For Quick Alerts
  ALLOW NOTIFICATIONS  
  For Daily Alerts

  ಇದು ತಲೆ ಕಡಿಯುವ ಸಮಯ: ಹಿಂಸೆಗೆ ಕರೆ ನೀಡಿದ ಕಂಗನಾ

  |

  ನಟಿ ಕಂಗನಾ ರಣೌತ್ ಮತ್ತೆ ಹೊಣೆಗೇಡಿ ಟ್ವೀಟ್‌ ಮಾಡಿದ್ದಾರೆ. ಜವಾಬ್ದಾರಿಹೀನ ದ್ವೇಷ ಕಾರುವ ಟ್ವೀಟ್‌ಗಳನ್ನು ಮಾಡುವುದು ಕಂಗನಾ ಗೆ ಮಾಮೂಲಾಗಿಬಿಟ್ಟಿದೆ. ತಮ್ಮ ಟ್ವೀಟ್‌ಗಳಿಂದಾಗಿಯೇ ಪ್ರಕರಣವನ್ನೂ ಎದುರಿಸುತ್ತಿದ್ದಾರೆ ಕಂಗನಾ.

  ಇದೀಗ ಹಿಂಸೆಗೆ ಪ್ರೇರಣೆ ನೀಡುವಂತಹಾ ಟ್ವೀಟ್ ಮಾಡಿದ್ದಾರೆ ನಟಿ ಕಂಗನಾ ರಣೌತ್, ಸೈಫ್ ಅಲಿ ಖಾನ್ ನಟನೆಯ ತಾಂಡವ್ ವೆಬ್ ಸರಣಿ ವಿವಾದದ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ 'ತಲೆ ಕಡಿಯುವಂತೆ' ಕರೆ ನೀಡಿದ್ದಾರೆ.

  ಸೈಫ್ ಅಲಿ ಖಾನ್, ಡಿಂಪಲ್ ಕಪಾಡಿಯಾ, ಕ್ರಿತಿಕಾ ಕಾಮ್ರಾ, ಸರಾ ಜೇನ್ ಇನ್ನೂ ಹಲವರು ನಟಿಸಿರುವ ತಾಂಡವ್ ವೆಬ್ ಸರಣಿಯು ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದ್ದು, ಆ ಸಂಬಂಧ ಕಂಗನಾ ಟ್ವೀಟ್ ಮಾಡಿದ್ದಾರೆ.

  'ಕೃಷ್ಣನೂ ಸಹ ಶಿಶುಪಾಲನ 99 ತಪ್ಪುಗಳನ್ನು ಮಾತ್ರ ಕ್ಷಮಿಸಿದ್ದ. ಮೊದಲು ಶಾಂತಿ ನಂತರ ಕ್ರಾಂತಿ. ಅವರ ತಲೆ ಕಡಿಯುವ ಸಮಯ ಬಂದಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ ಕಂಗನಾ.

  ಕಂಗನಾ ಟ್ವೀಟ್‌ ಬಗ್ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್, ಕಂಗನಾ ರ ಹಿಂಸೆಗೆ ಪ್ರೇರಣೆ ನೀಡುತ್ತಿರುವ ಟ್ವೀಟ್ ಅನ್ನು ಡಿಲೀಟ್ ಮಾಡಬೇಕು ಎಂದು ಸಹ ಒತ್ತಾಯಿಸಿದ್ದಾರೆ.

  ಆದರೆ ತಮ್ಮ ಟ್ವೀಟ್‌ಗೆ ಸ್ಪಷ್ಟನೆ ನೀಡಿರುವ ಕಂಗನಾ, ''ಟೇಕ್ಸ್ ದೇರ್ ಹೆಡ್ಸ್ ಆಫ್'' ಎಂಬ ತಮ್ಮ ಟ್ವೀಟ್‌ ನ ಅರ್ಥ ತಲೆ ಕಡಿಯಿರಿ ಎಂದಲ್ಲ. ನಾನು ಯಾರ ತಲೆಯನ್ನೂ ಕಡಿಯಲು ಹೇಳಿಲ್ಲ. ಕೀಟಗಳನ್ನು ಕೊಲ್ಲಲು ಕೀಟನಾಶಕ ಸಾಕು ಎಂಬುದು ನನಗೆ ಗೊತ್ತಿದೆ' ಎಂದಿದ್ದಾರೆ ಕಂಗನಾ.

  ಬಾಕ್ಸರ್ ಮುಂದೆ ಘರ್ಜಿಸಲಿದ್ದಾರೆ ಉಪೇಂದ್ರ | Filmibeat Kannada

  ಕಂಗನಾ ರಣೌತ್ ಈ ಹಿಂದೆ ಸಹ ತಮ್ಮ ಟ್ವೀಟ್‌ಗಳಿಂದಾಗಿ ವಿರೋಧ ಎದುರಿಸಿದ್ದರು. ಹಿರಿಯ ರೈತ ಮಹಿಳೆಯನ್ನು 'ಕೆಲವೇ ನೂರು ರೂಪಾಯಿಗಳಿಗೆ ಈ ಮಹಿಳೆ ಸಿಗುತ್ತಾಳೆ' ಎಂದು ಅಶ್ಲೀಲ ಅರ್ಥ ಬರುವಂತೆ ಟ್ವೀಟ್ ಮಾಡಿದ್ದರು. ರೈತರನ್ನು ಭಯೋತ್ಪಾದಕರಿಗೆ ಸಹ ಹೋಲಿಸಿದ್ದರು ಕಂಗನಾ.

  English summary
  Actress Kangana Ranaut made violent tweet about Tandav web series. Gave clarification about her tweet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X