ಪ್ರಕರಣ: ದೀಪಿಕಾ ಪಡುಕೋಣೆ ಮ್ಯಾನೇಜರ್‌ ಗೆ ಎನ್‌ಸಿಬಿ ನೊಟೀಸ್ಡ್ರಗ್ಸ್ ಪ್ರಕರಣ: ದೀಪಿಕಾ ಪಡುಕೋಣೆ ಮ್ಯಾನೇಜರ್‌ ಗೆ ಎನ್‌ಸಿಬಿ ನೊಟೀಸ್

  ದೀಪಿಕಾಗೆ ಟಾಂಗ್ ಕೊಟ್ಟ ಕಂಗನಾ

  ದೀಪಿಕಾಗೆ ಟಾಂಗ್ ಕೊಟ್ಟ ಕಂಗನಾ

  ದೀಪಿಕಾ ಪಡುಕೋಣೆ ಈ ಹಿಂದೆ 'ರಿಪೀಟ್ ಆಫ್ಟರ್ ಮಿ' ಎಂದು ಬಳಸಿ ಖಿನ್ನತೆ ಬಗ್ಗೆ ಟ್ವೀಟ್ ಮಾಡಿದ್ದರು. ಇದೀಗ ಕಂಗನಾ ಅದೇ ಪದವನ್ನು ಬಳಸಿ, "ಖಿನ್ನತೆಯೂ ಮಾದಕ ದ್ರವ್ಯ ಸೇವನೆಯ ಪರಿಣಾಮವಾಗಿದೆ. ಸಮಾಜದ ಮೇಲ್ವರ್ಗದ ಕುಟುಂಬದ ಸ್ಟಾರ್ ಮಕ್ಕಳು, ಸಭ್ಯಸ್ಥರ ಹಾಗೆ ಬೆಳೆದುಬಂದವರು ಎಂದು ಹೇಳಿಕೊಳ್ಳುವವರು ಈಗ ಅವರ ಮ್ಯಾನೇಜರ್ ಬಳಿ ಮಾಲ್ ಇದಿಯಾ ಎಂದು ಹೇಳುತ್ತಾರೆ." ಎಂದು ಹೇಳಿ ದೀಪಿಕಾ ಕಾಲೆಳೆದಿದ್ದಾರೆ.

  ಮಾದಕ ವಸ್ತು ಭಯೋತ್ಪಾದನೆ ದೊಡ್ಡ ಸವಾಲಾಗಿದೆ

  ಮಾದಕ ವಸ್ತು ಭಯೋತ್ಪಾದನೆ ದೊಡ್ಡ ಸವಾಲಾಗಿದೆ

  "ಮಾದಕ ವಸ್ತು ಭಯೋತ್ಪಾದನೆ ನಾವು ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ನಮ್ಮ ರಾಷ್ಟ್ರ ಮತ್ತು ಪಕ್ಕದ ರಾಷ್ಟ್ರಗಳ ಪಟ್ಟಭದ್ರ ಹಿತಾಸಕ್ತಿಗಳು, ನಮ್ಮ ಯುವ ಜನಾಂಗವನ್ನು ನಾಶಮಾಡಲು ಮತ್ತು ನಮ್ಮ ಭವಿಷ್ಯವನ್ನು ವ್ಯವಸ್ಥಿತವಾಗಿ ಹಾಳುಮಾಡುತ್ತಿದ್ದಾರೆ." ಎಂದು ಕಂಗನಾ ಹೇಳಿದ್ದಾರೆ.

  ಡ್ರಗ್ಸ್ ಪ್ರಕರಣ: ದೀಪಿಕಾ ಪಡುಕೋಣೆ ಮ್ಯಾನೇಜರ್‌ ಗೆ ಎನ್‌ಸಿಬಿ ನೊಟೀಸ್ಡ್ರಗ್ಸ್ ಪ್ರಕರಣ: ದೀಪಿಕಾ ಪಡುಕೋಣೆ ಮ್ಯಾನೇಜರ್‌ ಗೆ ಎನ್‌ಸಿಬಿ ನೊಟೀಸ್

  ದೀಪಿಕಾ ವಾಟ್ಸಪ್ ಚಾಟ್

  ದೀಪಿಕಾ ವಾಟ್ಸಪ್ ಚಾಟ್

  ದೀಪಿಕಾ ಟ್ಯಾಲೆಂಟ್ ಮ್ಯಾನೇಜರ್ ಕರೀಷ್ಮಾ ಬಳಿ, 'ನಿನ್ನ ಬಳಿ ಮಾಲ್ ಇದೆಯಾ?' ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕರಿಷ್ಮಾ, 'ಇದೆ ಆದರೆ ಮನೆಯಲ್ಲಿದೆ, ನಾನು ಬಾಂದ್ರಾದಲ್ಲಿ ಇದ್ದೀನಿ'. 'ನಿಮಗೆ ಬೇಕಾದರೆ ಅಮಿತ್ ಬಳಿ ಕೇಳುತ್ತೇನೆ.' ಎಂದಿದ್ದಾರೆ. ಇದಕ್ಕೆ 'ದೀಪಿಕಾ ಸರಿ ದಯವಿಟ್ಟು ಕೇಳಿ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. 'ಅಮಿತ್ ಬಳಿ ಇದೆ' ಎಂದು ಕರಿಷ್ಮಾ ಹೇಳಿದ್ದಾರೆ. ದೀಪಿಕಾ, 'ಹ್ಯಾಷ್ ಹಾ?' ಎಂದು ಕೇಳಿದ್ದಾರೆ. 'ಇಲ್ಲ ವೀಡ್ ಇದೆ' ಎಂದು ಕರಿಷ್ಮಾ ಪ್ರತಿಕ್ರಿಯಿಸಿದ್ದಾರೆ. ಈ ಚಾಟ್ ಈಗ ವೈರಲ್ ಆಗಿದೆ.

  ಗಾಂಜಾ ಕೇಳಿ ತಗಲಕೊಂಡ Deepika Padukone..!? | Filmibeat Kannada
  ದೀಪಿಕಾ ಪಡುಕೋಣೆ ಮ್ಯಾನೇಜರ್ ನೋಟಿಸ್

  ದೀಪಿಕಾ ಪಡುಕೋಣೆ ಮ್ಯಾನೇಜರ್ ನೋಟಿಸ್

  ದೀಪಿಕಾ ವಾಟ್ಸಪ್ ಚಾಟ್ ಆಧಾರದ ಮೇಲೆ ಎನ್ ಸಿ ಬಿ ನೋಟಿಸ್ ನೀಡುವ ಸಾಧ್ಯತೆ ಇದೆ. ದೀಪಿಕಾ ಜೊತೆ ಚಾಟ್ ಮಾಡಿರುವ ಕರಿಷ್ಮಾ ಪ್ರಕಾಶ್ ಮಾತ್ರವೇ ಅಲ್ಲದೆ ಕ್ವಾನ್ ಟ್ಯಾಲೆಂಟ್ ಏಜೆನ್ಸಿಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಧ್ರುವ ಚಿತ್ಗೋಪ್ಕೇರ್ ಗೂ ಎನ್‌ಸಿಬಿ ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.

  English summary
  Actress Kangana Ranaut takes a Dig at Deepika Padukone after her Drug chat goes viral. Kangana says depression is a consequence of drug abuse.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X