For Quick Alerts
  ALLOW NOTIFICATIONS  
  For Daily Alerts

  ಕೊಲೆ ಬೆದರಿಕೆ ಬಂದಿತ್ತು; ಕೊರೊನಾ ಸೋಂಕು ತಗುಲಿದ್ದ ಭಾರತದ ಮೊದಲ ಸೆಲೆಬ್ರಿಟಿ ಕನಿಕಾ ಭಾವುಕ ನುಡಿ

  |

  2020ರಲ್ಲಿ ಗೂಗಲ್ ನಲ್ಲಿ ಅತ್ಯಂತ ಹುಡುಕಲ್ಪಟ್ಟ ವ್ಯಕ್ತಿಗಳಲ್ಲಿ ಬಾಲಿವುಡ್ ಖ್ಯಾತ ಗಾಯಕಿ ಕನಿಕಾ ಕಪೂರ್ ಕೂಡ ಒಬ್ಬರು. ಕನಿಕಾ ಕಪೂರ್ ಕೋವಿಡ್ ಪಾಸಿಟಿವ್ ಬಂದ ಬಳಿಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಭಾರತದಲ್ಲಿ ಕೊರೊನಾ ಸೋಂಕಿಗೆ ತುತ್ತಾದ ಮೊದಲ ಸೆಲೆಬ್ರಿಟಿ ಕನಿಕಾ ಕಪೂರ್ ವಿರುದ್ಧ ಭಾರಿ ಆಕ್ರೋಶ ಕೂಡ ವ್ಯಕ್ತವಾಗಿತ್ತು.

  ಆಗಿನ್ನು ಕೊರೊನಾ ಭಾರತಕ್ಕೆ ಎಂಟ್ರಿ ಕೊಟ್ಟಿತ್ತು. ಕೊರೊನಾ ಭಯದಲ್ಲಿ ಇಡೀ ದೇಶ ನಲುಗಿಹೋಗಿತ್ತು. ಕೊರೊನಾ ಅಂದರೆ ಏನು? ಲಾಕ್ ಡೌನ್ ಅಂದರೆ ಏನು ಎನ್ನುವ ಗೊಂದಲದಲ್ಲೇ ಇಡೀ ದೇಶ ಸಿಲುಕಿತ್ತು. ಸೆಲೆಬ್ರಿಟಿಗಳೆಲ್ಲ ಸುರಕ್ಷಿತರಾಗಿ, ಮನೆಯಲ್ಲೇ ಇರಿ, ಹಾಗಿರಿ ಹೀಗಿರಿ ಎನ್ನುವ ಸಂದೇಶ ರವಾನಿಸುತ್ತಿದ್ದರು.

  ಬಾಲಿವುಡ್ ಗಾಯಕಿ ಕನಿಕಾ ಕಪೂರ್‌ಗೆ ಮೂರನೇ ಬಾರಿಯೂ ಕೊರೊನಾ ಪಾಸಿಟಿವ್

  ಈ ಸಮಯದಲ್ಲಿ ಬಾಲಿವುಡ್‌ನ ಖ್ಯಾತ ಗಾಯಕಿ ಕನಿಕಾ ಕಪೂರ್ ಕೊರೊನಾ ಸೋಂಕಿಗೆ ತುತ್ತಾಗುತ್ತಾರೆ. ಲಂಡನ್ ನಿಂದ ಭಾರತಕ್ಕೆ ವಾಪಸ್ ಆದ ಕನಿಕಾ ಪರೀಕ್ಷೆ ಬಳಿಕ ಕೊರೊನಾ ಪಾಸಿಟಿವ್ ವರದಿ ಬರುತ್ತೆ. ಕೊರೊನಾ ಉತ್ತುಂಗದಲ್ಲಿದ್ದ ಆ ಸಮಯದಲ್ಲಿ ಕನಿಕಾ ವರದಿ ಇಡೀ ದೇಶಕ್ಕೆ ಶಾಕ್ ನೀಡಿತ್ತು. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕನಿಕಾ ವಿರುದ್ಧ ಟೀಕಾಸ್ತ್ರಗಳ ಸುರಿಮಳೆ ಗೈದರು. ಮುಂದೆ ಓದಿ...

  ಎದುರಿಸಿದ ಕಷ್ಟದ ಬಗ್ಗೆ ಕನಿಕಾ ಪ್ರತಿಕ್ರಿಯೆ

  ಎದುರಿಸಿದ ಕಷ್ಟದ ಬಗ್ಗೆ ಕನಿಕಾ ಪ್ರತಿಕ್ರಿಯೆ

  ಕನಿಕಾ ಅವರ ಅಜಾಗರೂಕತೆಯೇ ಕಾರಣವೆಂದು ಸಾರ್ವಜನಿಕರು ಜರಿದಿದ್ದರು. ಕೊರೊನಾಗಿಂತ ಕನಿಕಾ ಟೀಕೆಗಳಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆ ಸಮಯದಲ್ಲಿ ಕನಿಕಾ ಎದುರಿಸಿದ ಸಂಕಷ್ಟಗಳ ಬಗ್ಗೆ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಕನಿಕಾ ಬೇಸರ ವ್ಯಕ್ತಪಡಿಸಿದ್ದಾರೆ.

