For Quick Alerts
  ALLOW NOTIFICATIONS  
  For Daily Alerts

  ಮಹಾತ್ಮಾ ಗಾಂಧಿ ಬಗ್ಗೆ ಕಂಗನಾ ರನೌತ್ ಟ್ವೀಟ್: ಚರ್ಚೆ ಆರಂಭ

  |

  ವಿಶ್ವ ನಾಯಕ ಮಹಾತ್ಮಾ ಗಾಂಧಿ ಅವರ ಬಗ್ಗೆ ಕಂಗನಾ ರನೌತ್ ಮಾಡಿರುವ ಟ್ವೀಟ್ ಚರ್ಚೆಗೆ ಕಾರಣವಾಗಿದೆ.

  ಸಿನಿಮಾಗಳಿಗಿಂತಲೂ ಹೆಚ್ಚಾಗಿ ತಮ್ಮ ಬಿಡು-ಬೀಸು ಟ್ವೀಟ್‌ಗಳಿಂದಲೇ ಸುದ್ದಿಯಲ್ಲಿರುವ ಕಂಗನಾ ರನೌತ್‌, ಇದೀಗ ಮಹಾತ್ಮಾ ಗಾಂಧಿ ಅವರ ವೈಯಕ್ತಿಕ ಜೀವನದ ಕುರಿತಾಗಿ ಟ್ವೀಟ್ ಮಾಡಿದ್ದು, ನಿರೀಕ್ಷೆಯಂತೆಯೇ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

  ಎಲ್ಲವೂ ಪ್ರಾರಂಭವಾಗಿದ್ದು ಇಂಗ್ಲೆಂಡ್ ರಾಜಮನೆತನದ ಸುದ್ದಿಯಿಂದ. ಮೆಗಾನ್ ಮಾರ್ಕೆಲ್ ಮತ್ತು ಪ್ರಿನ್ಸ್ ಹ್ಯಾರಿ, ಓಪ್ರಾ ವಿನ್‌ಫ್ರಿಗೆ ನೀಡಿದ ಸಂದರ್ಶನದಲ್ಲಿ ಇಂಗ್ಲೆಂಡ್ ರಾಜಮನೆತನದ ಬಗ್ಗೆ ದೂರುಗಳನ್ನು ಹೇಳಿರುವುದನ್ನು ಖಂಡಿಸಿ ಕಂಗನಾ ಟ್ವೀಟ್ ಮಾಡಿದ್ದರು.

  'ಆಕೆ (ರಾಣಿ ಎಲಿಜಿಬೆತ್ 2) ಒಳ್ಳೆಯ ತಾಯಿ, ತಂಗಿ, ಹೆಂಡತಿ ಆಗದೇ ಇದ್ದಿರಬಹುದು ಆದರೆ ಅದ್ಭುತವಾದ ರಾಣಿಯಂತೂ ಹೌದು. ಆಕೆ ತನ್ನ ತಂದೆಯ ಕನಸನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಯಾವ ಮಗನಿಂದಲೂ ಸಾಧ್ಯವಾಗದ ರೀತಿಯಲ್ಲಿ ಅರಮನೆಯನ್ನು, ರಾಜಮನೆತನವನ್ನು ಕಾಪಾಡುತ್ತಿದ್ದಾರೆ. ಆಕೆಯನ್ನು ರಾಣಿಯಾಗಿ ನಿವೃತ್ತಿ ಹೊಂದಲು ಬಿಡಿ' ಎಂದು ರಾಣಿಯ ಪರವಾಗಿ ಟ್ವೀಟ್ ಮಾಡಿದ್ದರು ಕಂಗನಾ.

  ಕಂಗನಾ ರ ಟ್ವೀಟ್‌ಗೆ ಬಂದ ಪ್ರತಿಕ್ರಿಯೆಯೊಂದಕ್ಕೆ ಉತ್ತರ ನೀಡುತ್ತಾ, ಮಹಾತ್ಮಾ ಗಾಂಧಿ ಅವರ ಉದಾಹರಣೆ ಬಳಸಿರುವ ಕಂಗನಾ, ''ಮಹಾತ್ಮಾ ಗಾಂಧಿ ಒಬ್ಬ ಕೆಟ್ಟ ಪೋಷಕ ಆಗಿದ್ದರು ಎಂದು ಅವರ ಮಕ್ಕಳೆ ಆರೋಪ ಮಾಡಿದ್ದರು. ಅತಿಥಿಗಳು ಬಳಸಿದ ಶೌಚಾಲಯವನ್ನು ಸ್ವಚ್ಛ ಮಾಡಲಿಲ್ಲವೆಂಬ ಕಾರಣಕ್ಕೆ ತಮ್ಮ ಪತ್ನಿಯನ್ನು ಹಲವು ಬಾರಿ ಗಾಂಧಿ ಮನೆಯಿಂದ ಹೊರಗೆ ಹಾಕಿದ್ದರು ಎಂಬ ಉಲ್ಲೇಖಗಳು ಸಿಗುತ್ತವೆ. ಅವರೊಬ್ಬ ಮಹಾನ್ ನಾಯಕ ಆಗಿರಬಹುದು ಆದರೆ ಒಳ್ಳೆಯ ಪತಿ ಆಗಿರಲಿಲ್ಲ. ಆದರೆ ಪುರುಷ ಸಾಧಕರ ವಿಚಾರದಲ್ಲಿ ಇದನ್ನೆಲ್ಲಾ ಯಾರೂ ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ' ಎಂದಿದ್ದಾರೆ ಕಂಗನಾ.

  ಚಿಕ್ಕಪ್ಪನ ಖರಾಬು ಸಾಂಗ್ ನೋಡಿ ಖುಷಿ ಪಡ್ತಿದ್ದಾನೆ ಜೂನಿಯರ್ ಚಿರು|Junior Chiru's Lovely Gesture with Dhruva

  ಮಹಾತ್ಮಾ ಗಾಂಧಿ ಕುರಿತಾದ ಕಂಗನಾ ಅವರ ಟ್ವೀಟ್‌ಗೆ ಪರ-ವಿರೋಧ ಪ್ರತಿಕ್ರಿಯೆಗಳು ಬಂದಿವೆ. ಕಂಗನಾ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಒಬ್ಬರು, 'ವಿಶ್ವದಾದ್ಯಂತ ಪುರುಷ ಸಾಧಕರ ವೈಯಕ್ತಿಕ ಜೀವನ ಗಮನಿಸಿದಲ್ಲಿ ಅವರು ತಮ್ಮ ಕುಟುಂಬವನ್ನು ನಿರ್ಲಕ್ಷ ಮಾಡಿಯೇ ಸಮಾಜದಲ್ಲಿ ಗೌರವ ಸಂಪಾದಿಸಿರುತ್ತಾರೆ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಅದೇ ಮಹಿಳಾ ಸಾಧಕಿ ತಾಯಿಯಾಗಿ, ಹೆಂಡತಿಯಾಗಿ ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ತುಸು ವಿಫಲವಾದರೂ ಸಾಕು ಎಲ್ಲರೂ ಆಕೆಯನ್ನು ವಿಲನ್ ಮಾಡಿಬಿಡುತ್ತಾರೆ' ಎಂದಿದ್ದಾರೆ. ಈ ಟ್ವೀಟ್‌ಗೆ ಹಲವರು ಸಮ್ಮತಿ ಸೂಚಿಸಿದ್ದಾರೆ.

  English summary
  Kangana Ranaut tweeted about Mahatma Gandhi and said he may be a world leader but not a good husband.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X