For Quick Alerts
  ALLOW NOTIFICATIONS  
  For Daily Alerts

  'ಇಬ್ಬರು Below Average....,ಅವರ ಟೈಂ ಮುಗಿತು': 'ಲವ್‌ಬರ್ಡ್ಸ್' ಕಾಲೆಳೆದ ಕಂಗನಾ

  |

  'ರಣಬೀರ್ ಕಪೂರ್ ಮತ್ತು ಆಲಿಯಾ ಭಟ್‌ಗಿಂತ ಉತ್ತಮ ನಟರು ಯಾರೂ ಇಲ್ಲ' ಎಂದು ನಿರ್ದೇಶಕ ಆರ್ ಬಲ್ಕಿ ಹಿಂದೆಯೊಮ್ಮೆ ಹೇಳಿದ್ದರಂತೆ. ಈ ಹೇಳಿಕೆಯನ್ನು ಖಂಡಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್ 'ಇಬ್ಬರು Below Average...., ಅವರ ಟೈಂ ಮುಗಿತು' ಎಂದು ತಿರುಗೇಟು ನೀಡಿದ್ದಾರೆ.

  ಎಲ್ಲಾ ನಮಗೆ ಬೇಕು ಅನ್ನೋರಲ್ಲ ನಾವು | ShivaRajKumar | DCM Ashwath Narayan | Filmibeat Kannada

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ ಇಬ್ಭಾಗವಾಗಿದೆ. ಬಿಟೌನ್ ಪ್ರಭಾವಿಗಳು ತಮ್ಮ ಮಕ್ಕಳು, ತಮ್ಮವರನ್ನು ಬೆಳೆಸುವ ಉದ್ದೇಶದಿಂದ ಪ್ರತಿಭಾನ್ವಿತರನ್ನು ತುಳಿಯುತ್ತಿದ್ದಾರೆ ಎಂಬ ವಾದ ಸದ್ದು ಮಾಡ್ತಿದೆ. ನೆಪೋಟಿಸಂ ಎಂಬ ಭೂತ ಬಾಲಿವುಡ್ ಗೆ ಆವರಿಸಿಕೊಂಡಿದೆ ಎಂದು ಕಂಗನಾ ರಣಾವತ್ ಸೇರಿದಂತೆ ಅನೇಕರು ದೂರಿದ್ದರು.

  ನೆಪೋಟಿಸಂ ಎಫೆಕ್ಟ್: ಅಲಿಯಾ ಭಟ್ 'ಸಡಕ್-2' ಟ್ರೈಲರ್ ಗೆ ಲೈಕ್ಸ್ ಗಿಂತ ಡಿಸ್ ಲೈಕ್ಸ್ ಹೆಚ್ಚು

  ಮಹೇಶ್ ಭಟ್, ಕರಣ್ ಜೋಹರ್, ಆದಿತ್ಯಾ ಚೋಪ್ರಾ ಸೇರಿದಂತೆ ಇನ್ನು ಹಲವರು ನೆಪೋಟಿಸಂ ಆಪಾದನೆ ಎದುರಿಸುತ್ತಿದ್ದಾರೆ. ಸುಶಾಂತ್ ಸಾವಿಗೆ ಇವರೇ ಕಾರಣ ಎಂದು ಹಲವರು ಟೀಕಿಸುತ್ತಿದ್ದಾರೆ. ನಟಿ ಕಂಗನಾ ಸಹ ಸುಶಾಂತ್ ಸಾವಿಗೆ ಬಾಲಿವುಡ್ ಕಾರಣ, ಇದಕ್ಕೆ ನ್ಯಾಯ ಸಿಗಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಮುಂದೆ ಓದಿ....

  ಸಡಕ್-2 ಟ್ರೈಲರ್‌ಗೆ ಭಾರಿ ಹಿನ್ನಡೆ

  ಸಡಕ್-2 ಟ್ರೈಲರ್‌ಗೆ ಭಾರಿ ಹಿನ್ನಡೆ

  ಮಹೇಶ್ ಭಟ್ ನಿರ್ದೇಶನ, ಆಲಿಯಾ ಭಟ್, ಸಂಜಯ್ ದತ್, ಆದಿತ್ಯ ರಾಯ್ ಕಪೂರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಡಕ್-2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಆದರೆ, ಟ್ರೈಲರ್ ಗೆ ಭಾರಿ ಹಿನ್ನೆಡೆ ಆಗಿದೆ. ಸುಶಾಂತ್ ಸಾವಿನ ಹಿನ್ನೆಲೆ ನೆಟ್ಟಿಗರು ಟ್ರೈಲರ್ ವಿರೋಧಿಸಿದ್ದಾರೆ. ಲೈಕ್ಸ್ ಗಿಂತ ಡಿಸ್‌ಲೈಕ್ಸ್ ಹೆಚ್ಚು ಬಂದಿದೆ. ಈ ಚಿತ್ರವನ್ನು ನೋಡಬೇಡಿ ಎಂಬ ಅಭಿಯಾನವೂ ಶುರುವಾಗಿದೆ. ಈ ಬೆಳವಣಿಗೆಯನ್ನು ಗಮನಿಸಿದ ನಟಿ ಕಂಗನಾ, ಆಲಿಯಾ ಭಟ್ ಹಾಗೂ ರಣ್ಬೀರ್ ಕಾಲೆಳೆದಿದ್ದಾರೆ.