  ನನಗೆ ನನ್ನ ಮಕ್ಕಳಿಗೆ ಕೊಲೆ ಬೆದರಿಕೆ ಬಂದಿತ್ತು

  ನನಗೆ ನನ್ನ ಮಕ್ಕಳಿಗೆ ಕೊಲೆ ಬೆದರಿಕೆ ಬಂದಿತ್ತು

  'ಈ ಹಂತದಲ್ಲಿ ನಾನು ತುಂಬಾ ನೊಂದು ಹೋಗಿದ್ದೆ, ಯಾಕೆಂದರೆ ಕೊಲೆ ಬೆದರಿಕೆ ಕರೆಗಳು ಬರುತ್ತಿತ್ತು. ನಿಮ್ಮಂತೆ ನಿಮ್ಮ ಮಕ್ಕಳನ್ನು ಕಲ್ಲುತ್ತೇವೆ ಎಂದು ಬೆದರಿಸುತ್ತಿದ್ದರು. ಅನೇಕ ಕೆಟ್ಟ ಸಂದೇಶಗಳನ್ನು ಕಳುಹಿಸುತ್ತಿದ್ದರು. ನಿನ್ನ ವೃತ್ತಿ ಜೀವನ ಮುಗಿಯಿತು ಎಂದು ಅನೇಕರು ಹೆದರಿಸುತ್ತಿದ್ದರು. ಆದರೆ ಯಾರಿಗೂ ಗೊತ್ತಿಲ್ಲ ಸಿಂಪಲ್ ತಾಯಿಯಾಗಿ ಮಕ್ಕಳಿಂದ ದೂರ ಉಳಿದು ತುಂಬಾ ಕಷ್ಟ ಪಟ್ಟು ಈ ಜೀವನ ಕಟ್ಟಿಕೊಂಡಿದ್ದೇನೆ' ಎಂದು ಹೇಳಿದ್ದಾರೆ.

  ಗೂಗಲ್ ನೀಡಿದ ಪಟ್ಟ ಸಂತೋಷ ತಂದಿಲ್ಲ

  ಗೂಗಲ್ ನೀಡಿದ ಪಟ್ಟ ಸಂತೋಷ ತಂದಿಲ್ಲ

  ಕಷ್ಟದ ಸಮಯದಲ್ಲಿ ಜೊತೆಯಲ್ಲಿ ನಿಂತು, ಅದರಿಂದ ಹೊರಬರಲು ಸಹಾಯ ಮಾಡಿದ ಕುಟುಂಬಕ್ಕೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಗೂಗಲ್‌ನಲ್ಲಿ ಅತೀಯಾದ ಹುಡುಕಲ್ಪಟ್ಟ ಸೆಲೆಬ್ರಿಟಿ ಎನ್ನುವ ಬಿರುದಿನ ಬಗ್ಗೆ ಮಾತನಾಡಿ, ಯಾವುದೇ ಆಚರಣೆ, ಸಂತೋಷ ಇರಲಿಲ್ಲ. ಯಾಕೆಂದರೆ ಒಳ್ಳೆಯ ಕಾರಣಕ್ಕೆ ಹುಡುಕಿದಲ್ಲ ಹಾಗಾಗಿ ಎಂದಿದ್ದಾರೆ.

  ಬಾಲಿವುಡ್ ಗಾಯಕಿಗೆ ಕೊರೊನಾ ವೈರಸ್: ಕನಿಕಾ ಉದ್ಧಟತನದಿಂದ ಶುರುವಾಯ್ತು ಆತಂಕ

  ಅಮೆರಿಕದಲ್ಲಿ ಒಂದು ದಿನ ಮುಂಚಿತವಾಗಿ ರಿಲೀಸಾಗ್ತಿದೆ ಯುವರತ್ನ ಸಿನಿಮಾ | Yuvarathnaa | Filmibeat Kannada
  ಪಾರ್ಟಿಯಲ್ಲಿ ಭಾಗಿಯಾಗಿ ಗೊಂದಲ ಸೃಷ್ಟಿಸಿದ್ದ ಕನಿಕಾ

  ಪಾರ್ಟಿಯಲ್ಲಿ ಭಾಗಿಯಾಗಿ ಗೊಂದಲ ಸೃಷ್ಟಿಸಿದ್ದ ಕನಿಕಾ

  ಕನಿಕಾ ಕಪೂರ್ ಕಳೆದ ವರ್ಷ ಲಂಡನ್‌ನಿಂದ ವಾಪಸ್ ಆದ ಬಳಿಕ ಉದ್ದೇಶಪೂರ್ವಕವಾಗಿ ಕ್ವಾರಂಟೈನ್ ಆಗದೆ, ಪ್ರಯಾಣದ ಇತಿಹಾಸ ಮರೆಮಾಚಲು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನುವ ಟೀಕೆ ಎದುರಿಸಿದ್ದರು. ಅನೇಕ ಕಡೆ ಓಡಾಡಿದ್ದ ಕನಿಕಾ ಬಳಿಕ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಬಳಿಕ ಕನಿಕಾ ವಿರುದ್ಧ ಅನೇಕ ಎಫ್ಐಆರ್‌ಗಳು ದಾಖಲಾಗಿದೆ.

  English summary
  Bollywood singer Kanika Kapoor says kids received death threats after Covid-19 controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X