Just In
Don't Miss!
- Finance
ಸೆನ್ಸೆಕ್ಸ್ 400 ಪಾಯಿಂಟ್ಸ್ ಜಿಗಿತ: ನಿಫ್ಟಿ 108 ಪಾಯಿಂಟ್ಸ್ ಏರಿಕೆ
- News
ಸಿಂಧಗಿ; ಉಪ ಚನಾವಣೆಗೆ ಮುನ್ನ ಆಪರೇಷನ್ ಜೆಡಿಎಸ್!
- Sports
ಭಾರತ vs ಇಂಗ್ಲೆಂಡ್: ಮೊದಲ ಟಿ20ಯಲ್ಲಿ ಜೋಫ್ರಾ ಆರ್ಚರ್ ಆಡುವುದು ಬಹುತೇಕ ಖಚಿತ
- Automobiles
ರಾಷ್ಟ್ರ ರಾಜಧಾನಿಯಲ್ಲಿ ಕುಸಿದ ರಸ್ತೆ ಅಪಘಾತಗಳ ಸಂಖ್ಯೆ
- Education
Bangalore University Recruitment 2021: ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಿಯರ್ ಸೇವನೆ ಅರೋಗ್ಯಕರವೇ? ತಜ್ಞರು ಏನೆನ್ನುತ್ತಾರೆ ಗೊತ್ತಾ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುಶಾಂತ್ ಸಿಂಗ್ ಸಾವಿನ 'ಗುಟ್ಟು' ಬಿಚ್ಚಿಟ್ಟ ಕಂಗನಾ ರಣೌತ್
ಸುಶಾಂತ್ ಸಿಂಗ್ ಹುಟ್ಟುಹಬ್ಬ ಇಂದು. ಸುಶಾಂತ್ ಬದುಕಿದಿದ್ದರೆ ಇಂದು ಅವರಿಗೆ 35 ವರ್ಷವಾಗಿರುತ್ತಿತ್ತು. ಆದರೆ ದುರಾದೃಷ್ಟವಶಾತ್ ಕಳೆದ ವರ್ಷ ಜೂನ್ 14 ರಂದು ನಿಧನವಾದರು.
ಸುಶಾಂತ್ ಮೃತದೇಹ ಮುಂಬೈನ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆ ನಡೆಸಿದ ಮುಂಬೈ ಪೊಲೀಸರು ಇದೊಂದು ಆತ್ಮಹತ್ಯೆ ಎಂದು ವರದಿ ನೀಡಿದ್ದಾರೆ. ಸಿಬಿಐ ತನಿಖೆ ಪ್ರಸ್ತುತ ಜಾರಿಯಲ್ಲಿದೆ.
ಇದು ತಲೆ ಕಡಿಯುವ ಸಮಯ: ಹಿಂಸೆಗೆ ಕರೆ ನೀಡಿದ ಕಂಗನಾ
ಸುಶಾಂತ್ ನಿಧನದ ನಂತರ ಬಾಲಿವುಡ್ ನಲ್ಲಿ ಬಿರುಗಾಳಿಯೇ ಎದ್ದಿತ್ತು. ಸುಶಾಂತ್ ರದ್ದು ಕೊಲೆಯೇ ಎಂದು ಹಲವು ಮಾಧ್ಯಮಗಳು, ಸಾಮಾಜಿಕ ಜಾಲತಾಣದಲ್ಲಿ ಬಲವಾಗಿ ಪ್ರತಿಪಾದಿಸಲಾಯಿತು. ಸುಶಾಂತ್ ರ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಇನ್ನೂ ಕೆಲವರ ಮೇಲೆ ಕೊಲೆಯ ಆರೋಪಗಳನ್ನು ಹೊರಿಸಲಾಗಿತ್ತು. ಸುಶಾಂತ್, ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಯಿತು ಎಂದು ಸಹ ಹಲವರು ವಾದಿಸಿದರು. ಅದರಲ್ಲಿ ನಟಿ ಕಂಗನಾ ರಣೌತ್ ಸಹ ಒಬ್ಬರು. ಇಂದು ಸುಶಾಂತ್ ಹುಟ್ಟುಹಬ್ಬದಂದು ಟ್ವೀಟ್ ಮಾಡಿರುವ ಕಂಗನಾ, ಸುಶಾಂತ್ ಸಾವು ಹೇಗೆ ಆಯಿತು ಎಂಬ ಟ್ವೀಟ್ ಮಾಡಿದ್ದಾರೆ.