  ಇಬ್ಬರು Below Average...., ಅವರ ಟೈಂ ಮುಗಿತು

  ಇಬ್ಬರು Below Average...., ಅವರ ಟೈಂ ಮುಗಿತು

  ''ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಉತ್ತಮ ನಟರು, ಇವರ ಮುಂದೆ ಬೇರೆ ಯಾರೂ ಇಲ್ಲ.....ಎಂದು ಹೇಳಿದ್ದ ಆರ್ ಬಲ್ಕಿ ಎಲ್ಲೋ ಮುಚ್ಚಿಟ್ಟುಕೊಂಡಿದ್ದಾರೆ, ಕಂಡುಹಿಡಿಯಬೇಕಿದೆ. ಜನರನ್ನು ಯಾಮಾರಿಸುವುದಕ್ಕೂ ಲಿಮಿಟ್ ಇದೆ. ನಾಚಿಕೆಯಾಗ್ಬೇಕು. ಮಾಧ್ಯಮ ಎಂಬ ಮಾಫಿಯಾ, ನಕಲಿ ಪ್ರಶಸ್ತಿಗಳು, ಅವರ ಸ್ನೇಹಿತರ ಶ್ರೀರಕ್ಷೆಯಲ್ಲಿದ್ದ ಇಬ್ಬರು ಸಾಧಾರಣಕ್ಕಿಂತ ಕಡಿಮೆ. ಅವರ ಟೈಂ ಮುಗಿತು'' ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

  ಸುಶಾಂತ್ ಸಿಂಗ್ ಪ್ರಕರಣಕ್ಕೆ ತಿರುವು: 'ಸ್ಟನ್ ಗನ್' ಬಳಸಿ ಕೊಲೆ ಮಾಡಲಾಗಿದ್ಯಾ?

  ಸಿಬಿಐ ತನಿಖೆ ಆಗಲಿ- ಕಂಗನಾ

  ಸಿಬಿಐ ತನಿಖೆ ಆಗಲಿ- ಕಂಗನಾ

  ''ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ವಿಚಾರಣೆ ಮುಗಿಸುವ ಹಂತಕ್ಕೆ ತಲುಪಿದ್ದಾರೆ ಎಂದು ರಾಜ್ಯಸಭಾ ಸದಸ್ಯ, ಶಿವಸೇನಾ ನಾಯಕ ಸಂಜಯ್ ದತ್ ಹೇಳುತ್ತಿದ್ದಾರೆ. ನಮಗೆ ಸತ್ಯ ತಿಳಿಯಬೇಕಿದೆ. ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ'' ಎಂದು ಕಂಗನಾ ಇಂದು ಸಹ ಆಗ್ರಹಿಸಿದ್ದಾರೆ.

  ಸಡಕ್-2 ಚಿತ್ರ ನೋಡಬೇಡಿ

  ಸಡಕ್-2 ಚಿತ್ರ ನೋಡಬೇಡಿ

  ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಆಪಾದನೆಗಳನ್ನು ಎದುರಿಸುತ್ತಿರುವವರೆಲ್ಲರೂ ಒಟ್ಟಿಗೆ ಕೆಲಸ ಮಾಡಿರುವ ಚಿತ್ರ ಎಂಬ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವಿರೋಧಕ್ಕೆ ಗುರಿಯಾಗಿದೆ. ಮಹೇಶ್ ಭಟ್ ನಿರ್ದೇಶನ, ಅಲಿಯಾ ಭಟ್, ಆದಿತ್ಯ ರಾಯ್, ಪೂಜಾ ಭಟ್, ಸಂಜಯ್ ದತ್, ಮುಖೇಶ್ ಭಟ್ ನಟಿಸಿದ್ದಾರೆ. ಹಾಗಾಗಿ, ಚಿತ್ರದ ವಿರುದ್ಧ ಆಕ್ರೋಶಗೊಂಡಿರುವ ನೆಟ್ಟಿಗರು 5 ಮಿಲಿಯನ್‌ಗೂ ಹೆಚ್ಚು ಡಿಸ್‌ಲೈಕ್‌ ಮಾಡಿದ್ದಾರೆ.

  English summary
  Ranbir kapoor and Alia bhat both pappus are below average glorified by mafia media, their friends and fake awards, their time is up said kangana ranaut.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X