ಸುಶಾಂತ್ ವೃತ್ತಿಯನ್ನು ಮುಗಿಸಲು ಪಣ ತೊಟ್ಟಿದ್ದ ಆದಿತ್ಯ ಚೋಪ್ರಾ: ಕಂಗನಾ
ಸುಶಾಂತ್ ಸಿಂಗ್ ಆದಿತ್ಯ ಚೋಪ್ರಾ ಜೊತೆಗೆ ಸಿನಿಮಾ ಒಂದರ ಕುರಿತಂತೆ ಜಗಳ ಮಾಡಿಕೊಂಡಿದ್ದರು. 'ನಿನ್ನ ವೃತ್ತಿಯನ್ನು ಸರ್ವನಾಶ ಮಾಡುತ್ತೇನೆ' ಎಂದು ಆದಿತ್ಯ ಚೋಪ್ರಾ ಹೇಳಿದ್ದರು. 'ಸ್ವಜನಪಕ್ಷಪಾತದ ಪಿತಾಮಹ' ಕರಣ್ ಜೋಹರ್ ಆದಿತ್ಯಾ ಚೋಪ್ರಾ ಜೊತೆಗೆ ಸೇರಿಕೊಂಡರು ಎಂದು ಮೊದಲ ಟ್ವೀಟ್ ನಲ್ಲಿ ಹೇಳಿದ್ದಾರೆ ಕಂಗನಾ.

ಕರಣ್ ಜೋಹರ್, ಸುಶಾಂತ್ ಗೆ ಮೋಸ ಮಾಡಿದ: ಕಂಗನಾ
'ಧೋನಿ' ಸಿನಿಮಾದ ಬಳಿಕ ಸುಶಾಂತ್ ಗೆ ಸ್ಟಾರ್ ಪಟ್ಟ ದೊರಕಿತು. ಆಗ ಕರಣ್ ಜೋಹರ್ ಒಂದು ಸಿನಿಮಾವನ್ನು ಸುಶಾಂತ್ ಗೆ ಆಫರ್ ಮಾಡಿ ನಂತರ ಮೋಸ ಮಾಡಿದರು. ಆಗ ಸುಶಾಂತ್ ಬಹಳ ನೊಂದಿಕೊಂಡಿದ್ದರು. ಅದಾದ ಬಳಿಕ ಕೆಲವು ಪಿಆರ್ ಹಾಗೂ ಖರೀದಿ ಮಾಧ್ಯಮಗಳು ಸುಶಾಂತ್ ಬಗ್ಗೆ ಅಪಪ್ರಚಾರಕ್ಕೆ ಇಳಿದವು. ಸುಶಾಂತ್ ಒಬ್ಬ ಅತ್ಯಾಚಾರಿ, ಮಾದಕ ವ್ಯಸನಿ ಎಂದು ಪ್ರಚಾರ ಮಾಡಿದವರು ಎಂದಿದ್ದಾರೆ ಕಂಗನಾ.

ಸುಶಾಂತ್ ಜೀವನಕ್ಕೆ ಮಹೇಶ್ ಭಟ್ ಎಂಟ್ರಿಯಾದರು: ಕಂಗನಾ
ಆ ನಂತರ ಸುಶಾಂತ್ ಜೀವನಕ್ಕೆ ಮಹೇಶ್ ಭಟ್ ಎಂಟ್ರಿಯಾದರು. ಪರ್ವೀಣ್ ಬಾಬಿ ರೀತಿಯಲ್ಲಿಯೇ ಆತನನ್ನು ಡಿಪ್ರೆಶನ್‌ಗೆ ತಳ್ಳಲು ಪ್ರಾರಂಭಿಸಿದ್ದರು. ಖಿನ್ನತೆಗೆ ಒಳಗಾದವರೆಲ್ಲರೂ ಪರ್ವೀಣ್ ಬಾಬಿ ಹಾದಿಯನ್ನೇ ಹಿಡಿಯುವಂತಾಗಿದ್ದರೆ, ನಿಮ್ಮ ಮಗಳು ಶಹೀನ್ ಸಹ ಅದೇ ಹಾದಿ ಹಿಡಿಯಬೇಕಿತ್ತಲ್ಲವೇ ಎಂದು ಕಂಗನಾ ಪ್ರಶ್ನಿಸಿದ್ದಾರೆ. ಹಲವು ವರ್ಷಗಳ ಹಿಂದೆ ಪರ್ವೀನ್ ಬಾಬಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹೇಶ್ ಭಟ್ ಪರ್ವೀನ್‌ಗೆ ಬಹು ಆಪ್ತರಾಗಿದ್ದರು.

'ಸುಶಾಂತ್, ಪರ್ವೀಣ್ ಬಾಬಿ ಥರಹ ಸಾಯುತ್ತಾನೆ ಎಂದಿದ್ದ ಮಹೇಶ್ ಭಟ್'
'ಸುಶಾಂತ್, ಪರ್ವೀಣ್ ಬಾಬಿ ಥರಹ ಸಾಯುತ್ತಾನೆ ಎಂದು ನಾನು ಹೇಳಿದ್ದೆ' ಮಹೇಶ್ ಭಟ್ ಸ್ವತಃ ಹೇಳಿಕೊಂಡಿದ್ದರು. ತಾವೇ ಸುಶಾಂತ್ ಗೆ ಚಿಕಿತ್ಸೆ ನೀಡಿದ್ದಾಗಿ ಸಹ ಮಹೇಶ್ ಭಟ್ ಹೇಳಿಕೊಂಡಿದ್ದರು. ಇವರೆಲ್ಲಾ ಒಟ್ಟಿಗೆ ಸೇರಿ ಸುಶಾಂತ್ ಅನ್ನು ಕೊಂದರು ಎಂದಿದ್ದಾರೆ ಕಂಗನಾ ರಣೌತ್.